ಬೆಂಗಳೂರು: ನಗರದಲ್ಲಿ ನಿರ್ಮಾಣಗೊಂಡಿರುವ ದೇಶದ ಮೊದಲ 3ಡಿ-ಮುದ್ರಿತ ಅಂಚೆ ಕಚೇರಿಯನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರು ಶುಕ್ರವಾರ (ಆಗಸ್ಟ್ 18) ಉದ್ಘಾಟಿಸಲಿದ್ದಾರೆ.
‘ಕೇಂಬ್ರಿಡ್ಜ್ ಲೇಔಟ್ ಪಿಒ’ ಎಂದು ಹೆಸರಿಸಡಿಲಾದ ಈ ಕಚೇರಿಯನ್ನು ಅವರು ಬೆಳಗ್ಗೆ ಉದ್ಘಾಟಿಸಲಿದ್ದಾರೆ. ಕೇವಲ 44 ದಿನಗಳಲ್ಲಿ ಈ 3ಡಿ ತಂತ್ರಜ್ಞಾನದ ಮೊದಲ ಅಂಚೆ ಕಚೇರಿಯನ್ನು ನಿರ್ಮಿಸಲಾಗಿದೆ.
L&T ನಿರ್ಮಿಸುತ್ತಿರುವ ಕಟ್ಟಡವು ಸುಮಾರು 1,100 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ. 3ಡಿ ಕಾಂಕ್ರೀಟ್ ಮುದ್ರಣದ ವೆಚ್ಚವು ಸುಮಾರು 26 ಲಕ್ಷ ರೂಪಾಯಿ ಆಗಿದ್ದು ಪೇವರ್, ಡ್ರೈನೇಜ್ ಸಂಪರ್ಕ ಮತ್ತು ನೀರಿನ ಸಂಪರ್ಕದಂತಹ ಇತರ ವೆಚ್ಚಗಳನ್ನು ಅಂಚೆ ಇಲಾಖೆಯ ಸಿವಿಲ್ ವಿಂಗ್ ಸುಮಾರು 40 ಲಕ್ಷ ರೂಪಾಯಿ ವೆಚ್ಚ ಮಾಡಿದೆ ಎನ್ನಲಾಗಿದೆ. ಈ ಕಟ್ಟಡ ನಿರ್ಮಾಣ ಕಾರ್ಯವು ಮಾರ್ಚ್ 21 ರಂದು ಆರಂಭಗೊಂಡಿತ್ತು. ಇದಾಗಿ 44 ದಿನದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಮುಗಿದಿದೆ. ಕಟ್ಟಡದ ನಿರ್ಮಾಣ ಮೇ 3ರೊಳಗೆ ಪೂರ್ಣಗೊಂಡಿದ್ದರೂ, ಒಳಚರಂಡಿ ಮತ್ತು ನೀರಿನ ಜಾಲವನ್ನು ರಚಿಸುವುದು ಎರಡು ತಿಂಗಳು ಬೇಕಾಗಿದೆ.
ಔಪಚಾರಿಕವಾಗಿ 3ಡಿ ಮುದ್ರಿತ ಕಚೇರಿ ಆರಂಭದ ನಂತರ ಹಲಸೂರು ಬಜಾರ್‌ನಲ್ಲಿರುವ ಪ್ರಸ್ತುತ ಅಂಚೆ ಕಚೇರಿಯನ್ನು ಮುಚ್ಚಲಾಗುವುದು ಮತ್ತು ಸಿಬ್ಬಂದಿ ಮತ್ತು ಸಾಮಗ್ರಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ನಿಮ್ಮ ಕಾಮೆಂಟ್ ಬರೆಯಿರಿ