‘ಡಬಲ್ ಐಸ್ಮಾರ್ಟ್’ ಸಿನೆಮಾದ ಕತ್ತಿವರಸೆಯ ದೃಶ್ಯದ ಚಿತ್ರೀಕರಣದ ವೇಳೆ ನಟ ಸಂಜತ ದತ್ತಗೆ ಗಾಯ ; ವರದಿ

ಪೂರಿ ಜಗನ್ನಾಥ ಅವರ ಮುಂದಿನ ಸಿನೆಮಾ ‘ಡಬಲ್ ಐಸ್ಮಾರ್ಟ್’ ಚಿತ್ರೀಕರಣದಲ್ಲಿ ನಟ ಸಂಜಯ ದತ್ ಅವರು ಸೆಟ್‌ನಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಪಿಂಕ್ವಿಲ್ಲಾದಲ್ಲಿನ ವರದಿಯ ಪ್ರಕಾರ, ಅವರು ಹೊಡೆದಾಟದ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು.
‘ಅವರು ಖಡ್ಗ ಹಿಡಿದ ಫೈಟಿಂಗ್ ಅನ್ನು ಒಳಗೊಂಡಿರುವ ದೊಡ್ಡ ಆಕ್ಷನ್ ದೃಶ್ಯಕ್ಕಾಗಿ ಚಿತ್ರೀಕರಣ ನಡೆಸುತ್ತಿದ್ದರು ಮತ್ತು ಆ ಸಂದರ್ಭದಲ್ಲಿ ಗಾಯಗೊಂಡರು. ಅವರ ತಲೆಗೆ ಒಂದೆರಡು ಹೊಲಿಗೆ ಹಾಕಲಾಗಿದೆ, ಆದರೆ ವೃತ್ತಿಪರ ಸಂಜಯ ದತ್‌ ಅವರು ತಕ್ಷಣವೇ ಸೆಟ್‌ಗೆ ಮರಳಿದರು ಮತ್ತು ಶೂಟಿಂಗ್ ಅನ್ನು ಪುನರಾರಂಭಿಸಿದರು ಎಂದು ವರದಿಯಾಗಿದೆ. ‘ಡಬಲ್ ಐಸ್ಮಾರ್ಟ್’ ತಂಡ ಸದ್ಯ ಬ್ಯಾಂಕಾಕ್‌ನಲ್ಲಿದೆ. ಸಂಜಯ ದತ್ ಅವರು ರಾಮ ಪೋತಿನೇನಿ ಅವರೊಂದಿಗೆ ತೆರೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು.
ಜುಲೈನಲ್ಲಿ, ಸಂಜಯ ದತ್‌ ಅವರು ರಾಮ ಪೋತಿನೇನಿ ಅಭಿನಯದ ತಮ್ಮ ನೋಟವನ್ನು ಅನಾವರಣಗೊಳಿಸಿದ್ದರು. ಈ ವೈಜ್ಞಾನಿಕ ಮಾಸ್ ಎಂಟರ್‌ಟೈನರ್‌ನಲ್ಲಿ ಅವರು ಬಿಗ್ ಬುಲ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ‘ಡಬಲ್ ಐಸ್ಮಾರ್ಟ್’ ಬ್ಲಾಕ್ಬಸ್ಟರ್ ‘ಐಸ್ಮಾರ್ಟ್ ಶಂಕರ’ ಎಂಬುದರ ಮುಂದುವರಿದ ಭಾಗವಾಗಿದೆ. ಈ ಚಿತ್ರವನ್ನು ಪುರಿ ಕನೆಕ್ಟ್ಸ್ ಬ್ಯಾನರ್ ಅಡಿಯಲ್ಲಿ ಪೂರಿ ಜಗನ್ನಾಥ ಮತ್ತು ಚಾರ್ಮಿ ಕೌರ್ ನಿರ್ಮಿಸುತ್ತಿದ್ದಾರೆ. ಶೀಘ್ರದಲ್ಲೇ ಚಿತ್ರದ ಇತರ ಪಾತ್ರವರ್ಗ ಮತ್ತು ಸಿಬ್ಬಂದಿಯನ್ನು ನಿರ್ಮಾಪಕರು ಬಹಿರಂಗಪಡಿಸಲಿದ್ದಾರೆ.
‘ಡಬಲ್ ಇಸ್ಮಾರ್ಟ್’ ಮಾರ್ಚ್ 8, 2024 ರಂದು ಮಹಾ ಶಿವರಾತ್ರಿಗೆ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement