ಅಡುಗೆಗೆ ಬಳಸುವ ಎಲ್‌ಪಿಜಿ ಸಿಲಿಂಡರ್‌ ದರದಲ್ಲಿ ಭಾರೀ ಇಳಿಕೆ ಮಾಡಿದ ಕೇಂದ್ರ

ನವದೆಹಲಿ: ಮಂಗಳವಾರ ಕೇಂದ್ರ ಸಚಿವ ಸಂಪುಟವು 14 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹200 ಕಡಿಮೆ ಮಾಡುವುದಾಗಿ ಪ್ರಕಟಿಸಿದೆ.
ಪ್ರಸ್ತುತ, ದೇಶೀಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ದೆಹಲಿಯಲ್ಲಿ ₹1053, ಮುಂಬೈನಲ್ಲಿ ₹1052.50, ಚೆನ್ನೈನಲ್ಲಿ ₹1068.50 ಮತ್ತು ಕೋಲ್ಕತ್ತಾದಲ್ಲಿ ₹1079 ಇದೆ.
ತೈಲ ಕಂಪನಿಗಳು ಜುಲೈನಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ನ ಬೆಲೆಯನ್ನು ₹50 ಹೆಚ್ಚಿಸಿದ್ದವು. ಈ ಹಿಂದೆ ಮೇ ತಿಂಗಳಲ್ಲಿ ಎರಡು ಬಾರಿ ಬೆಲೆ ಏರಿಕೆ ಮಾಡಲಾಗಿತ್ತು. ಪ್ರಧಾನಮಂತ್ರಿ ಉಜ್ವಲ ಯೋಜನೆ ಗ್ರಾಹಕರು ತಮ್ಮ ಖಾತೆಗಳಲ್ಲಿ ₹200/ಸಿಲಿಂಡರ್ ಸಬ್ಸಿಡಿ ಪಡೆಯುವುದನ್ನು ಮುಂದುವರಿಸುತ್ತಾರೆ.
“ಪ್ರಧಾನಿ ಮೋದಿಯವರು ಎಲ್ಲಾ ಬಳಕೆದಾರರಿಗೆ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ₹ 200 ಇಳಿಕೆ ಮಾಡಲು ನಿರ್ಧರಿಸಿದ್ದಾರೆ… ಇದು ರಕ್ಷಾ ಬಂಧನದ ಸಂದರ್ಭದಲ್ಲಿ ದೇಶದ ಮಹಿಳೆಯರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆ” ಎಂದು ಕೇಂದ್ರ ಸಚಿವ ಅನುರಾಗ ಠಾಕೂರ್‌ ಹೇಳಿದ್ದಾರೆ.
ಪ್ರಧಾನಮಂತ್ರಿ ಉಜ್ವಲಾ ಯೋಜನೆಯ ಫಲಾನುಭವಿಗಳು ಈಗಾಗಲೇ ₹ 200 ಸಬ್ಸಿಡಿ ಪಡೆಯುತ್ತಿದ್ದಾರೆ. ಅವರಿಗೆ ಈಗ ಒಟ್ಟು ₹ 400 ಸಬ್ಸಿಡಿ ಸಿಗಲಿದೆ ಎಂದು ಸಚಿವರು ಹೇಳಿದರು.
ನವದೆಹಲಿಯಲ್ಲಿ ₹ 1,103 ಇರುವ 14.2 ಕೆಜಿ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಈಗ ₹ 903 ಆಗಲಿದೆ. ಉಜ್ವಲ ಫಲಾನುಭವಿಗಳಿಗೆ ₹ 703 ಬೆಲೆ ಇರುತ್ತದೆ.
ಕೇಂದ್ರವು 75 ಲಕ್ಷ ಹೆಚ್ಚುವರಿ ಉಜ್ವಲ ಸಂಪರ್ಕಗಳನ್ನು ಸಹ ಅನುಮೋದಿಸಿದೆ, ಇದು ಒಟ್ಟು ಫಲಾನುಭವಿಗಳನ್ನು 10.35 ಕೋಟಿಗೆ ಒಯ್ದಿದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement