ಮತ್ತೊಮ್ಮೆ ಅಮೆರಿಕ ಅಧ್ಯಕ್ಷನಾದರೆ ಭಾರತದ ಉತ್ಪನ್ನದ ಮೇಲೆಯೂ ದುಬಾರಿ ತೆರಿಗೆ ವಿಧಿಸುವ ಎಚ್ಚರಿಕೆ ನೀಡಿದ ಟ್ರಂಪ್

ವಾಷಿಂಗ್ಟನ್‌ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕೆಲವು ಅಮೆರಿಕನ್ ಉತ್ಪನ್ನಗಳ ಮೇಲೆ ನಿರ್ದಿಷ್ಟವಾಗಿ ಐಕಾನಿಕ್ ಹಾರ್ಲೆ-ಡೇವಿಡ್ಸನ್ ಬೈಕ್‌ಗಳಿಗೆ ಭಾರತದಲ್ಲಿ ಹೆಚ್ಚಿನ ತೆರಿಗೆ ವಿಧಿಸುತ್ತಿರುವ ಬಗ್ಗೆ ಮತ್ತೊಮ್ಮೆ ಪ್ರಸ್ತಾಪಿಸಿದ್ದಾರೆ ಮತ್ತು 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಭಾರತದ ಉತ್ಪನ್ನಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸುವುದಾಗಿ ಎಚ್ಚರಿಸಿದ್ದಾರೆ.
ಅಮೆರಿಕ ಅಧ್ಯಕ್ಷರಾಗಿ ತಮ್ಮ ಮೊದಲ ಅವಧಿಯಲ್ಲಿ, ಟ್ರಂಪ್ ಭಾರತವನ್ನು “ಸುಂಕದ ರಾಜ” ಎಂದು ಬಣ್ಣಿಸಿದ್ದರು. ಮತ್ತು ಮೇ 2019 ರಲ್ಲಿ, ಅಮೆರಿಕಕ್ಕೆ ಭಾರತದ ಆದ್ಯತೆಯ ಮಾರುಕಟ್ಟೆ ಪ್ರವೇಶದ ಜನರಲೈಸ್ಡ್ ಸಿಸ್ಟಮ್ ಆಫ್ ಪ್ರಿಪರೆನ್ಸಸ್‌ (Generalised System of Preferences (GSP)) ಕೊನೆಗೊಳಿಸಿದರು. ಅಮೆರಿಕವು ಭಾರತಕ್ಕೆ ನೀಡಿದಂತೆ ʼತನ್ನ ಮಾರುಕಟ್ಟೆಗಳಿಗೆ ಸಮಾನ ಮತ್ತು ಸಮಂಜಸವಾದ ಪ್ರವೇಶವನ್ನು ಭಾರತವು ಅಮೆರಿಕಕ್ಕೆ ನೀಡಿಲ್ಲ ಎಂದು ಆರೋಪಿಸಿದರು.

ನ್ಯಾಯಾಲಯದ ಪ್ರಕರಣಗಳು ಮತ್ತು ದೋಷಾರೋಪಣೆಗಳ ಸರಣಿಯನ್ನು ಎದುರಿಸುತ್ತಿರುವ 77 ವರ್ಷದ ಅಮೆರಿಕದ ಮಾಜಿ ಅಧ್ಯಕ್ಷರು, ರಿಪಬ್ಲಿಕನ್ ಅಧ್ಯಕ್ಷೀಯ ಪ್ರೈಮರಿ ಬಿಡ್ಡಿಂಗ್‌ ಅನ್ನು ಮುನ್ನಡೆಸುತ್ತಿದ್ದಾರೆ ಮತ್ತು ಪ್ರಮುಖ ರಾಷ್ಟ್ರೀಯ ಸಮೀಕ್ಷೆಗಳ ಪ್ರಕಾರ GOP ಮತಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೊಂದಿದ್ದಾರೆ.
ಫಾಕ್ಸ್ ಬ್ಯುಸಿನೆಸ್ ನ್ಯೂಸ್‌ನ ಲ್ಯಾರಿ ಕುಡ್ಲೋಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ಅವರು, ಭಾರತದ ತೆರಿಗೆ ದರಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ...| 'ತೃಣಮೂಲ ಕಾಂಗ್ರೆಸ್ಸಿಗಿಂತ ಬಿಜೆಪಿಗೆ ಮತ ಹಾಕುವುದು ಉತ್ತಮ' ಎಂದ ಕಾಂಗ್ರೆಸ್‌ ಹಿರಿಯ ನಾಯಕ...! ಟಿಎಂಸಿ ಕೆಂಡ

ನಾನು ಹೇಳಬಯಸುವ ಇನ್ನೊಂದು ವಿಷಯವೆಂದರೆ ಹೊಂದಾಣಿಕೆಯ ತೆರಿಗೆ, ಅಲ್ಲಿ ಭಾರತವು ನಮಗೆ ಶುಲ್ಕ ವಿಧಿಸಿದರೆ — ಭಾರತಕ್ಕೆ ನಾವು ಇಲ್ಲಿ ಶುಲ್ಕ ವಿಧಿಸಬೇಕಾಗುತ್ತದೆ. ನಾನು ಅದನ್ನು ಹಾರ್ಲೆ-ಡೇವಿಡ್ಸನ್ ವಿಷಯದಲ್ಲಿ ನೋಡಿದ್ದೇನೆ. ಭಾರತದಲ್ಲಿ ಶೇ.100 ಮತ್ತು 150 ಮತ್ತು 200 ರಷ್ಟು ಸುಂಕವನ್ನು ವಿಧಿಸುತ್ತಿದ್ದಾರೆ. ಇದಕ್ಕೆ ಕಂಪನಿಯವರನ್ನು ಕೇಳಿದರೆ ಅವರು ಭಾರತದಲ್ಲಿಯೇ ಉತ್ಪಾದನೆ ಮಾಡಬೇಕೆಂದು ಬಯಸುತ್ತಾರೆ ಎಂದು ಕಂಪನಿಯವರು ಹೇಳಿದ್ದಾರೆ ಎಂದು ಅವರು ಹೇಳಿದರು.
ಭಾರತವು ನಮಗೆ ಶುಲ್ಕ ವಿಧಿಸುತ್ತಿದ್ದರೆ, ನಾನು ಅವರಿಗೂ ಅದನ್ನು ಮಾಡಲು ಬಯಸುತ್ತೇನೆ — ಅದನ್ನು ಪ್ರತೀಕಾರ ಎಂದು ಕರೆಯಿರಿ. ನೀವು ಏನು ಬೇಕಾದರೂ ಕರೆಯಬಹುದು. ಅವರು ನಮಗೆ ಶುಲ್ಕ ವಿಧಿಸುತ್ತಿದ್ದರೆ, ನಾವು ಅವರಿಗೆ ಶುಲ್ಕ ವಿಧಿಸುತ್ತೇವೆ ಎಂದು ಟ್ರಂಪ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement