ದೊಡ್ಡಬಳ್ಳಾಪುರ : ಒಂದೇ ಕುಟುಂಬದ ನಾಲ್ವರು ಮಲಗಿದ್ದಲ್ಲೇ ಶವವಾಗಿ ಪತ್ತೆ

ದೊಡ್ಡಬಳ್ಳಾಪುರ:  ಕೋಳಿಫಾರಂ ಶೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ನಾಲ್ವರು ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ (Doddaballapur) ತಾಲೂಕಿನ ದೊಡ್ಡಬೆಳವಂಗಲ ಬಳಿ ಹೊಲೆಯರಹಳ್ಳಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಅನುಮಾನಾಸ್ಪದವಾಗಿ ಮೃತಪಟ್ಟ ನೇಪಾಳ ಮೂಲದ ನಾಲ್ವರನ್ನು ಕಾಲೇ ಸರೇರಾ (60), ಲಕ್ಷ್ಮಿ ಸರೇರಾ (50), ಉಷಾ ಸರೇರಾ (40) ಹಾಗೂ ಫೂಲ್ ಸರೇರಾ (16) ಎಂದು ಗುರಿತಿಸಲಾಗಿದೆ. ಕೋಳಿ ಫಾರಂನಲ್ಲಿ ಕೆಲಸ ಮಾಡಲು 8 ದಿನಗಳ ಹಿಂದೆಯಷ್ಟೇ ಇವರು ಕುಟುಂಬ ಸಮೇತ ಬಂದಿದ್ದರು ಎಂದು ಹೇಳಲಾಗಿದೆ.
ರಾತ್ರಿ ಶೆಡ್ ಬಾಗಿಲು ಹಾಕಿಕೊಂಡು ಮಲಗಿದ್ದವರು ಭಾನುವಾರ ಬೆಳಿಗ್ಗೆ ನೋಡಿದಾಗ ಮಲಗಿದ ರೀತಿಯಲ್ಲಿಯೇ ಶವವಾಗಿ ಪತ್ತೆಯಾಗಿದ್ದಾರೆ.
ರಾತ್ರಿ ಶೆಡ್ ಬಾಗಿಲು ಮುಚ್ಚಿ ಮಲಗಿದವರು ಬೆಳಗ್ಗೆಯಾದರೂ ಹೊರಗೆ ಬಾರದ ಕಾರಣ, ಅನುಮಾನಗೊಂಡ ಕೆಲವರು ಕಿಟಕಿ ತೆರೆದು ನೋಡಿದಾಗ ಅವರೆಲ್ಲರೂ ಶವವಾಗಿ ಮಲಗಿರುವುದು ಪತ್ತೆಯಾಗಿದೆ ಎಂದು ಹೇಳಲಾಗಿದೆ.
ಕೋಳಿ ಫಾರಂನಲ್ಲಿ ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ಕುಟುಂಬಸ್ಥರು ಇದ್ದಿಲು ಮೂಲಕ‌ ಹೊಗೆ ಹಾಕಿದ್ದರು. ಶೆಡ್ಡಿನ ಕಿಟಕಿ ಬಾಗಿಲು ಸಂಪೂರ್ಣ ಮುಚ್ಚಿದ ಕಾರಣ ಹೊಗೆ ಕೋಣೆಯಲ್ಲಿ ತುಂಬಿಕೊಂಡಿದೆ. ಆಮ್ಲಜನಕದ‌ ಕೊರತೆಯಿಂದ ನಾಲ್ವರು ಮೃತಪಟ್ಟಿರುವ ಶಂಕೆಯೂ ವ್ಯಕ್ತವಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಘಟನೆಗೆ ನಿಖರವಾದ ಕಾರಣ ತನಿಖೆಯಿಂದ ತಿಳಿದುಬರಬೇಕಿದೆ.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement