ಮಣಿಪುರ: ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣ, ಇಬ್ಬರು ಮಹಿಳೆಯರು ಸೇರಿ ನಾಲ್ವರ ಬಂಧನ

ಇಂಫಾಲ : ಮಣಿಪುರದಲ್ಲಿ ನಡೆದ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರಿಯಾ ತನಿಖಾ ಸಂಸ್ಥೆ (ಸಿಬಿಐ) ನಾಲ್ವರು ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಮಣಿಪುರ ಪೊಲೀಸ್ ಮತ್ತು ಭಾರತೀಯ ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ಕ್ರ್ಯಾಕ್ ಘಟಕವು ಶಂಕಿತರನ್ನು ಇಂಫಾಲದಿಂದ 51 ಕಿಮೀ ದೂರದಲ್ಲಿರುವ ಚುರಚಂದ್‌ಪುರದಲ್ಲಿ ಬಂಧಿಸಲಾಗಿದೆ.
ಬಂಧನಕ್ಕೊಳಗಾದ ನಾಲ್ವರಲ್ಲಿ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರಿದ್ದಾರೆ. ವಶಕ್ಕೆ ಪಡೆಯಲಾಗಿರುವ ಇಬ್ಬರು ಹುಡುಗಿಯರು ಎನ್ನಲಾಗಿದೆ. ಬಂಧಿತ ನಾಲ್ವರನ್ನು ಅಸ್ಸಾಂನ ಗುವಾಹತಿಗೆ ರವಾನಿಸಲಾಗಿದೆ.
ಬಂಧಿತ ಆರೋಪಿಗಳನ್ನು ಪಾವೊಮಿನ್ಲುನ್ ಹಾಕಿಪ್, ಮಲ್ಸಾವ್ನ್ ಹಾಕಿಪ್, ಲಿಂಗ್ನಿಚಾಂಗ್ ಬೈಟ್ ಮತ್ತು ತಿನ್ನೆಖೋಲ್ ಎಂದು ಗುರುತಿಸಲಾಗಿದೆ. ಲಿಂಗ್ನೀಚಾಂಗ್ ಬೈಟ್ ಕೊಲೆಯಾದ ವಿದ್ಯಾರ್ಥಿನಿಯ ಸ್ನೇಹಿತ. ಶಂಕಿತರಲ್ಲಿ ಒಬ್ಬಾಕೆ ಚುರಾಚಂದ್‌ಪುರ ಮೂಲದ ದಂಗೆಕೋರ ಗುಂಪಿನ ಸದಸ್ಯನ ಪತ್ನಿ ಎಂದು ಹೇಳಲಾಗಿದೆ.
ಹತ್ಯೆಗೆ ಕಾರಣವಾದ ಕೆಲವು ಪ್ರಮುಖ ಆರೋಪಿಗಳನ್ನು ಚುರಚಂದ್‌ಪುರದಿಂದ ಬಂಧಿಸಲಾಗಿದೆ .ಇಬ್ಬರು ವಿದ್ಯಾರ್ಥಿನಿಯರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ” ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು” ಎಂದು ಕೇಂದ್ರ ಗೃಹ ಸಚಿವರು ಭರವಸೆ ನೀಡಿದ್ದಾರೆ ಎಂದು ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಇಂಫಾಲ್ ಪಶ್ಚಿಮ ಜಿಲ್ಲೆಯ 17 ವರ್ಷದ ಬಾಲಕಿ ಹಿಜಾಮ್ ಲಿಂತೋಯಿಂಗಂಬಿ ಮತ್ತು 20 ವರ್ಷದ ಯುವಕ ಫಿಜಾಮ್ ಹೇಮ್‌ಜಿತ್ ಸಿಂಗ್ ನಾಪತ್ತೆಯಾಗಿದ್ದು, ಈ ವಾರ ಇಂಫಾಲ್ ಕಣಿವೆಯಲ್ಲಿ ಇಬ್ಬರು ವಿದ್ಯಾರ್ಥಿನಿಯರಿಗೆ ಸೇರಿದ ಎರಡು ಶವಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ನಂತರ ಇದು ಭಾರೀ ಪ್ರತಿಭಟನೆಗಳಿಗೆ ಕಾರಣವಾಯಿತು. ಪ್ರತಿಭಟನಾಕಾರರು ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.
ಸೆಪ್ಟೆಂಬರ್ 23 ರಂದು ಮಣಿಪುರ ಸರ್ಕಾರವು ಮೊಬೈಲ್ ಇಂಟರ್ನೆಟ್ ನಿಷೇಧವನ್ನು ತೆಗೆದುಹಾಕಿದ ನಂತರ ಈ ಇಬ್ಬರು ವಿದ್ಯಾರ್ಥಿಗಳ ಮೃತ ದೇಹಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು. ಇದು ಮಣಿಪುರದಲ್ಲಿ ಮತ್ತಷ್ಟು ಅಶಾಂತಿಗೆ ಕಾರಣವಾಯಿತು. ಸೆಪ್ಟೆಂಬರ್ 26 ರಂದು ಸರ್ಕಾರ ಇಂಟರ್ನೆಟ್ ನಿಷೇಧವನ್ನು ಮರು ಜಾರಿ ಮಾಡಿತು.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement