2023-24ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ: ಇಲ್ಲಿದೆ ಪಟ್ಟಿ

ಬೆಂಗಳೂರು: ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು 2023-24ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿದೆ.
ಪ್ರಾಥಮಿಕ ಶಾಲೆಯ 20 ಮತ್ತು ಪ್ರೌಢಶಾಲೆಯ 11 ಮಂದಿ ಸೇರಿದಂತೆ 31 ಶಿಕ್ಷಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಅಲ್ಲದೆ, ಇಬ್ಬರು ಪ್ರಾಂಶುಪಾಲರು ಮತ್ತು 8 ಮಂದಿ ಉಪನ್ಯಾಸಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಿದೆ. ಮಹಿಳಾ ಶಿಕ್ಷಕಿಯರಿಗೆ ‘ಸಾವಿತ್ರಿಬಾಪುಲೆ’ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಉತ್ತಮ ಶಿಕ್ಷಕ ಪ್ರಶಸ್ತಿ ಪಡೆಯಲಿರುವ ಪ್ರತಿ ಶಿಕ್ಷಕರಿಗೆ ಈ ವರ್ಷದಿಮದ 25 ಸಾವಿರ ನಗದು ಪುರಸ್ಕಾರ ನೀಡಲಾಗುತ್ತದೆ. ಪ್ರಶಸ್ತಿಯನ್ನು ಸೆಪ್ಟೆಂಬರ್‌ 5ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಮ್ಮ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಪ್ರದಾನ ಮಾಡಲಿದ್ದಾರೆ.
ಪ್ರಾಥಮಿಕ ಶಾಲೆ ವಿಭಾಗ:
ಫೌಜಿಯ ಸರವತ್- ಶಿಕ್ಷಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾದಾಪುರ, ಹೊಸನಗರ ತಾಲೂಕು- ಶಿವಮೊಗ್ಗ ಜಿಲ್ಲೆ,
ಮಂಜುನಾಥ- ಶಿಕ್ಷಕ, ಸಕಿಪ್ರಾ ಶಾಲೆ ಮಾರಪಲ್ಲಿ, ಚಿಂತಾಮಣಿ ತಾಲೂಕು- ಚಿಕ್ಕಬಳ್ಳಾಪುರ ಜಿಲ್ಲೆ ,
ಸತೀಶ ಬಿ.ಕೆ.- ಶಿಕ್ಷಕ, ಸಹಿಪ್ರಾ ಶಾಲೆ, ಬಸವನಕೋಟೆ, ಜಗಳೂರು ತಾಲೂಕು, ದಾವಣಗೆರೆ ಜಿಲ್ಲೆ
ಸುಜಾತ ಎಂ.ಜೆ.- ಶಿಕ್ಷಕಿ, ಸಹಿಪ್ರಾ ಶಾಲೆ ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಮೊಹಮ್ಮದ್ ಹಾಶೀಂಸಾಬ್‌ ಹುಸೇನ್‌ ಸಾಬ್‌ – ಶಿಕ್ಷಕ, ಸಹಿಪ್ರಾ ಶಾಲೆ ನಿಡಗುಂದಿ ಎನ್.ಟಿ., ಬಸವನ ಬಾಗೇವಾಡಿ ತಾಲೂಕು, ವಿಜಯಪುರ ಜಿಲ್ಲೆ,
ಪ್ರತಾಪ ಶಂಕರ ಜೋಡಟ್ಟಿ-ಶಿಕ್ಷಕ, ಕನ್ನಡ ಸಹಿಕಿಪ್ರಾ ಶಾಲೆ, ಕಪ್ಪಲಗುಡ್ಡಿ ಟಿಒಟಿ, ರಾಯಭಾಗ ತಾಲೂಕು, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ,
ಮೊಹಮ್ಮದ್ ಹುಸೇನ ಅಬ್ದುಲ್ ಖಾದರ್‌- ಮುಖ್ಯ ಶಿಕ್ಷಕ, ಉರ್ದು ಸಹಿಪ್ರಾ ಶಾಲೆ ನವನಗರ, ಬಾಗಲಕೋಟೆ ಜಿಲ್ಲೆ,
ಮಾತಾಂಡಪ್ಪ ತೆಳಗೇರಿ-ಶಿಕ್ಷಕ, ಸಕಿಪ್ರಾ ಶಾಲೆ, ಕಪ್ಪರಗಾಂವ, ಹುಮ್ನಾಬಾದ್ ತಾಲೂಕು, ಬೀದರ್ ಜಿಲ್ಲೆ,
ಅಕ್ಷತಾ ಅನಿಲ ಬಾಸಗೋಡ- ಶಿಕ್ಷಕಿ, ಸಹಿಪ್ರಾ ಶಾಲೆ ಅಣಸಿ, ಜೋಯಿಡಾ, ಶಿರಸಿ ಶೈಕ್ಷಣಿಕ ಜಿಲ್ಲೆ,
ಶೇಕಪ್ಪ ಭೀಮಪ್ಪ ಕೇಸರಿ- ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ, ಮುರಕಟ್ಟಿ, ಧಾರವಾಡ ಜಿಲ್ಲೆ,
ಭಾಸ್ಕರ- ಶಿಕ್ಷಕ, ಸಕಿಪ್ರಾ ಶಾಲೆ ಅಡಗನಹಳ್ಳಿ, ಕೆ.ಆರ್.ನಗರ, ಮೈಸೂರು,
ಎ.ಬಿ. ಮೂರ್ತಿ- ಶಿಕ್ಷಕ, ಸಹಿಪ್ರಾ ಶಾಲೆ ರುದ್ರಪಟ್ಟಣ, ಅರಕಲಗೂಡು, ಹಾಸನ,
ಎಂ.ಆರ್. ವನಜಾಕ್ಷಮ್ಮ- ಶಿಕ್ಷಕಿ, ಸಹಿಪ್ರಾ ಶಾಲೆ ಹರಗಿನಡೋಣಿ, ಬಳ್ಳಾರಿ ಪಶ್ಚಿಮ, ಬಳ್ಳಾರಿ,
ಸೈಯದಾ ಸಾಜೀದಾ ಫಾತೀಮಾ- ಶಿಕ್ಷಕಿ, ಸಹಿಪ್ರಾ ಶಾಲೆ, ಯರಮರಸ್, ರಾಯಚೂರು,
ಪ್ರಶಾಂತ ಜಿ.- ಶಿಕ್ಷಕ, ಸಕಿಪ್ರಾ ಶಾಲೆ, ಎಂ. ಹೊಸೂರು, ನಾಗಮಂಗಲ, ಮಂಡ್ಯ,
ವಿ. ವೀರಪ್ಪ- ಮುಖ್ಯ ಶಿಕ್ಷಕ, ಸಹಿಪ್ರಾ ಶಾಲೆ ಗೋಪಿನಾಥಂ, ಹನೂರು, ಚಾಮರಾಜನಗರ,
ಗಂಗಾಧರ ಎಂ.ಜಿ.- ಶಿಕ್ಷಕ, ಸಹಿಪ್ರಾ ಶಾಲೆ ಗುಬ್ಬಿ, ತುಮಕೂರು,
ಪೂರ್ಣೇಶ ಬಿ.ಟಿ.- ಶಿಕ್ಷಕ, ಸಹಿಪ್ರಾ ಶಾಲೆ, ಬೋಯಕೇರಿ, ಮಡಿಕೇರಿ, ಕೊಡಗು,
ಸೋಮಪ್ಪ ಕ್ಕಿರಪ್ಪ ಕಠಾರಿ- ಶಿಕ್ಷಕ, ಸಕಿಪ್ರಾ ಶಾಲೆ ದ್ಯಾಮನಕೊಪ್ಪ, ಹಾನಗಲ್, ಹಾವೇರಿ.

ಪ್ರಮುಖ ಸುದ್ದಿ :-   ಸಿದ್ದಾಪುರ : ಸಿಡಿಲು ಬಡಿದು 7 ಹಸುಗಳು ಸಾವು

ಪ್ರೌಢಾಶಾಲಾ ವಿಭಾಗ:
ಪ್ರಕಾಶ ನಾಯ್ಕ- ಆಂಗ್ಲ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಚಿತ್ತಾರ, ಮಂಕಿ-ಹೊನ್ನಾವರ, ಉತ್ತರ ಕನ್ನಡ,
ಸುರೇಶ ಬಿ. ಮುಗಳಿ- ಆಂಗ್ಲ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ವೀರಾಪುರ, ಧಾರವಾಡ,
ನಾಗಭೂಷಣ ಕೆ.ಟಿ.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ರೇಖಲಗೆರೆ, ಚಳ್ಳಕೆರೆ, ಚಿತ್ರದುರ್ಗ,
ರೇಣುಕಾರಾಜ ಜಿ.ಎಚ್.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಅರಸೀಕೆರೆ, ಪಾವಗಡ, ಮಧುಗಿರಿ ಶೈಕ್ಷಣಿಕ ಜಿಲ್ಲೆ,
ರಜನಿ ಜಿ.ಸಿ- ಕನ್ನಡ ಶಿಕ್ಷಕಿ, ಸರ್ಕಾರಿ ಪಿಯು ಕಾಲೇಜು, ವಿ.ಸಿ. ಫಾರಂ, ಮಂಡ್ಯ,
ಬಸಪ್ಪ ಇಂದಿರಾ ಪಿ.ಜಿ.- ವಿಜ್ಞಾನ ಶಿಕ್ಷಕಿ, ಕೆಪಿಎಸ್ ಹೆಬ್ಬಾಳ, ಬೆಂಗಳೂರು ಉತ್ತರ ವಲಯ-2,
ವಿಜಯ ಆನಂದರಾವ್- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ತ್ಯಾಗರ್ತಿ, ಸಾಗರ, ಶಿವಮೊಗ್ಗ,
ಹರ್ಷ ಎಸ್.- ವಿಜ್ಞಾನ ಶಿಕ್ಷಕ, ಸರ್ಕಾರಿ ಪ್ರೌಢಶಾಲೆ ಹೆಡತಲೆ, ನಂಜನಗೂಡು, ಮೈಸೂರು,
ನರೇಂದ್ರ- ಕಲಾ ಶಿಕ್ಷಕ, ವಿವೇಕ ಬಾಲಕಿಯರ ಪ್ರೌಢಶಾಲೆ ಕೋಟ, ಬ್ರಹ್ಮಾವರ, ಉಡುಪಿ,
ಶ್ರೀಶೈಲ ಸ. ಗಸ್ತಿ- ಚಿತ್ರಕಲೆ ( ವಿಶೇಷ ಶಿಕ್ಷಕ), ಜಾಧವ ಜೆ ಆನಂದ ಜೆ ಹಿರಿಯ ಮಾಧ್ಯಮಿಕ ಶಾಲೆ, ಅಥಣಿ, ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆ

ಪ್ರಮುಖ ಸುದ್ದಿ :-   ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ತಲೆದಂಡ

ಪ್ರಾಂಶುಪಾಲರ ವಿಭಾಗ:
ಮಂಜುನಾಥ್ ಭಟ್- ಸರ್ಕಾರಿ ಪಿಯು ಕಾಲೇಜು, ಹಿರಿಯಡ್ಕ, ಉಡುಪಿ,
ಸುಕುಮಾರ- ಸರ್ಕಾರಿ ಪಿಯು ಕಾಲೇಜು, ಬೆಳ್ತಂಗಡಿ, ದಕ್ಷಿಣ ಕನ್ನಡ.
ಉತ್ತಮ ಉಪನ್ಯಾಸಕ:
ಡಾ. ಗೋಪಾಲ ಜಿ.ವಿ- ಇತಿಹಾಸ ವಿಭಾಗ, ಸರ್ಕಾರಿ ಪಿಯು ಕಾಲೇಜು, ಯಲ್ಲಾಪುರ, ತುಮಕೂರು,
ಡಾ. ಪ್ರಭಾಕರ ಎನ್- ರಾಜ್ಯಶಾಸ್ತ್ರ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಬಸವನಗುಡಿ, ಬೆಂಗಳೂರು ದಕ್ಷಿಣ,
ಪಾಂಡುರಂಗ ಎನ್. ಕಾಮತ್- ಹಿಂದಿ, ಸಪಿಯು ಕಾಲೇಜು, ಶಹಾಪುರ, ಬೆಳಗಾವಿ
ಪಾಟೀಲ ಮಾರುತಿ ಲಕ್ಷ್ಮಣ- ಭೌತಶಾಸ್ತ್ರ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಜಮಖಂಡಿ, ಬಾಗಲಕೋಟೆ
ರಜಿಯಾ ಕೊಕತನೂರ್- ಭೌತಶಾಸ್ತ್ರ, ಸರ್ಕಾರಿ ಪಿಯು ಕಾಲೇಜು, ವಿಜಯಪುರ,
ಬಸವರಾಜ್ ವಿ. ಕುಂಬಾರ- ಗಣಿತ, ಸರ್ಕಾರಿ ಪಿಯು ಕಾಲೇಜು, ಹೊನ್ನುಟಗಿ, ವಿಜಯಪುರ,
ಗಿರೀಶ್ ಎಚ್.ಎನ್- ಜೀವಶಾಸ್ತ್ರ, ಸರ್ಕಾರಿ ಬಾಲಕಿಯರ ಪಿಯು ಕಾಲೇಜು, ಹುಣಸೂರು,
ಶರಣಪ್ಪ ಕೆ ಹುಲಗೇರಿ- ಇತಿಹಾಸ, ಸರ್ಕಾರಿ ಪಿಯು ಕಾಲೇಜು, ಹುನಗುಂದ, ಬಾಗಲಕೋಟೆ.

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement