ನಟಿ ರಮ್ಯಾ ಸಾವಿನ ವದಂತಿ: ಇದು ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ ಆಪ್ತ ವಲಯ

ಬೆಂಗಳೂರು : ಸಂಸದೆ ಹಾಗು ನಟಿ ರಮ್ಯಾ ಹೃದಯಾಘಾತದಿಂದ ನಿಧನರಾಗಿದ್ದಾರೆ ಎನ್ನುವ ಸುಳ್ಳು ಸುದ್ದಿ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡಿದೆ. ಆದರೆ ಇದು ಸುಳ್ಳು ಸುದ್ದಿ ಎಂದು ನಟಿ ರಮ್ಯಾ ಆಪ್ತ ವಲಯ ಸ್ಪಷ್ಟಪಡಿಸಿದೆ ಹಾಗೂ ಅವರು ಜಿನೇವಾ ಪ್ರವಾಸದಲ್ಲಿದ್ದಾರೆ ಮತ್ತು ಆರೋಗ್ಯವಾಗಿದ್ದಾರೆ ಎಂದು ಹೇಳಿದೆ.
ಮೂಲಗಳ ಪ್ರಕಾರ ತಮಿಳಿನಲ್ಲಿ ರಮ್ಯಾ ಹೆಸರಿನ ಸಣ್ಣ ನಟಿಯೊಬ್ಬರು ನಿಧನರಾಗಿದ್ದು, ಇದನ್ನು ತಪ್ಪಾಗಿ ಅರ್ಥೈಸಿಕೊಂಡು ಕನ್ನಡ ನಟಿ ರಮ್ಯಾ ಅವರು ನಿಧನರಾಗಿದ್ದಾರೆ ಎಂದು ಸುದ್ದಿ ಹರಿದಾಡಿದೆ.
ರಮ್ಯಾ ಜೊತೆ ಸ್ವಿಜರ್ಲೆಂಡ್‌ನ ಜಿನೇವಾದಲ್ಲಿರುವ ಪತ್ರಕರ್ತೆ ಚಿತ್ರಾ ಸುಬ್ರಮಣ್ಯಂ ಕೂಡ ಟ್ವೀಟ್‌ ಮಾಡಿ ರಮ್ಯಾ ಅವರಿಗೆ ಏನೂ ಆಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ತಾನೆ ನಾನು ರಮ್ಯಾ ಅವರ ಜೊತೆ ಮಾತನಾಡಿದೆ. ಆಕೆ ಚೆನ್ನಾಗಿಯೇ ಇದ್ದಾರೆ. ಈಗ ಜೆಕ್‌ ಗಣರಾಜ್ಯದ ಪ್ರೇಗ್‌ಗೆ ತೆರಳುತ್ತಿದ್ದು, ಆ ಬಳಿಕ ಬೆಂಗಳೂರಿಗೆ ವಾಪಾಸಾಗುತ್ತಿದ್ದೇವೆ’ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ರಮ್ಯಾ ಜೊತೆಯಲ್ಲಿ ಜಿನೇವಾದಲ್ಲಿ ಇರುವ ಫೋಟೋ ಅವರು ಹಂಚಿಕೊಂಡಿದ್ದಾರೆ. ಅತ್ಯಂತ ಪ್ರತಿಭಾವಂತ ಮತ್ತು ಸೌಮ್ಯ ಮಹಿಳೆ ರಮ್ಯಾರನ್ನು ಜನೇವಾದಲ್ಲಿ ಭೇಟಿ ಮಾಡಿದೆ. ಬೆಂಗಳೂರಿನ ಮೇಲಿನ ಪ್ರೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ನಟಿ ರಮ್ಯಾ ಅವರೊಂದಿಗೆ ಮಾತನಾಡಿದ್ದೇನೆ. ಅವರು ಜಿನೀವಾದಲ್ಲಿದ್ದಾರೆ, ಕರೆಗಳು ಬರುವವರೆಗೂ ಶಾಂತವಾಗಿ ನಿದ್ರಿಸುತ್ತಿದ್ದರು, ಇದನ್ನು ಟ್ವೀಟ್ ಮಾಡಿದ ಬೇಜವಾಬ್ದಾರಿ ಯಾರೇ ಆಗಿರಲಿ ಮತ್ತು ಅದನ್ನು ಸುದ್ದಿ ಫ್ಲ್ಯಾಶ್ ಎಂದು ಪ್ರಕಟಿಸಿದ ಸುದ್ದಿ ಸಂಸ್ಥೆಗಳು ನಾಚಿಕೆಪಡಬೇ ಎಂದು ಧನ್ಯಾ ರಾಜೇಂದ್ರನ್ X ನಲ್ಲಿ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement