ನವದೆಹಲಿ: ಬ್ರಿಟನ್‌ನಲ್ಲಿರುವ ಭಾರತೀಯ ಹೈಕಮಿಷನರ್ ವಿಕ್ರಂ ದೊರೈಸ್ವಾಮಿ ಅವರನ್ನು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿರುವ ಗುರುದ್ವಾರಕ್ಕೆ ಪ್ರವೇಶಿಸದಂತೆ ಶುಕ್ರವಾರ ಖಲಿಸ್ತಾನಿ ಬೆಂಬಲಿಗರು ತಡೆದಿರುವ ಕೃತ್ಯವನ್ನು ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಖಂಡಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾವು, “ಸಿಖ್ ಆರಾಧನಾ ಸ್ಥಳದ ಶಾಂತಿಯುತ ಪ್ರಕ್ರಿಯೆಗೆ ಅಡ್ಡಿಪಡಿಸುವ ಇಂತಹ ನಡವಳಿಕೆಯನ್ನು ಗ್ಲ್ಯಾಸ್ಗೋ ಗುರುದ್ವಾರ ಬಲವಾಗಿ ಖಂಡಿಸುತ್ತದೆ” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 29 ರ ಘಟನೆಗಳನ್ನು ವಿವರಿಸಿದ ಗುರುದ್ವಾರ, ಗ್ಲಾಸ್ಗೋ ಪ್ರದೇಶದ ಹೊರಗಿನ ಕೆಲವು ಅಪರಿಚಿತ ವ್ಯಕ್ತಿಗಳು ವಿಕ್ರಂ ದೊರೈಸ್ವಾಮಿ ಅವರ ಭೇಟಿಗೆ ಅಡ್ಡಿಪಡಿಸಲು ಪ್ರಯತ್ನಿಸಿದರು ಎಂದು ಅದು ಹೇಳಿದೆ.
“ಸಂದರ್ಶಕರು ಅಲ್ಲಿಂದ ನಿರ್ಗಮನದ ನಂತರ, ಈ ಅಶಿಸ್ತಿನ ವ್ಯಕ್ತಿಗಳು ಗುರುದ್ವಾರ ಸಭಾಕ್ಕೆ ತೊಂದರೆಗೊಳಿಸುವುದನ್ನು ಮುಂದುವರೆಸಿದರು. ನಂತರ ಹಾಜರಾದ ಪೋಲೀಸ್ ಸ್ಕಾಟ್ಲೆಂಡ್ ಪೊಲೀಸರು ವಿಷಯದ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ಗುರುದ್ವಾರ ಗುರು ಗ್ರಂಥ ಸಾಹಿಬ್ ಸಿಖ್ ಸಭಾ ಹೇಳಿದೆ.
ಖಲಿಸ್ತಾನಿ ಬ್ರಿಟಿಷ್ ಸಿಖ್ ಬೆಂಬಲಿಗರ ಗುಂಪು ವಿಕ್ರಂ ದೊರೈಸ್ವಾಮಿ ಅವರನ್ನು ಗುರುದ್ವಾರಕ್ಕೆ ಪ್ರವೇಶಿದಂತೆ ತಡೆದರು. ಅವರಿಗೆ ಗುರುದ್ವಾರದ ಒಳಗೆ ಸ್ವಾಗತವಿಲ್ಲ ಎಂದು ಹೇಳಿದರು. ಆಲ್ಬರ್ಟ್ ಡ್ರೈವ್‌ನಲ್ಲಿ ಗ್ಲ್ಯಾಸ್ಗೋ ಗುರುದ್ವಾರದಲ್ಲಿ ಗುರುದ್ವಾರ ಸಮಿತಿಯೊಂದಿಗೆ ಭಾರತೀಯ ರಾಯಭಾರಿ ಸಭೆ ಆಯೋಜಿಸಿದ್ದರು.
ಘಟನೆಯ ನಂತರ, ಭಾರತವು ಶನಿವಾರ ಯುನೈಟೆಡ್ ಕಿಂಗ್‌ಡಮ್‌ನೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದೆ, ಘಟನೆಯ ಹಿಂದಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ. ಲಂಡನ್‌ನಲ್ಲಿರುವ ಭಾರತದ ಹೈಕಮಿಷನ್ ಹೇಳಿಕೆಯಲ್ಲಿ, ಸ್ಕಾಟ್ಲೆಂಡ್‌ನ ಹೊರಗಿನ ಮೂವರು ರಾಯಭಾರಿಯ ಭೇಟಿಗೆ “ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದಾರೆ” ಎಂದು ತಿಳಿಸಿದೆ.
ಮೂವರಲ್ಲಿ ಒಬ್ಬರು ರಾಯಭಾರಿಯ ಕಾರಿನ ಬಾಗಿಲನ್ನು ಬಲವಂತವಾಗಿ ತೆರೆಯಲು ಪ್ರಯತ್ನಿಸಿದರು, ಇದಕ್ಕೆ ಸೂಕ್ತ ಪೊಲೀಸ್ ಪರಿಗಣನೆಯ ಅಗತ್ಯವಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಕೆನಡಾದ ನೆಲದಲ್ಲಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜಾರ್ ಹತ್ಯೆಗೆ ಸಂಬಂಧಿಸಿದಂತೆ ಭಾರತ ಮತ್ತು ಕೆನಡಾ ನಡುವೆ ಭಾರಿ ರಾಜತಾಂತ್ರಿಕ ಕಲಹದ ನಡುವೆ ಈ ಘಟನೆ ನಡೆದಿದೆ.
ನಿಮ್ಮ ಕಾಮೆಂಟ್ ಬರೆಯಿರಿ