ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿದ್ದಂತೆ ಟ್ವಿಟರಿನಲ್ಲಿ ಟ್ರೆಂಡ್‌ ಆದ ಚಂದ್ರಯಾನ-2 ವೈಫಲ್ಯದ ನಂತರ ಶಿವನ್‌ ಭಾವುಕರಾದ ಕ್ಷಣದ 2019ರ ವೀಡಿಯೊ-ಫೋಟೋಗಳು | ವೀಕ್ಷಿಸಿ

ನವದೆಹಲಿ : ಚಂದ್ರಯಾನ-3 ಬುಧವಾರ ಸಂಜೆ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿಯಿತು, ಆ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸಮೈಲಿಗಲ್ಲು ಸ್ಥಾಪಿಸಿದೆ.
ರಷ್ಯಾದ ಲ್ಯಾಂಡರ್ ಅಪಘಾತಕ್ಕೀಡಾದ ಕೆಲವೇ ದಿನಗಳ ನಂತರ ದೇಶವು ಬೃಹತ್‌ ಸಾಧನೆ ಮಾಡುತ್ತಿದ್ದಂತೆ, ಎಕ್ಸ್ (ಹಿಂದಿನ ಟ್ವಿಟರ್) ಇಸ್ರೋ ಮಾಜಿ ಮುಖ್ಯಸ್ಥ ಕೆ ಶಿವನ್ ಅವರ ಫೋಟೋಗಳಿಂದ ತುಂಬಿತ್ತು. 2019 ರಲ್ಲಿ ಚಂದ್ರಯಾನ-2 ಮಿಷನ್ ವಿಫಲವಾದ ನಂತರ ಭಾವುಕ ಶಿವನ್‌ ಅವರನ್ನು ಫೋಟೋಗಳು ತೋರಿಸಿವೆ. ಕೆಲವು ಫೋಟೋಗಳು ಪ್ರಧಾನಿ ನರೇಂದ್ರ ಮೋದಿಅವರು ಶಿವನ್‌ ಅವರನ್ನು ಸಾಂತ್ವನ ಮಾಡುತ್ತಿರುವುದನ್ನು ತೋರಿಸಿವೆ. ಸೋಲು ಕೇವಲ ಯಶಸ್ಸಿನ ಮೆಟ್ಟಿಲು ಎಂಬ ಸಂದೇಶವನ್ನು ಫೋಟೋಗಳು ಸಾರಿವೆ.
ನಮ್ಮ ಸೋಲುಗಳಿಂದ ಕಲಿಯುವ ಮೂಲಕ ಯಶಸ್ಸನ್ನು ಸಾಧಿಸುವುದು ಹೇಗೆ ಎಂಬುದಕ್ಕೆ ಈ ದಿನ ಒಂದು ಉದಾಹರಣೆಯಾಗಿದೆ” ಎಂದು ಪ್ರಧಾನಿ ಮೋದಿ ಅಭಿನಂದನಾ ಸಂದೇಶದಲ್ಲಿ ಭಾರತದ ಹಿಂದಿನ ಚಂದ್ರನ ಕಾರ್ಯಾಚರಣೆಯನ್ನು ಉಲ್ಲೇಖಿಸಿ ಹೇಳಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2019ರಲ್ಲಿ ಕೊನೆಯ ಅಡಚಣೆಯಲ್ಲಿ ತನ್ನ ಹಿಂದಿನ ಕಾರ್ಯಾಚರಣೆಯ ನಿರಾಶಾದಾಯಕ ವೈಫಲ್ಯದ ನಂತರ ಬುಧವಾರದ ಇಳಿಯುವಿಕೆಯನ್ನು ಕುತೂಹಲದಿಂದ ಕಾಯುತ್ತಿತ್ತು.
ಚಂದ್ರಯಾನ-2 ಮಾಡ್ಯೂಲ್‌ನ ಲ್ಯಾಂಡಿಂಗ್‌ಗೆ ಕೆಲವೇ ಕ್ಷಣಗಳ ಮೊದಲು ಮಿಷನ್ ಕಂಟ್ರೋಲ್ ಸಂಪರ್ಕವನ್ನು ಕಳೆದುಕೊಂಡಿತ್ತು. ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ಲ್ಯಾಂಡಿಂಗ್ ಕಾರ್ಯಕ್ರಮವನ್ನು ವೀಕ್ಷಿಸಲು ಆಗಮಿಸಿದ್ದ ಪ್ರಧಾನಿ ಮೋದಿ ಮಿಷನ್‌ ಕೊನೆ ಕ್ಷಣದಲ್ಲಿ ವಿಫಲವಾಗಿದ್ದಕ್ಕೆ ಭಾವುಕರಾದ ಶಿವನ್ ಅವರನ್ನು ತಬ್ಬಿಕೊಂಡು ಸಾಂತ್ವನ ಹೇಳಿದ್ದರು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

“ನಾವು ನಿಜವಾಗಿಯೂ ಉತ್ಸುಕರಾಗಿದ್ದೇವೆ… ಈ ಕ್ಷಣಕ್ಕಾಗಿ ನಾವು ಬಹಳ ಸಮಯದಿಂದ ಕಾಯುತ್ತಿದ್ದೆವು, ನನಗೆ ತುಂಬಾ ಸಂತೋಷವಾಗಿದೆ” ಎಂದು ಶಿವನ್ ಬುಧವಾರ ಚಂದ್ರಯಾನ-3 ಮಿಷನ್‌ ಯಶಸ್ವಿಯಾದ ನಂತರ ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಂತೋಷದ ಕ್ಷಣವನ್ನು ನೇರ ಪ್ರಸಾರದಲ್ಲಿ ಹಂಚಿಕೊಂಡು, ಮಿಷನ್‌ನ ಯಶಸ್ಸನ್ನು ತಮ್ಮ ದೇಶದ ಗಡಿಯ ಆಚೆಗೆ ವಿಸ್ತರಿಸಿದ ವಿಜಯ ಎಂದು ಪ್ರಕಟಿಸಿದರು.

ಪ್ರಮುಖ ಸುದ್ದಿ :-   ಅಪ್ರಾಪ್ತ ವಿದ್ಯಾರ್ಥಿಗೆ ಮದ್ಯ ಕುಡಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಮುಂಬೈ ಶಿಕ್ಷಕಿ...! ಆತಂಕ ನಿವಾರಕ ಮಾತ್ರೆಯನ್ನೂ ನೀಡುತ್ತಿದ್ದಳಂತೆ

ಈ ಸಂತೋಷದಾಯಕ ಸಂದರ್ಭದಲ್ಲಿ ನಾನು ವಿಶ್ವದ ಜನರನ್ನು ಉದ್ದೇಶಿಸಿ ಮಾತನಾಡಲು ಬಯಸುತ್ತೇನೆ” ಎಂದು ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ರಾಜತಾಂತ್ರಿಕ ಶೃಂಗಸಭೆಯ ವೇಳೆ ಮೋದಿ ಹೇಳಿದರು. ಭಾರತದ ಯಶಸ್ವಿ ಚಂದ್ರಯಾನ ಕೇವಲ ಭಾರತ ಮಾತ್ರವಲ್ಲ. ಈ ಯಶಸ್ಸು ಎಲ್ಲಾ ಮಾನವೀಯತೆಗೆ ಸೇರಿದೆ.” ಎಂದು ಅವರು ಹೇಳಿದರು.
ಮಾನವರಹಿತ ಚಂದ್ರಯಾನ-3 ಬುಧವಾರ ಸಂಜೆ 6:04 ಕ್ಕೆ ಚಂದ್ರನ ಮೇಲೆ ಇಳಿಯಿತು.

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement