ಭಾರತಕ್ಕೆ ಟೊಮೆಟೊ ಪೂರೈಸಲು ಸಿದ್ಧವಾಗಿದೆ ನೇಪಾಳ

ನವದೆಹಲಿ: ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ, ದೇಶವು ಟೊಮೆಟೊ ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈಗ, ಭಾರತಕ್ಕೆ ಟೊಮೆಟೊ ಪೂರೈಸಲು ನೇಪಾಳ ಸಿದ್ಧವಾಗಿದೆ. ಭಾರತ ಕೂಡ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿದ್ದಾರೆ.
ಈಗಾಗಲೇ ನೇಪಾಳದಿಂದ ಭಾರತಕ್ಕೆ ಟೊಮೆಟೊ ರಫ್ತಾಗುತ್ತಿದೆ. ಅದನ್ನು ಧೀರ್ಘಾವಧಿಗೆ ವಿಸ್ತರಿಸಲು ಮತ್ತು ಬೃಹತ್ ಪ್ರಮಾಣದಲ್ಲಿ ರಫ್ತು ಮಾಡಲು ನೇಪಾಳ ಇಚ್ಛಿಸಿದೆ. ಅದಕ್ಕಾಗಿ, ಭಾರತದ ಮಾರುಕಟ್ಟೆಗೆ ಸುಲಭವಾಗಿ ಪ್ರವೇಶಿಸಲು ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕೆಂದು ನೇಪಾಳ ಬೇಡಿಕೆ ಇಟ್ಟಿದೆ ಎಂದು ಕೃಷಿ ಸಚಿವಾಲಯದ ವಕ್ತಾರರು ಹೇಳಿದ್ದಾರೆ.
ನೇಪಾಳದ ಕಠ್ಮಂಡು ಕಣಿವೆಯ ಮೂರು ಜಿಲ್ಲೆಗಳಾದ ಕಠ್ಮಂಡು, ಲಲಿತ್‌ಪುರ್ ಮತ್ತು ಭಕ್ತಾಪುರದಲ್ಲಿ ಹೇರಳವಾಗಿ ಟೊಮೆಟೊ ಬೆಳೆಯಲಾಗುತ್ತದೆ. ಆ ಟೊಮೆಟೊಗಳಲ್ಲಿ ಬಹುಪಾಲನ್ನು ಭಾರತಕ್ಕೆ ರಫ್ತು ಮಾಡಲು ನೇಪಾಳ ಸಿದ್ಧವಾಗಿದೆ” ಎಂದು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಅಭಿವೃದ್ಧಿ ಮಂಡಳಿಯ ಉಪ ನಿರ್ದೇಶಕಿ ಬಿನಯಾ ಶ್ರೇಷ್ಠಾ ತಿಳಿಸಿದ್ದಾರೆ.

ಒಂದೂವರೆ ತಿಂಗಳ ಹಿಂದೆ, ನೇಪಾಳದ ರೈತರು ತಾವು ಬೆಳೆದ ಟೊಮೆಟೊಗಳಿಗೆ ಉತ್ತಮ ಬೆಲೆ ಸಿಗದೆ ಕಂಗಾಲಾಗಿದ್ದರು. ಕಠ್ಮಂಡುವಿನಲ್ಲಿ ಟೊಮೆಟೊ ಕೆ.ಜಿಗೆ 10 ರೂ. ಬೆಲೆಯೂ ಇರಲಿಲ್ಲ. ಬೆಲೆ ಇಳಿಕೆಯಿಂದಾಗಿ ಸುಮಾರು 60,000 ರಿಂದ 70,000 ಕೆಜಿ ಟೊಮೆಟೊಗಳನ್ನು ಕಠ್ಮಂಡುವಿನ ತರಕಾರಿ ಮಾರುಕಟ್ಟೆ ಬಳಿಯ ರಸ್ತೆಗಳಲ್ಲಿ ಸುರಿದಿದ್ದರು ಎಂದು ಹೇಳಲಾಗಿದೆ.
ನಂತರದಲ್ಲಿ, ನೇಪಾಳದ ಕೆಲವು ವ್ಯಾಪಾರಿಗಳು ಅಕ್ರಮ ಮಾರ್ಗಗಳ ಮೂಲಕ ಭಾರತಕ್ಕೆ ಟೊಮೆಟೊ ರಫ್ತು ಮಾಡಲು ಆರಂಭಿಸಿದ್ದರು. ಆ ಬಳಿಕ, ಕಠ್ಮಂಡುವಿನಲ್ಲಿ ಟೊಮೆಟೊ ಬೆಲೆ ನಾಲ್ಕು ಪಟ್ಟು ಹೆಚ್ಚಾಯಿತು ಎಂದು ಅಲ್ಲಿನ ಮಾರುಕಟ್ಟೆ ವಿಶ್ಲೇಷಕರು ಹೇಳಿದ್ದಾರೆ.
ಜುಲೈನಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ನೇಪಾಳದ ಕೃಷಿ ಸಚಿವ ಬೆದುರಾಮ್ ಭೂಶಾಲ್ ಭಾರತದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರೊಂದಿಗೆ ಟೊಮೆಟೊ ಮತ್ತು ಇತರ ಕೃಷಿ ಉತ್ಪನ್ನಗಳ ಮಾರುಕಟ್ಟೆ ವ್ಯವಹಾರದ ಬಗ್ಗೆ ಚರ್ಚೆ ನಡೆಸಿದ್ದಾರೆ. ಎಂದು ಕೃಷಿ ಸಚಿವಾಲಯದ ವಕ್ತಾರ ಶಬ್ನಮ್‌ ಶಿವಕೋಟಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement