ಕ್ರಿಕೆಟ್‌ ವಿಶ್ವಕಪ್‌ 2023 : 15 ಸದಸ್ಯರ ಭಾರತದ ತಂಡ ಪ್ರಕಟ

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2023ರ ವಿಶ್ವಕಪ್‌ ಕ್ರಿಕೆಟ್‌ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ವಿಕೆಟ್ ಕೀಪರ್ ಬ್ಯಾಟರ್ ಕೆ.ಎಲ್. ರಾಹುಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಹದಿಮೂರನೇ ಆವೃತ್ತಿಯ ವಿಶ್ವಕಪ್ ಭಾರತದಲ್ಲಿ ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ನಡೆಯಲಿದೆ. ಈ ಹಿಂದೆ ಮೂರು ಬಾರಿ ವಿಶ್ವಕಪ್ ಆತಿಥ್ಯ ವಹಿಸಿದ್ದ ಭಾರತ ಇದೇ ಮೊದಲ ಬಾರಿಗೆ ಏಕಾಂಗಿಯಾಗಿ ಆತಿಥ್ಯ ವಹಿಸಲಿದೆ.
ಏಷ್ಯಾ ಕಪ್ 2023 ಕ್ಕೆ ಭಾರತದ 17 ಸದಸ್ಯರ ತಂಡದಲ್ಲಿ ಆಯ್ಕೆಯಾಗಿದ್ದ ತಿಲಕ ವರ್ಮಾ, 15 ಆಟಗಾರರ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲಿಲ್ಲ ಮತ್ತು ಸಂಜು ಸ್ಯಾಮ್ಸನ್ ಅವರು ಕೂಡ ಆಯ್ಕೆಯಾಗಲಿಲ್ಲ. ಸುದೀರ್ಘ ಗಾಯದ ನಂತರ ODI ತಂಡಕ್ಕೆ ಮರಳಿದ ಪ್ರಸಿದ್ಧ್ ಕೃಷ್ಣ ಅವರನ್ನು ಆಯ್ಕೆಗಾರರು ಆಯ್ಕೆ ಮಾಡಲಿಲ್ಲ. ಆದರೆ ಜಸ್ಪ್ರೀತ್ ಬುಮ್ರಾ ಹಾಗೂ ಶ್ರೇಯಸ್‌ ಅಯ್ಯರ್‌ ಅವರನ್ನು ಆಯ್ಕೆ ಮಾಡಲಾಗಿದೆ.
ಭಾರತ ತಂಡ :
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ(ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ , ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಕೆ.ಎಲ್. ರಾಹುಲ್, ಸೂರ್ಯಕುಮಾರ ಯಾದವ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.

ಪ್ರಮುಖ ಸುದ್ದಿ :-   ಏಪ್ರಿಲ್‌ ತಿಂಗಳಲ್ಲಿ ದಾಖಲೆಯ ಪ್ರಮಾಣದ ಜಿಎಸ್‌ಟಿ ಸಂಗ್ರಹ ; ಕರ್ನಾಟಕಕ್ಕೆ 2ನೇ ಸ್ಥಾನ

2023ರ ಐಸಿಸಿ ವಿಶ್ವಕಪ್ ಟೂರ್ನಿಗೆ ಭಾರತ ತಂಡದ ವೇಳಾಪಟ್ಟಿ
ಅಕ್ಟೋಬರ್ 8: ಭಾರತ-ಆಸ್ಟ್ರೇಲಿಯಾ, ಚೆನ್ನೈ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 11: ಭಾರತ-ಅಫ್ಘಾನಿಸ್ತಾನ, ನವದೆಹಲಿ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 14: ಭಾರತ-ಪಾಕಿಸ್ತಾನ, ಅಹಮದಾಬಾದ್, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 19: ಭಾರತ-ಬಾಂಗ್ಲಾದೇಶ, ಪುಣೆ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 22: ಭಾರತ-ನ್ಯೂಜಿಲೆಂಡ್, ಧರ್ಮಶಾಲಾ, ಮಧ್ಯಾಹ್ನ 2 ಗಂಟೆ
ಅಕ್ಟೋಬರ್ 29: ಭಾರತ-ಇಂಗ್ಲೆಂಡ್, ಲಕ್ನೋ, ಮಧ್ಯಾಹ್ನ 2 ಗಂಟೆ
ನವೆಂಬರ್ 2: ಭಾರತ-ಶ್ರೀಲಂಕಾ, ಮುಂಬೈ, ಮಧ್ಯಾಹ್ನ 2 ಗಂಟೆ
ನವೆಂಬರ್ 5: ಭಾರತ-ದಕ್ಷಿಣ ಆಫ್ರಿಕಾ, ಕೋಲ್ಕತಾ, ಮಧ್ಯಾಹ್ನ 2 ಗಂಟೆ
ನವೆಂಬರ್ 12: ಭಾರತ-ನೆದರ್ಲ್ಯಾಂಡ್ಸ್, ಬೆಂಗಳೂರು, ಮಧ್ಯಾಹ್ನ 2 ಗಂಟೆ

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement