ಕರ್ನೂಲ್: ಹಿಂದೂಗಳ ಪವಿತ್ರ ಯಾತ್ರಾತಾಣ ತಿರುಮಲದಲ್ಲಿ ಚಿರತೆ ದಾಳಿಗೆ ಬಾಲಕಿ ಬಲಿಯಾದ ಬೆನ್ನಲ್ಲೇ ಈಗ ಆಂಧ್ರ ಪ್ರದೇಶದ ಮತ್ತೊಂದು ಯಾತ್ರಾತಾಣ ಶ್ರೀಶೈಲಂನಲ್ಲೂ ಚಿರತೆಯ ಆತಂಕ ಎದುರಾಗಿದೆ. ಶ್ರೀಶೈಲಂ ಹೊರವರ್ತುಲ ರಸ್ತೆಯ ಬಳಿ ಮಂಗಳವಾರ ಮುಖ್ಯ ದೇವಸ್ಥಾನದ ಸಮೀಪವಿರುವ ಕಾಟೇಜ್‌ಗಳಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ವರದಿಯಾಗಿದ್ದು, ನಗರದಲ್ಲಿ ಭೀತಿ ಆವರಿಸಿದೆ.
ಸೋಮವಾರ ರಾತ್ರಿ ಸ್ಫೂರ್ತಿ ಕೇಂದ್ರದ ಸುತ್ತಮುತ್ತಲ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅದರ ಚಲನವಲನವನ್ನು ಭಕ್ತರು ಸೆರೆ ಹಿಡಿದಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ರೀಶೈಲಂ ಹೊರವರ್ತುಲ ರಸ್ತೆಯುದ್ದಕ್ಕೂ ವಿಶೇಷವಾಗಿ ವಿಶೇಷವಾಗಿ ಶಿವಾಜಿ ಸ್ಫೂರ್ತಿ ಕೇಂದ್ರದ ಬಳಿ ಒಆರ್‌ಆರ್ ಪ್ರದೇಶದಲ್ಲಿ ಚಿರತೆ ಹೆಚ್ಚಾಗಿ ಕಾಣಿಸಿಕೊಂಡಿದೆ, ಸುಮಾರು ಐದು ಚಿರತೆಗಳು ರಿಂಗ್ ರಸ್ತೆ ಮತ್ತು ಸುತ್ತಮುತ್ತ ನುಗ್ಗಿವೆ ಎನ್ನಲಾಗಿದೆ.
ಅರಣ್ಯಾಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಸ್ಥಳೀಯರ ಸುರಕ್ಷತೆಗೆ ಕ್ರಮಕೈಗೊಂಡಿದ್ದಾರೆ. ಈ ಪ್ರದೇಶದಲ್ಲಿ ಹಲವಾರು ಚಿರತೆಗಳ ಉಪಸ್ಥಿತಿಯ ಹೊರತಾಗಿಯೂ, ಕಾಡು ಪ್ರಾಣಿಗಳು ಅರಣ್ಯ ವಲಯದಲ್ಲಿ ಉಳಿದಿರುವುದರಿಂದ ಭಕ್ತರಿಗೆ ತಕ್ಷಣದ ಅಪಾಯವಿಲ್ಲ ಎಂದು ಅವರು ಹೇಳಿದ್ದಾರೆ.
ಕಳೆದ ಭಾನುವಾರ ಶ್ರೀಶೈಲ ದೇವಸ್ಥಾನದ ಬಳಿ ಕರಡಿಯೊಂದು ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಆತಂಕ ಮೂಡಿಸಿತ್ತು. ಯಾವುದೇ ಭಯಪಡುವ ಅಗತ್ಯವಿಲ್ಲ ಎಂದು ಶ್ರೀಶೈಲಂ ಅರಣ್ಯ ವಿಭಾಗದ ಅಧಿಕಾರಿ ವಿ.ನರಸಿಂಹುಲು ತಿಳಿಸಿದ್ದಾರೆ. ಆದಾಗ್ಯೂ, ಭಕ್ತರು ಮತ್ತು ಸ್ಥಳೀಯ ಜನರು ಅರಣ್ಯ ಪ್ರದೇಶಕ್ಕೆ ಹೋಗಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ