‘ಇಸ್ಕಾನ್‌ ಗೋವುಗಳನ್ನು ಕಟುಕರಿಗೆ ಮಾರುತ್ತದೆ ಎಂಬ ಹೇಳಿಕೆಗೆ ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ. ಮಾನನಷ್ಟ ನೋಟಿಸ್‌ ಕಳುಹಿಸಿದ ಇಸ್ಕಾನ್

ನವದೆಹಲಿ: ಇಸ್ಕಾನ್ ವರ್ಸಸ್ ಮೇನಕಾ ಗಾಂಧಿ ಘರ್ಷಣೆಯು ಈಗ ಉಗ್ರ ಕಾನೂನು ಹೋರಾಟಕ್ಕೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಇಸ್ಕಾನ್ ತಮ್ಮ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ” ಎಂಬ ಹೇಳಿಕೆ ನೀಡಿದ್ದಕ್ಕಾಗಿಇಸ್ಕಾನ್‌ ಈಗ ಬಿಜೆಪಿ ಸಂಸದೆ ಮೇನಕಾ ಗಾಂಧಿ ವಿರುದ್ಧ 100 ಕೋಟಿ ರೂ.ಗಳ ಮಾನನಷ್ಟ ನೋಟಿಸ್ ಕಳುಹಿಸಿದೆ.
ಇಸ್ಕಾನ್ ಕೋಲ್ಕತ್ತಾದ ಉಪಾಧ್ಯಕ್ಷ ರಾಧಾರಮಣ ದಾಸ್ ಅವರ ಹೇಳಿಕೆಯಲ್ಲಿ, “ಇಸ್ಕಾನ್ ವಿರುದ್ಧ ಸಂಪೂರ್ಣ ಆಧಾರರಹಿತ ಆರೋಪಗಳನ್ನು ಹೊರಿಸಿರುವ ಮೇನಕಾ ಗಾಂಧಿ ಅವರಿಗೆ ನಾವು ಇಂದು 100 ಕೋಟಿ ರೂ.ಗಳ ಮಾನನಷ್ಟ ನೋಟಿಸ್ ಕಳುಹಿಸಿದ್ದೇವೆ. ಈ ಅವಹೇಳನಕಾರಿ, ನಿಂದನೀಯ ಮತ್ತು ದುರುದ್ದೇಶಪೂರಿತ ಆರೋಪಗಳಿಂದ ವಿಶ್ವದಾದ್ಯಂತ ಇಸ್ಕಾನ್ ಭಕ್ತರು, ಬೆಂಬಲಿಗರು ಮತ್ತು ಹಿತೈಷಿಗಳು ತೀವ್ರ ನೋವನ್ನು ಅನುಭವಿಸಿದ್ದಾರೆ. ಇಸ್ಕಾನ್ ವಿರುದ್ಧದ ಸುಳ್ಳು ಪ್ರಚಾರದ ವಿರುದ್ಧ ನ್ಯಾಯಕ್ಕಾಗಿ ನಮ್ಮ ಅನ್ವೇಷಣೆಯಲ್ಲಿ ನಾವು ಯಾವುದೇ ಪ್ರಯತ್ನವನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾರೆ.
ಸಂಸದರು ಹಾಗೂ ಮಾಜಿ ಕೇಂದ್ರ ಸಚಿವರೊಬ್ಬರು ದೊಡ್ಡ ಸಂಸ್ಥೆ ವಿರುದ್ಧ ಯಾವುದೇ ಪುರಾವೆಗಳಿಲ್ಲದೆ ಹೇಗೆ ಇಂತಹ ಹೇಳಿಕೆ ನೀಡಿದ್ದಾರೆ ಎಂದು ಕೇಳಿದರು.

ಪ್ರಮುಖ ಸುದ್ದಿ :-   ಪವಿತ್ರಾ ಜಯರಾಮ ಸಾವಿನ ಬೆನ್ನಲ್ಲೇ ಗೆಳೆಯ-ಕಿರುತೆರೆ ನಟ ಚಂದು ಆತ್ಮಹತ್ಯೆ

ಇಸ್ಕಾನ್ ಬಗ್ಗೆ ಮೇನಕಾ ಗಾಂಧಿ ಹೇಳಿದ್ದೇನು?
ಜಾಗತಿಕ ಧಾರ್ಮಿಕ ಸಂಸ್ಥೆಯಾದ ಇಸ್ಕಾನ್ ಒಂದು “ದೊಡ್ಡ ವಂಚಚ” ಎಂದು ಮಾಜಿ ಕೇಂದ್ರ ಸಚಿವರು ವಿಡಿಯೋದಲ್ಲಿ ಹೇಳಿದ್ದಾರೆ. ಇಂಟರ್‌ನ್ಯಾಶನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಷಿಯಸ್‌ನೆಸ್ (ಇಸ್ಕಾನ್) ಗೋವುಗಳನ್ನು ಕಸಾಯಿಖಾನೆಗಳಿಗೆ ಮಾರುತ್ತದೆ ,ಆದರೆ ಗೋವುಗಳನ್ನು ರಕ್ಷಿಸುವಂತೆ ನಟಿಸುತ್ತದೆ ಎಂದು ಅವರು ಹೇಳುವುದನ್ನು ಕೇಳಬಹುದು.
“ಅವರು ಸರ್ಕಾರಿ ನಿಧಿಯಿಂದ ಗೋಶಾಲೆಗಳನ್ನು (ಗೋಶಾಲೆಗಳನ್ನು) ನಿರ್ವಹಿಸುತ್ತಾರೆ. ಅವರು ಸರ್ಕಾರದಿಂದ ಗೋಶಾಲೆಗಳಿಗೆ ನಿವೇಶನಗಳನ್ನು ಸಹ ಪಡೆಯುತ್ತಾರೆ” ಎಂದು ಗಾಂಧಿ ಹೇಳಿದರು. “ಆದರೆ ಅಲ್ಲಿ ಯಾವುದೇ ಕರು ಇಲ್ಲ … ಇಸ್ಕಾನ್ ಅವರ ಎಲ್ಲಾ ಹಸುಗಳನ್ನು ಕಟುಕರಿಗೆ ಮಾರಾಟ ಮಾಡುತ್ತಿದೆ,” ಎಂದು ಅವರು ಆರೋಪಿಸಿದರು.

“ಅವರು ತಮ್ಮ ಇಡೀ ಜೀವನವು ಹಾಲಿನ ಮೇಲೆ ಅವಲಂಬಿತವಾಗಿದೆ ಎಂದು ಅವರು ಹೇಳುತ್ತಾರೆ. ಬಹುಶಃ ಅವರು ಮಾಡಿದಷ್ಟು ಜಾನುವಾರುಗಳನ್ನು ಯಾರೂ ಕಟುಕರಿಗೆ ಮಾರಾಟ ಮಾಡಿಲ್ಲ ಎಂದು ಮೇನಕಾ ಗಾಂಧಿ ವೀಡಿಯೊವೊಂದರಲ್ಲಿ ಹೇಳಿದ್ದರು.
ಇದಕ್ಕೆ ಬುಧವಾರ ಪ್ರತಿಕ್ರಿಯಿಸಿದ್ದ ಇಸ್ಕಾನ್, ಆಕೆಯ ಆರೋಪವನ್ನು ಪ್ರಬಲವಾಗಿ ಅಲ್ಲಗಳೆದಿದೆ. ಇಸ್ಕಾನ್ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ್ ಮಾತನಾಡಿ, ಹಸುಗಳು ಮತ್ತು ಹೋರಿಗಳನ್ನು ರಕ್ಷಿಸಲಾಗುತ್ತದೆ. ಕಟುಕರಿಗೆ ಮಾರುವುದಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೂ ಆರೋಪವನ್ನು ಸಾರಾಸಗಟಾಗಿ ಅಲ್ಲಗಳೆದಿದ್ದಾರೆ.

ಪ್ರಮುಖ ಸುದ್ದಿ :-   ಆಗ್ರಾದಲ್ಲಿ ತಾಜ್ ಮಹಲಿಗೇ ಸ್ಪರ್ಧೆ ಒಡ್ಡುವ ಬಿಳಿ ಅಮೃತಶಿಲೆಯ ಮತ್ತೊಂದು ʼಅದ್ಭುತʼ ನಿರ್ಮಾಣವೇ ಈ ‘ಸೋಮಿ ಬಾಗ್’...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement