ಶಾಲಾ ಪಠ್ಯಪುಸ್ತಕಗಳ ಪರಿಷ್ಕರಣೆಗೆ ಐದು ಸಮಿತಿ ರಚನೆ

ಬೆಂಗಳೂರು : ರಾಜ್ಯ ಸರ್ಕಾರ ಶಾಲಾ ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿದ್ದು, ಇದಕ್ಕಾಗಿ ಐದು ಸಮಿತಿಗಳನ್ನು ರಚಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶ ಹೊರಡಿಸಿದೆ.
ಕನ್ನಡ ಪ್ರಥಮ ಭಾಷೆ, ಕನ್ನಡ ದ್ವಿತೀಯ ಭಾಷೆ, ಕನ್ನಡ ತೃತೀಯ ಭಾಷೆ, 6, 7ನೇ ತರಗತಿಯ ಸಮಾಜ ವಿಜ್ಞಾನ ಹಾಗೂ 8, 9, 10ನೇ ತರಗತಿಯ ಸಮಾಜ ವಿಜ್ಞಾನಕ್ಕೆ ಪ್ರತ್ಯೇಕವಾಗಿ ಸಮಿತಿಗಳನ್ನು ರಚಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ನಿವೃತ್ತ ಪ್ರಾಧ್ಯಾಪಕ ಮಂಜುನಾಥ ಜೆ. ಹೆಗಡೆ ಅವರನ್ನು ಐದೂ ಸಮಿತಿಗಳ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ಬಿಜೆಪಿ ಆಡಳಿತ ಅವಧಿಯಲ್ಲಿ ರೋಹಿತ್‌ ಚಕ್ರತೀರ್ಥ ಸಮಿತಿ ಮಾಡಿದ ಪಠ್ಯಪುಸ್ತಕಗಳ ಎಲ್ಲ ತಿದ್ದುಪಡಿಯನ್ನು ರದ್ದು ಪಡಿಸಿದ್ದ ರಾಜ್ಯ ಕಾಂಗ್ರೆಸ್‌ ಸರ್ಕಾರ, ತಿದ್ದುಪಡಿಗೂ ಮೊದಲಿದ್ದ ಪಠ್ಯ ಕ್ರಮವನ್ನು ಪ್ರಸಕ್ತ ಶೈಕ್ಷಣಿಕ ವರ್ಷಕ್ಕೆ ಅನುಸರಿಸಲು ಸೂಚಿಸಿತ್ತು. ಈಗ ಪಠ್ಯ ಪರಿಷ್ಕರಣೆಗೆ ಸಮಿತಿಗಳನ್ನು ರಚಿಸಲಾಗಿದ್ದು, ಅದಕ್ಕೆ ಮೂರು ತಿಂಗಳ ಕಾಲಾವಕಾಶ ನೀಡಲಾಗಿದೆ. ಸಮಿತಿಗಳು ನೀಡುವ ಪರಿಷ್ಕರಣಾ ವರದಿ ಶಿಫಾರಸುಗಳನ್ನು 2024-25ನೇ ಸಾಲಿನಿಂದ ಜಾರಿಗೆ ತರಲಾಗುತ್ತದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಾಲ್ಕೈದು ದಿನ ಗುಡುಗು ಸಹಿತ ಭಾರಿ ಮಳೆ ಮುನ್ಸೂಚನೆ

ಸಮಿತಿಗಳ ಅಧ್ಯಕ್ಷರ ವಿವರ:
ಪ್ರಥಮ ಭಾಷೆ ಕನ್ನಡ: ಅಂಜನಪ್ಪ, ಪ್ರಾಧ್ಯಾಪಕರು, ತುಂಗಾಕಾಲೇಜು-ತೀರ್ಥಹಳ್ಳಿ.
ದ್ವಿತೀಯ ಭಾಷೆ ಕನ್ನಡ: ಎಚ್.ಎಸ್.ಸತ್ಯನಾರಾಯಣ, ಉಪನ್ಯಾಸಕ-ಸರ್ಕಾರಿ ಬಾಲಕಿಯರ ಪಿಯು ಕಾಲೇಜು ಬಸವನಹಳ್ಳಿ, ಚಿಕ್ಕಮಗಳೂರು.
ತೃತೀಯ ಭಾಷೆ ಕನ್ನಡ: ಮಂಜಣ್ಣ, ಪ್ರಾಧ್ಯಾಪಕ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ದಾವಣಗೆರೆ.
6,7ನೇ ತರಗತಿ ಸಮಾಜ ವಿಜ್ಞಾನ: ಎಂ.ಕಿರಣ, ಸಹಾಯಕ ಪ್ರಾಧ್ಯಾಪಕರು, ಕೇಂದ್ರೀಯ ವಿವಿ ಕಲಬುರಗಿ
8-10ನೇ ತರಗತಿ ಸಮಾಜ ವಿಜ್ಞಾನ: ಅಶ್ವತ್ಥನಾರಾಯಣ-ನಿವೃತ್ತ ಪ್ರಾಧ್ಯಾಪಕರು ಬೆಂಗಳೂರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement