ಕೆಲವು ನಿರೂಪಕರು, ಟಿವಿ ಶೋಗಳನ್ನು ಬಹಿಷ್ಕರಿಸಲು ವಿಪಕ್ಷಗಳ ಇಂಡಿಯಾ ಮೈತ್ರಿಕೂಟ ನಿರ್ಧಾರ : ಶೀಘ್ರದಲ್ಲೇ ಪಟ್ಟಿಯ ತಯಾರಿ

ನವದೆಹಲಿ: ವಿಪಕ್ಷಗಳ ಮೈತ್ರಿಕೂಟ-ಇಂಡಿಯಾ ಕೆಲ ಸುದ್ದಿ ವಾಹಿನಿಗಳ ನಿರೂಪಕರು ಮತ್ತು ಕಾರ್ಯಕ್ರಮಗಳನ್ನು ಬಹಿಷ್ಕರಿಸಲಿದೆ. ವಿಪಕ್ಷಗಳ ಮೈತ್ರಿಕೂಟ ಹೇಳಿಕೆಯಲ್ಲಿ, ಸಮನ್ವಯ ಸಮಿತಿಯು ಅಂತಹ ನಿರೂಪಕರು ಮತ್ತು ಕಾರ್ಯಕ್ರಮಗಳ ಹೆಸರನ್ನು ಪಟ್ಟಿ ಮಾಡುತ್ತದೆ ಎಂದು ಹೇಳಿದೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರ ಮನೆಯಲ್ಲಿ ನಡೆದ ಇಂಡಿಯಾ ಮೈತ್ರಿಕೂಟದ ಸಮನ್ವಯ ಸಮಿತಿಯ ಮೊದಲ ಸಭೆಯಲ್ಲಿ ಬಹಿಷ್ಕರಿಸಲಿರುವ ಆಂಕರ್‌ಗಳು ಮತ್ತು ಕಾರ್ಯಕ್ರಮಗಳನ್ನು ಪಟ್ಟಿ ಮಾಡುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ ಈ ವಿಷಯ ಪ್ರಕಟಿಸಿದರು. “ಇಂಡಿಯಾ ಮೈತ್ರಿಕೂಟದ ಯಾವುದೇ ಪಕ್ಷಗಳು ತಮ್ಮ ಪ್ರತಿನಿಧಿಗಳನ್ನು ಕಳುಹಿಸದ ಕಾರ್ಯಕ್ರಮಗಳಿಗೆ ಆಂಕರ್‌ಗಳ ಹೆಸರನ್ನು ನಿರ್ಧರಿಸಲು ಸಮನ್ವಯ ಸಮಿತಿಯು ಮಾಧ್ಯಮದ ಉಪ-ಗುಂಪಿಗೆ ಅಧಿಕಾರ ನೀಡಿದೆ” ಎಂದು ಅವರು ಹೇಳಿದರು.

ಮಾಧ್ಯಮದ ಒಂದು ವಿಭಾಗದ ಬಗ್ಗೆ ಪ್ರತಿಪಕ್ಷಗಳು ಪದೇ ಪದೇ ಆರೋಪ ಮಾಡುತ್ತಿವೆ. ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯ ಸಂದರ್ಭದಲ್ಲಿ, ಮಾಧ್ಯಮದ ಒಂದು ವಿಭಾಗವು ತನಗೆ ಕಡಿಮೆ ಕವರೇಜ್ ನೀಡುತ್ತಿದೆ ಎಂದು ಕಾಂಗ್ರೆಸ್ ಪದೇ ಪದೇ ಆರೋಪಿಸಿದೆ.
ಯಾತ್ರೆಗೆ ಜನ ಬೆಂಬಲ ನೀಡುತ್ತಿದ್ದು, ಸಾಮಾಜಿಕ ಜಾಲತಾಣಗಳೂ ಸಹ ಯಾತ್ರೆಗೆ ಬೆಂಬಲ ನೀಡುತ್ತಿವೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಅದನ್ನು ಬಹಿಷ್ಕರಿಸುವುದನ್ನು ಮುಂದುವರೆಸಿವೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದರು.

ಹಲವಾರು ನಾಯಕರು ಪ್ರತೀಕಾರದ ಸುಳಿವು ನೀಡಿದ್ದಾರೆ ಎಂದು ವರದಿಗಳು ಹೇಳಿವೆ. ಸಂಪಾದಕರು ಯಾತ್ರೆಯನ್ನು ಬಹಿಷ್ಕರಿಸಿದ್ದಾರೆ ಎಂಬುದು ನನ್ನ ಆರೋಪ. ಲಕ್ಷಗಟ್ಟಲೆ ಜನ ಸೇರುತ್ತಿದ್ದಾರೆ. ಇಷ್ಟು ದೊಡ್ಡ ಪ್ರಚಾರವನ್ನು ನೀವು ತೋರಿಸುವುದಿಲ್ಲವೇ?” ಎಂದು ರಾಜಸ್ಥಾನ ಮುಖ್ಯಮಂತ್ರಿ ಗೆಹ್ಲೋಟ್‌ ಹೇಳಿದ್ದರು.
ಮೇ 2019 ರಲ್ಲಿ, ಕಾಂಗ್ರೆಸ್ ಒಂದು ತಿಂಗಳ ಕಾಲ ಟಿವಿ ಸುದ್ದಿವಾಹಿನಗಳ ಕಾರ್ಯಕ್ರಮಗಳನ್ನು ಬಹಿಷ್ಕರಿಸಿತ್ತು. ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸೀಟು ಹಂಚಿಕೆ ಪ್ರಕ್ರಿಯೆ ಆರಂಭಿಸಲು ಸಮನ್ವಯ ಸಮಿತಿ ನಿರ್ಧರಿಸಿದೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement