ಧಾರವಾಡ: ಟ್ಯಾಂಕರ್​ನಿಂದ ಅನಿಲ ಸೋರಿಕೆ: ಧಾರವಾಡ-ಬೆಳಗಾವಿ ರಾಷ್ಟ್ರೀಯ ಹೆದ್ದಾರಿ ಬಂದ್‌, ವಿದ್ಯುತ್ ಸಂಪೂರ್ಣ ಕಡಿತ

ಧಾರವಾಡ: ಬೇಲೂರು ಕೈಗಾರಿಕಾ ಪ್ರದೇಶದಲ್ಲಿ ಎಲ್​ಪಿಜಿ ಟ್ಯಾಂಕರಿನಿಂದ ಗ್ಯಾಸ್ ಸೋರಿಕೆ ಆಗುತ್ತಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ವಿದ್ಯುತ್ ಸಂಪೂರ್ಣ ಕಡಿತಗೊಳಿಸಿದ್ದಲ್ಲದೆ ಜನರ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿದೆ.
ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಬೆಳಗಾವಿ ಕಡೆಯಿಂದ ಧಾರವಾಡಕ್ಕೆ ಬರುತ್ತಿದ್ದ ಗ್ಯಾಸ್‌ ಟ್ಯಾಂಕರ್‌ ಬೇಲೂರು ಬಳಿಯ ಅಂಡರ್​ಪಾಸ್​ನಲ್ಲಿ ಸಿಲುಕಿಕೊಂಡ ನಂತರ ಗ್ಯಾಸ್‌ ಸೋರಿಕೆಯ ಭೀತಿ ಎದುರಾಗಿದೆ. ಲಾರಿಯನ್ನು ಹೈಕೋರ್ಟ್ ಬಳಿಯ ಹೆದ್ದಾರಿಯ ಅಂಡರ್ ಪಾಸ್ ನಲ್ಲಿ ಚಾಲಕ ದಾಟಿಸಲು ಹೋಗಿದ್ದಾನೆ. ಆದರೆ ಅಂಡರ್ ಪಾಸ್ ಚಿಕ್ಕದಾಗಿರುವ ಕಾರಣ ಬೃಹಲ್‌ ಲಾರಿ ಸಿಲುಕಿಕೊಂಡಿದೆ. ಲಾರಿ ಹೊರ ತೆಗೆಯಲು ಚಾಲಕ ಪ್ರಯತ್ನಿಸಿದ ವೇಳೆ ಟ್ಯಾಂಕರ್ ಗೆ ಹಾನಿಯಾಗಿ ಅನಿಲ ಸೋರಿಕೆ ಆರಂಭಗೊಂಡಿದೆ.
ಸುದ್ದಿ ಹಬ್ಬುತ್ತಿದ್ದಂತೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. ಮುನ್ನೆಚ್ಚರಿಕೆ ಕ್ರಮವಾಗಿ ಹೆದ್ದಾರಿ ಮೇಲೆ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸಂಪೂರ್ಣ ಕಡಿತಗೊಳಿಸಲಾಗಿದೆ. ಸ್ಥಳಕ್ಕೆ ಪೊಲೀಸರು, ಎಚ್​ಪಿ ಕಂಪನಿ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದವರು ಆಗಮಿಸಿದ್ದಾರೆ.
ಗ್ಯಾಸ್ ಸಂಪೂರ್ಣವಾಗಿ ಹೊರಗೆ ಹೋಗುವವರೆಗೂ ವಾಹನಗಳು ಹಾಗೂ ಯಾರಿಗೂ ಸ್ಥಳದ ಬಳಿ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ಸುತ್ತಮುತ್ತಲ ಅಂಗಡಿ-ಮುಂಗಟ್ಟುಗಳೂ ಮುಚ್ಚಲ್ಪಟ್ಟಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಎಲ್ಲ ರೀತಿಯಲ್ಲೂ ಸಜ್ಜಾಗಿ ನಿಂತಿದ್ದಾರೆ. ನಿಧಾನವಾಗಿ ಗ್ಯಾಸ್ ಖಾಲಿ ಆಗಲಾರಂಭಿಸಿದೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ಅಶ್ಲೀಲ ವೀಡಿಯೊ ಪ್ರಕರಣ : ವಾದಿಸಲು ವಿಶೇಷ ಅಭಿಯೋಜಕರನ್ನು ನೇಮಿಸಿದ ರಾಜ್ಯ ಸರ್ಕಾರ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement