ಹುಬ್ಬಳ್ಳಿ ಈದ್ಗಾ ಮೈದಾನಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ : ಅಂಜುಮನ್ ಸಂಸ್ಥೆ ಮೇಲ್ಮನವಿ ತಿರಸ್ಕರಿಸಿದ ಧಾರವಾಡ ಹೈಕೋರ್ಟ್ ಪೀಠ

ಧಾರವಾಡ: ಹುಬ್ಬಳ್ಳಿಯ ರಾಣಿ ಕಿತ್ತೂರು ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ನೀಡಿದ್ದ ಮಹಾನಗರ ಪಾಲಿಕೆಯ ನಿರ್ಧಾರವನ್ನು ಪ್ರಶ್ನಿಸಿ ಹುಬ್ಬಳ್ಳಿಯ ಅಂಜುಮನ ಇಸ್ಲಾಂ ಸಂಸ್ಥೆಯವರು ಸಲ್ಲಿಸಿದ್ದ ಧಾರವಾಡ ಹೈಕೋರ್ಟ ಪೀಠ ತಿರಸ್ಕರಿಸಿದೆ.
ವಿಚಾರಣೆ ನಡೆಸಿದ ನ್ಯಾ. ಸಚಿನ‌ ಮಗದುಮ್ಮ‌ ಅವರಿದ್ದ ಏಕಸದಸ್ಯ ಪೀಠವು ಈ ತೀರ್ಪು ನೀಡಿದೆ. ಹೀಗಾಗಿ ಎರಡನೆ ವರ್ಷ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸಲು ತೊಂದರೆ ಇಲ್ಲವಾಗಿದೆ.
ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶನ ಪ್ರತಿಷ್ಠಾಪನೆಗೆ ಇದೀಗ ಮಹಾನಗರ ಪಾಲಿಕೆ ಠರಾವಿಗೆ ಒಪ್ಪಿಗೆ ಸಿಕ್ಕಂತಾಗಿದೆ. ಗಣೇಶ ಪ್ರತಿಷ್ಠಾಪನೆಗೆ ಕೇಂದ್ರ ಶಾಸಕರಾದ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ,ಮಾಜಿ ಮೇಯರ್ ಈರೇಶ ಅಂಚಟಗೇರಿ ಸೇರಿದಂತೆ ಅನೇಕರು ಕಳೆದ ಎರಡು ದಿನದಿಂದ ಹು-ಧಾ ಮಹಾನಗರ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ್ದರು.

ಆಚರಣೆಗೆ ಯಾವುದೇ ಅಡೆತಡೆ ಇಲ್ಲ: ಬೆಲ್ಲದ ಹೇಳಿಕೆ
ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಯಾವುದೇ ಅಡೆತಡೆ ಇಲ್ಲ ಎಂದು ಶಾಸಕ ಅರವಿಂದ್ ಬೆಲ್ಲದ ಹೇಳಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಇದರ ಮಾಲೀಕರು ಎಂದು ಕೋರ್ಟ್ ಹೇಳಿದೆ. ಅಈದ್ಗಾ ಮೈದಾನ ಮಹಾನಗರ ಪಾಲಿಕೆ ಅಡಿಯಲ್ಲಿದ್ದು ಅಂಜುಮನ್ ಸಂಸ್ಥೆಯವರು ಅಂಜುಮನ್ ಸಂಸ್ಥೆಯವರು ಪಾಲಿಕೆ ಕೆಲಸಕ್ಕೆ ಅಡ್ಡಿಪಡಿಸಬಾರದು ಎಂದು ಹೇಳಿದರು.
ಇದು ಹಿಂದೂಗಳ ಭಾವನೆಗೆ ಹಾಗೂ ಕರ್ನಾಟಕದ ಜನತೆಗೆ ಕೋರ್ಟ್ ತೀರ್ಪಿನಿಂದ ಜಯವಾಗಿದೆ. ಹೀಗಾಗಿ ಸರ್ಕಾರ ತಡ ಮಾಡದೇ ಗಣೇಶೋತ್ಸವ ಆಚರಣೆ ಬೇಗ ಪರವಾನಗಿ ನೀಡಬೇಕು’’ ಎಂದರು.

ಪ್ರಮುಖ ಸುದ್ದಿ :-   ರಾಜ್ಯದ ವಿಧಾನ ಪರಿಷತ್ತಿನ 6 ಸ್ಥಾನಗಳಿಗೆ ಚುನಾವಣೆ ಘೋಷಣೆ

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement