ಲೋಕಸಭಾ ಚುನಾವಣೆ 2024 : ಕಾಂಗ್ರೆಸ್ಸಿನಿಂದ 16 ಸದಸ್ಯರ ‘ಚುನಾವಣಾ ಸಮಿತಿ’ ರಚನೆ

ನವದೆಹಲಿ: 2024ರಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಚುನಾವಣಾ ಸಮಿತಿಯನ್ನು ಪ್ರಕಟಿಸಿದೆ. ಸಮಿತಿಯು 16 ನಾಯಕರನ್ನು ಒಳಗೊಂಡಿದೆ ಎಂದು ಕಾಂಗ್ರೆಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ ಘೋಷಿಸಿದ್ದಾರೆ.
ಸಮಿತಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಅಂಬಿಕಾ ಸೋನಿ, ಲೋಕಸಭೆಯಲ್ಲಿ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, ಸಲ್ಮಾನ್ ಖುರ್ಷಿದ್, ಮದುಸೂದನ್ ಮಿಸ್ತ್ರಿ ಮತ್ತು ಎನ್. ಉತ್ತಮ ಕುಮಾರ್ ರೆಡ್ಡಿ ಸೇರಿದಂತೆ 16 ಸದಸ್ಯರಿದ್ದಾರೆ.
ಛತ್ತೀಸ್‌ಗಢ ಉಪಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್, ಕೆ.ಜಿ.ಜಾರ್ಜ್, ಪ್ರೀತಂ ಸಿಂಗ್, ಮೊಹಮ್ಮದ್ ಜಾವೇದ್, ಅಮಿ ಯಾಗ್ನಿಕ್, ಪಿ.ಎಲ್.ಪುನಿಯಾ, ಓಂಕಾರ್ ಮಾರ್ಕಮ್, ಕೆ.ಸಿ.ವೇಣುಗೋಪಾಲ ಅವರಿಗೂ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಕಾಂಗ್ರೆಸ್ ಪಕ್ಷವು ವಿರೋಧ ಪಕ್ಷದ ಮೈತ್ರಿಕೂಟ-ಇಂಡಿಯಾದ ಸದಸ್ಯನಾಗಿದ್ದು, ದೇಶದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೆಂಬಲ ನೆಲೆಯನ್ನು ಹೊಂದಿರುವ ಏಕೈಕ ಪಕ್ಷವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement