ಚಿಕ್ಕಬಳ್ಳಾಪುರ: ಜಾತ್ಯತೀತ ಪಕ್ಷ ಎಂದು ಹೆಸರಿಟ್ಟುಕೊಂಡು ಕೋಮುವಾದಿ ಪಕ್ಷದ ಜೊತೆ ಸ್ನೇಹ ಬೆಳೆಸಲು ಜೆಡಿಎಸ್ ಹೊರಟಿದೆ. ಇದು ತಮಗೆ ಅಚ್ಚರಿ ತಂದಿದೆ ಎಂದು ಬಚ್ಚೇಗೌಡ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿ.ಪಂ ಸಭಾಂಗಣದಲ್ಲಿ ಶುಕ್ರವಾರ ದಿಶಾ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಹೊರಟಿರುವುದು ನನಗೆ ಅಚ್ಚರಿ ತಂದಿದೆ. ಬಿಜೆಪಿ ಕೋಮುವಾದಿ ಪಕ್ಷವಾಗಿದೆ. ಜೆಡಿಎಸ್ ಜೊತೆ ಮೈತ್ರಿ ಆಗುವ ಬಗ್ಗೆ ಸಾಕಷ್ಡು ಊಹಾಪೋಹಗಳು ಇದ್ದವು. ಈಗ ಜನರಿಗೆ ಸ್ಪಷ್ಟವಾಗಿದೆ. ಆದರೆ ಮೈತ್ರಿಯಿಂದ ಬಿಜೆಪಿಗೆ ಶಕ್ತಿ ಬರುವುದಿಲ್ಲ. ಬದಲಾಗಿ ಕ್ಷೀಣಿಸುತ್ತದೆ. ಬಿಜೆಪಿ ಜೆಡಿಎಸ್ ಮೈತ್ರಿಯಿಂದ ರಾಜಕೀಯವಾಗಿ ಬಿಜೆಪಿಗೆ ಒಳ್ಳಯದಾಗುವುದಿಲ್ಲ ಎಂದರು.
ಇದೇ ಕಾರಣಕ್ಕಾಗಿಯೋ ಏನೋ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ವಿರೋಧ ಪಕ್ಷ ನಾಯಕನನ್ನು ಆಯ್ಕೆ ಮಾಡದೆ ಕುಳಿತಿದೆ. ಮೈತ್ರಿ ಆಗುವ ಕಾರಣದಿಂದ ಪಕ್ಷದ ವರಿಷ್ಠರು ಈ ಸ್ಥಾನಗಳಿಗೆ ಆಯ್ಕೆಗಳನ್ನು ತಡ ಮಾಡಿದರೆಂದು ನನಗೆ ಈಗ ಅನಿಸುತ್ತಿದೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ