ಚಂದ್ರಯಾನ-3 : ವಿಕ್ರಂ ಲ್ಯಾಂಡರ್-ಪ್ರಜ್ಞಾನ ರೋವರ್ ಪುನಶ್ಚೇತನದ ಬಗ್ಗೆ ಇಸ್ರೋ ಹೇಳುವುದೇನು..?

ಬೆಂಗಳೂರು : ಚಂದ್ರನ ದಕ್ಷಿಣ ಧ್ರುವದಲ್ಲಿರುವ ಚಂದ್ರಯಾನ-3 ಮಿಷನ್ ವಿಕ್ರಂ ಲ್ಯಾಂಡರ್ ಮತ್ತು ಪ್ರಜ್ಞಾನ ರೋವರ್ ಪುನಶ್ಚೇತನ ನೀಡುವ ಪ್ರಯತ್ನವನ್ನು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಅಕ್ಟೋಬರ್ 6ರ ವರೆಗೂ ಮುಂದುವರಿಸಲಿದೆ.
ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್‌ ಇಳಿದು ನಂತರ 14 ದಿನಗಳ ಕಾಲ ಕಾರ್ಯಾಚರಣೆ ನಡೆಸಿ ಸದ್ಯ ಆಫ್‌ ಮೋಡ್‌ ನಲ್ಲಿರುವ ವಿಕ್ರಂ ಹಾಗೂ ರೋವರ್ ಜೊತೆ ಯಾವಾಗ ಸಂಪರ್ಕ ಸಾಧಿಸಲು ಸಾಧ್ಯವಾಗಬಹುದು ಎಂಬ ಬಗ್ಗೆ ಯಾವುದೇ ನಿಶ್ಚಿತತೆ ಇಲ್ಲ ಎಂದು ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ ಹೇಳಿದ್ದಾರೆ, ಆದರೆ ಪುನಶ್ಚೇತನಗೊಳಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
ಅದು ಯಾವಾಗ ಪುನಶ್ಚೇತನಗೊಳ್ಳುತ್ತದೆ ಎಂಬುದರ ಬಗ್ಗೆ ಯಾವುದನ್ನೂ ಹೇಳಲು ಸಾಧ್ಯವಿಲ್ಲ. ಅದು ನಾಳೆಯೂ ಆಗಿರಬಹುದು ಅಥವಾ ಚಂದ್ರ ಹಗಲಿನ ಕೊನೆಯ ದಿನವೂ ಆಗಿರಬಹುದು. ನಮ್ಮ ಪ್ರಯತ್ನ ನಡೆಯುತ್ತಿದೆ. ಇವೆರಡೂ ಪುನಶ್ಚೇತನಗೊಂಡರೆ ಮಹತ್ವದ ಸಾಧನೆಯಾಗಲಿದೆ ಎಂದು ಸೋಮನಾಥ ಅವರು ಹೇಳಿದ್ದಾರೆ.

ಚಂದ್ರನ ಒಂದು ಹಗಲಿನ (14 ದಿನ) ನಂತರ ಚಂದ್ರನ ಮೇಲೆ ಕತ್ತಲೆಯಾಗುವ ವೇಳೆ ವಿಕ್ರಂ ಲ್ಯಾಂಡರ್‌ ಹಾಗೂ ಪ್ರಜ್ಞಾನ್‌ ರೋವರ್‌ ಅನ್ನು ಸಂಪೂರ್ಣ ಚಾರ್ಜ್‌ ಮಾಡಿ ಆಫ್‌ ಮೋಡ್‌ನಲ್ಲಿ ಇರಿಸಲಾಗಿತ್ತು. ಚಂದ್ರನ ರಾತ್ರಿ (14 ದಿನ) ವೇಳೆ ಮೈನಸ್ 200 ರಿಂದ 250 ಡಿಗ್ರಿ ಸೆಂಟಿಗ್ರೇಡ್ ಶೀತದ ವಾತಾವರಣಕ್ಕೆ ಬರುತ್ತದೆ. ಆ ವೇಳೆ ಲ್ಯಾಂಡರ್ ಮತ್ತು ರೋವರ್ ಸಾಧನಗಳಿಗೆ ವಿದ್ಯುತ್ ದಾಸ್ತಾನು ಮಾಡುವ ಬ್ಯಾಟರಿಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇರುತ್ತದೆ.
ಚಂದ್ರನ ಮೇಲ್ಮೈ ಉಷ್ಣತೆ ಹೆಚ್ಚಿದಂತೆ ಇದು ಪುನಶ್ಚೇತನಗೊಳ್ಳುವ ಸಾಧ್ಯತೆ ಇರುತ್ತದೆ ಎನ್ನುವುದು ವಿಜ್ಞಾನಿಗಳ ನಿರೀಕ್ಷೆ. ಅತ್ಯಂತ ಕಡಿಮೆ ತಾಪಮಾನದಲ್ಲಿ ಕೂಡಾ ರೋವರ್ ಸುಸ್ಥಿತಿಯಲ್ಲಿ ಉಳಿಯುವುದಕ್ಕೆ ಸಂಬಂಧಿಸಿದಂತೆ ಪ್ರಯೋಗಗಳು ನಡೆದಿದೆ. ಆದರೆ, ವಿಕ್ರಂ ಲ್ಯಾಂಡರ್‌ ಬಗ್ಗೆ ಅಂಥದ್ದು ನಡೆದಿಲ್ಲ ಎಂದು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣ : ಇಬ್ಬರಿಗೆ ಜೀವಾವಧಿ ಶಿಕ್ಷೆ, ಮೂವರು ಖುಲಾಸೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement