ಜೆಡಿಎಸ್ ಕೋರ್ ಕಮಿಟಿ ರಚನೆ : ಅಧ್ಯಕ್ಷರಾಗಿ ಶಾಸಕ ಜಿ.ಟಿ ದೇವೇಗೌಡ ನೇಮಕ

ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ತಯಾರಿ ನಡೆಸುತ್ತಿರುವ ಜೆಡಿಎಸ್ ನಲ್ಲಿ ಶುಕ್ರವಾರ ​ಕೋರ್ ಕಮಿಟಿ ರಚನೆ ಮಾಡಲಾಗಿದೆ.
ಕೋರ್ ಕಮಿಟಿ 21 ಸದಸ್ಯರನ್ನ ಒಳಗೊಂಡಿದ್ದು, ಪಕ್ಷದ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಹಾಗೂ ಮಾಜಿ ಸಚಿವ ಜಿ.ಟಿ ದೇವೇಗೌಡ ಅವರು ಜೆಡಿಎಸ್​ ಕೋರ್​ ಕಮಿಟಿಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ವೈಎಸ್​​ವಿ ದತ್ತ ಅವರು ಕೋರ್​ ಕಮಿಟಿ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸಾ.ರಾ.ಮಹೇಶ, ಎಚ್.ಕೆ‌. ಕುಮಾರಸ್ವಾಮಿ, ವೆಂಕಟರಾವ್ ನಾಡಗೌಡ, ಬಂಡೆಪ್ಪ ಕಾಶಂಪುರ, ಸಿ.ಎಸ್.ಪುಟ್ಟರಾಜು, ಸುರೇಶ ಗೌಡ, ಆಲ್ಕೋಡ್ ಹನುಮಂತಪ್ಪ, ಬಿ‌.ಎಂ.ಫಾರೂಕ್, ರಾಜುಗೌಡ, ನೇಮಿರಾಜ್ ನಾಯ್ಕ್, ಎಂ.ಕೃಷ್ಣರೆಡ್ಡಿ, ದೊಡ್ಡಪ್ಪಗೌಡ ಎಸ್‌. ಪಾಟೀಲ, ಕೆ.ಎಂ.ತಿಮ್ಮರಾಯಪ್ಪ, ವೀರಭದ್ರಪ್ಪ ಹಾಲರವಿ, ಪ್ರಸನ್ನಕುಮಾರ, ಸುನಿತಾ ಚೌಹಾಣ್​​, ಸಿ.ವಿ.ಚಂದ್ರಶೇಖರ, ಸುಧಾಕರ್ ಶೆಟ್ಟಿ, ಸೂರಜ್ ನಾಯ್ಕ ಸೋನಿ ಕೋರ್ ಕಮಿಟಿಯ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಈ ವಿಷಯ ತಿಳಿಸಿದ್ದು, ಆಗಸ್ಟ್‌ 7ರಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡರ ನೇತೃತ್ವದಲ್ಲಿ ನಡೆದ ಪಕ್ಷದ ನಾಯಕ ಸಭೆಯಲ್ಲಿ ಕೋರ್ ಕಮಿಟಿಗೆ ನೂತನ ಅಧ್ಯಕ್ಷರು ಹಾಗೂ ಸದಸ್ಯರ ಆಯ್ಕೆಯನ್ನು ಅಂತಿಮಗೊಳಿಸಲಾಯಿತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement