ವಿಶ್ವಕಪ್‌ ಕ್ರಿಕೆಟ್‌-2023 : ಭಾರತದ ಅಂತಿಮ ತಂಡ ಪ್ರಕಟ, ಗಾಯಾಳು ಅಕ್ಷರ ಪಟೇಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದ ಆರ್. ಅಶ್ವಿನ್

ನವದೆಹಲಿ: ಭಾರತ ತಂಡವು ತನ್ನ 15 ಮಂದಿಯ ಏಕದಿನ ವಿಶ್ವಕಪ್ ತಂಡದಲ್ಲಿ ಗುರುವಾರ ಬದಲಾವಣೆ ಮಾಡಿದೆ. ಅಂತಿಮ ತಂಡವನ್ನು ಘೋಷಿಸಲು ಕೊನೆಯ ದಿನವಾದ ಗುರುವಾರ, ಗಾಯಗೊಂಡಿರುವ ಅಕ್ಷರ್ ಪಟೇಲ್ ಬದಲಿಗೆ ಅನುಭವಿ ಸ್ಪಿನ್ನರ್‌ ರವಿಚಂದ್ರನ್ ಅಶ್ವಿನ್ ಅವರನ್ನು ತಂಡಕ್ಕೆ ಸೇರ್ಪಡೆ ಮಾಡಿದೆ.
ಈ ತಿಂಗಳ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತದ ಏಷ್ಯಾ ಕಪ್ ಸೂಪರ್ ನಾಲ್ಕರ ಪಂದ್ಯದ ಸಮಯದಲ್ಲಿ ಆಲ್ ರೌಂಡರ್ ಪಟೇಲ್ ಎಡ ಕ್ವಾಡ್ರೈಸ್ಪ್ಸ್ ಸ್ಟ್ರೈನ್ ಗೆ ಪೆಟ್ಟು ಬಿದ್ದಿದ್ದರಿಂದ ತಂಡದಲ್ಲಿ ಬದಲಾವಣೆ ಮಾಡಲಾಗಿದೆ. 20 ತಿಂಗಳ ಅನುಪಸ್ಥಿತಿಯ ನಂತರ ಆಸ್ಟ್ರೇಲಿಯಾ ವಿರುದ್ಧದ 2-1 ಸರಣಿಯ ಗೆಲುವಿನಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅಶ್ವಿನ್‌ ಅವರಿಗೆ ಭಾರತ ODI ತಂಡಕ್ಕೆ ಮರಳಲು ದಾರಿ ಮಾಡಿಕೊಟ್ಟಿತು. ಆಫ್-ಸ್ಪಿನ್ನರ್ ಎರಡು ಪಂದ್ಯಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಪಡೆದು ತನ್ನ ತಡವಾದ ಕರೆಯನ್ನು ಸಮರ್ಥಿಸಿಕೊಂಡರು.
ಗಾಯದಿಂದ ಅಕ್ಷರ ಪಟೇಲ್ ಅವರನ್ನು ಹೊರಗಿಟ್ಟ ನಂತರ, ಬಿಸಿಸಿಐ ಆಯ್ಕೆಗಾರರು ಆ ಜಾಗವನ್ನು ತುಂಬಲು ಅಶ್ವಿನ್ ಅವರ ಅನುಭವಕ್ಕೆ ಮಣೆ ಹಾಕಿದ್ದಾರೆ. 37 ವರ್ಷದ ಅಶ್ವಿನ್ ದೊಡ್ಡ ವೇದಿಕೆಯಲ್ಲಿ ದೇಶವನ್ನು ಪ್ರತಿನಿಧಿಸಿದ್ದಾರೆ, ಎರಡು ODI ವಿಶ್ವಕಪ್ ನಲ್ಲಿ ಪಾಲ್ಗೊಂಡಿದ್ದರು. ಹಾಗೂ 2011 ರಲ್ಲಿ ದೇಶವನ್ನು ಭಾರತ ವಿಶ್ವಕಪ್‌ ಗೆಲ್ಲಲು ಅವರು ಕೊಡುಗೆಯೂ ಇದೆ. 115 ಏಕದಿನ ಪಂದ್ಯಗಳಲ್ಲಿ ಅಶ್ವಿನ್ 33.20 ಸರಾಸರಿಯಲ್ಲಿ 155 ವಿಕೆಟ್ ಪಡೆದಿದ್ದಾರೆ.

ಪ್ರಮುಖ ಸುದ್ದಿ :-   ಪುತ್ತೂರು | ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣ ; ಬಿಜೆಪಿ ಮುಖಂಡನ ಪುತ್ರ ಅರೆಸ್ಟ್‌

ಬ್ಯಾಟರ್‌ಗಳಾದ ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ವೇಗಿ ಜಸ್ಪ್ರೀತ್ ಬುಮ್ರಾ ಅವರು ದೀರ್ಘಕಾಲದ ಗಾಯಸ ಸಮಸ್ಯೆಯ ನಂತರ ತಂಡಕ್ಕೆ ಮರಳಿದ್ದಾರೆ. ಆತಿಥೇಯ ಭಾರತ ಅಕ್ಟೋಬರ್ 7 ರಂದು ಅಶ್ವಿನ್ ಅವರ ತವರು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಭಿಯಾನವನ್ನು ಪ್ರಾರಂಭಿಸುತ್ತದೆ. ಅವರು ಸೆಪ್ಟೆಂಬರ್ 30 ರಂದು ಇಂಗ್ಲೆಂಡ್ ವಿರುದ್ಧ ಮತ್ತು ಅಕ್ಟೋಬರ್ 3 ರಂದು ನೆದರ್ಲ್ಯಾಂಡ್ಸ್ ವಿರುದ್ಧ ಎರಡು ಅಭ್ಯಾಸ ಪಂದ್ಯಗಳನ್ನು ಆಡಲಿದ್ದಾರೆ.
ಭಾರತದ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement