ನವದೆಹಲಿ: ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳು (OMCs) ಭಾನುವಾರ 19 ಕೆಜಿ ವಾಣಿಜ್ಯ ಎಲ್ಪಿಜಿ (LPG) ಸಿಲಿಂಡರ್ಗಳ ಬೆಲೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ 209 ರೂ.ಗಳನ್ನು ಹೆಚ್ಚಿಸಿವೆ.
ತೈಲ ಕಂಪನಿಗಳು 19 ಕೆಜಿ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯನ್ನು 158 ರೂ ಕಡಿತಗೊಳಿಸಿದ ಸುಮಾರು ಒಂದು ತಿಂಗಳ ನಂತರ ಬೆಲೆಯಲ್ಲಿ ಈ ಹೆಚ್ಚಳವಾಗಿದೆ.
ವಾಣಿಜ್ಯ ಮತ್ತು ಗೃಹಬಳಕೆಯ LPG (ದ್ರವೀಕೃತ ಪೆಟ್ರೋಲಿಯಂ ಅನಿಲ) ಸಿಲಿಂಡರ್ಗಳ ಬೆಲೆಯು ಪ್ರತಿ ತಿಂಗಳ ಮೊದಲ ದಿನದಂದು ಮಾಸಿಕ ಪರಿಷ್ಕರಣೆಗಳಿಗೆ ಒಳಗಾಗುತ್ತದೆ. ಹಾಗಾಗಿ ಹೆಚ್ಚಿದ ವಾಣಿಜ್ಯ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿಂದಲೇ ಜಾರಿಗೆ ಬರಲಿದೆ. ಆದರೆ, ಗೃಹಬಳಕೆಯ ಎಲ್’ಪಿಜಿ ಸಿಲಿಂಡರ್’ಗಳ ಬೆಲೆಯಲ್ಲಿ ಯಾವುದೇ ಹೆಚ್ಚಳವಾಗಿಲ್ಲ.
ವಾಣಿಜ್ಯ LPG ಸಿಲಿಂಡರ್ಗಳ ಇತ್ತೀಚಿನ ಬೆಲೆಗಳು ಇಲ್ಲಿವೆ:
ದೆಹಲಿ- 1,731.50 ರೂ.
ಮುಂಬೈ- 1,684 ರೂ.
ಲಕ್ನೋ- 1,845 ರೂ.
ಚೆನ್ನೈ- 1,898 ರೂ.
ಬೆಂಗಳೂರು- 1,813 ರೂ
ಕೋಲ್ಕತ್ತಾ- 1,839 ರೂ.
ನಿಮ್ಮ ಕಾಮೆಂಟ್ ಬರೆಯಿರಿ