ನಾಲೆಗೆ ಬಿದ್ದ ಮಗಳನ್ನು ರಕ್ಷಿಸಲು ಹೋಗಿ ಒಂದೇ ಕುಟುಂಬದ ಮೂವರು ಸಾವು

ಮೈಸೂರು : ಒಂದೇ ಕುಟುಂಬದ ಮೂವರು ನೀರು ಪಾಲಾದ ಘಟನೆ ಮೈಸೂರು ಜಿಲ್ಲೆ ಎಚ್.ಡಿ‌.ಕೋಟೆ ತಾಲೂಕಿನ ಚಂಗೌಡನಹಳ್ಳಿ ಗ್ರಾಮದಲ್ಲಿ ನಡೆದ ವರದಿಯಾಗಿದೆ.
ಕೈಕಾಲು ತೊಳೆಯಲು ಹೋದಾಗ ಮಗಳು ಆಕಸ್ಮಿಕವಾಗಿ ಕಾಲು ಜಾರಿ ನಾಲೆಗೆ ಬಿದ್ದ ವೇಳೆ ಅವಳನ್ನು ರಕ್ಷಿಸಲು ಹೋಗಿ ಅಪ್ಪ, ಅಮ್ಮ, ಮಗಳು ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಮಹಮ್ಮದ್ ಕಪೀಲ್ (42), ಶಾವರ ಭಾನು (35), ಶಾಹೀರಾ ಭಾನು(20) ಎಂದು ಗುರುತಿಸಲಾಗಿದೆ.
ಅಜ್ಜಿಯ ತಿಥಿ ಕಾರ್ಯಕ್ಕಾಗಿ ಕಪೀಲ್ ಕುಟುಂಬ ಸರಗೂರು ಗ್ರಾಮಕ್ಕೆ ಬಂದಿದ್ದರು. ತಿಥಿ ಕಾರ್ಯ ಮುಗಿಸಿ ನುಗು ಜಲಾಶಯದ ಬಲದಂಡೆ ನಾಲೆಯಲ್ಲಿ ಕೈ ಕಾಲು ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಶಾಹೀರಾ ಭಾನು ಕಾಲು ಜಾರಿ ಬಿದ್ದಿದ್ದಾಳೆ, ಅವಳ ರಕ್ಷಣೆಗೆ ಹೋದ ಅಪ್ಪ, ಅಮ್ಮ ಸಹ ನೀರಿಗೆ ಬಿದ್ದಿದ್ದಾರೆ. ಮೂವರು ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಮೂವರ ಮೃತ ದೇಹ ಹೊರಕ್ಕ ತೆಗೆದಿದ್ದಾರೆ. ಸರಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ಹೊನ್ನಾವರ : ಹೆಲ್ಮೆಟ್‌ ಧರಿಸಿಲ್ಲವೆಂದು ಲಾರಿ ಚಾಲಕನಿಗೆ ದಂಡ ಹಾಕಿದ ಪೊಲೀಸರು...!

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement