ನವದೆಹಲಿ: ರಾಂಚಿ-ದೆಹಲಿ ವಿಮಾನದಲ್ಲಿ ಇಬ್ಬರು ವೈದ್ಯರ ಸಕಾಲಿಕ ನೆರವಿನಿಂದ ವಿಮಾನದಲ್ಲಿ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಹೃದ್ರೋಗದಿಂದ ಬಳಲುತ್ತಿದ್ದ ಆರು ತಿಂಗಳ ಮಗುವನ್ನು ರಕ್ಷಿಸಲಾಗಿದೆ.
ಪೋಷಕರು ಮಗುವನ್ನು ಚಿಕಿತ್ಸೆಗಾಗಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ಗೆ (ಏಮ್ಸ್) ಕರೆದುಕೊಂಡು ಹೋಗುತ್ತಿದ್ದರು. ರಾಂಚಿಯಿಂದ ವಿಮಾನ ಟೇಕ್-ಆಫ್ ಆದ ನಂತರ, ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತು.
ಆತಂಕಗೊಂಡ ಪೋಷಕರು ವಿಮಾನ ಸಿಬ್ಬಂದಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು ಮತ್ತು ವೈದ್ಯಕೀಯ ನೆರವಿಗಾಗಿ ವಿಮಾನದಲ್ಲಿ ಯಾರಾದರೂ ವೈದ್ಯರಿದ್ದಾಯೇ ಎಂದು ಹುಡುಕಲು ವಿಮಾನದಲ್ಲಿ ಈ ಬಗ್ಗೆ ಪ್ರಕಟಣೆ ಮಾಡಲಾಯಿತು.
ಅದೃಷ್ಟವಶಾತ್ ವಿಮಾನದಲ್ಲಿದ್ದ ರಾಂಚಿ ಸದರ್ ಆಸ್ಪತ್ರೆಯ ವೈದ್ಯ ಡಾ. ಮೊಝಮ್ಮಿಲ್ ಫೆರೋಜ್ ಮತ್ತು ವೈದ್ಯಕೀಯ ಓದಿದ್ದ ಐಎಎಸ್ ಅಧಿಕಾರಿ ಡಾ. ನಿತಿನ್ ಕುಲಕರ್ಣಿ ಅವರು ಮಗುವಿನ ರಕ್ಷಣೆಗೆ ಧಾವಿಸಿದರು.
ವೈದ್ಯರು ವಯಸ್ಕರಿಗೆ ಮೀಸಲಾದ ಮಾಸ್ಕ್ ಬಳಸಿ ಮಗುವಿಗೆ ಆಮ್ಲಜನಕ ಪೂರೈಕೆ ಮಾಡಿದರು. ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನಂತರ, ಥಿಯೋಫಿಲಿನ್ ಚುಚ್ಚುಮದ್ದು ಸೇರಿದಂತೆ ಇತರ ತುರ್ತು ಔಷಧಿಗಳನ್ನು ಸಹ ಮಗುವಿಗೆ ನೀಡಲಾಯಿತು. ಪೋಷಕರ ಬಳಿ ಮಗುವಿಗೆ ಅಗತ್ಯವಾದ ಡೆಕ್ಸೋನಾ ಚುಚ್ಚುಮದ್ದು ಇತ್ತು, ಇದು ಪರಿಸ್ಥಿತಿಯನ್ನು ನಿರ್ವಹಿಸಲು ಸಹಾಯ ಮಾಡಿತು.
ಮಗು ಉಸಿರುಗಟ್ಟುತ್ತಿದೆ ಎಂದು ತಾಯಿ ಅಳುತ್ತಿದ್ದರು. ಡಾ. ಮೊಝಮ್ಮಿಲ್ ಮತ್ತು ನಾನು ಮಗುವಿನ ಆರೈಕೆ ಬಗ್ಗೆ ಕಾಳಜಿ ತೆಗೆದುಕೊಂಡೆವು. ಮಗುವಿನ ಆಕ್ಸಿಜನ್ ಮಾಸ್ಕ್ ಅಥವಾ ಕ್ಯಾನುಲಾ ಲಭ್ಯವಿಲ್ಲದ ಕಾರಣ ವಯಸ್ಕರ ಮಾಸ್ಕ್ ಮೂಲಕ ಆಮ್ಲಜನಕವನ್ನು ಸರಬರಾಜು ಮಾಡಲಾಯಿತು,” ಡಾ. ಕುಲಕರ್ಣಿ ಹೇಳಿದರು.
ತುರ್ತು ಔಷಧಗಳು ಮತ್ತು ಆಮ್ಲಜನಕದ ಸಹಾಯವನ್ನು ನೀಡಿದ ನಂತರ, ಮಗು ಸುಧಾರಣೆಯ ಕೆಲವು ಲಕ್ಷಣಗಳನ್ನು ತೋರಿಸಿತು. ಮೊದಲ 15-20 ನಿಮಿಷಗಳು “ಬಹಳ ನಿರ್ಣಾಯಕ ಮತ್ತು ಒತ್ತಡದ ಸಮಯ” ಎಂದು ವೈದ್ಯರು ಹೇಳಿದರು, ಏಕೆಂದರೆ ಮಗುವಿನ ಆರೋಗ್ಯದ ಪ್ರಗತಿಯನ್ನು ಅಳೆಯುವುದು ಕಷ್ಟಕರವಾಗಿತ್ತು. ಆದಾಗ್ಯೂ, ಸ್ವಲ್ಪ ಸಮಯದ ನಂತರ, ಮಗುವು ಶಬ್ದಗಳನ್ನು ಮಾಡಲಾರಂಭಿಸಿತು ಮತ್ತು ಕಣ್ಣುಗಳನ್ನು ತೆರೆಯಿತು, ಇದು ಪೋಷಕರಿಗೆ ದೊಡ್ಡ ಸಮಾಧಾನವನ್ನು ನೀಡಿತು.
“ನಾವು ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ಮಗುವಿಗೆ ಜನ್ಮತಃ ಪೇಟೆಂಟ್ ʼಡಕ್ಟಸ್ ಆರ್ಟೆರಿಯೊಸಸ್ (ಪಿಡಿಎ)ʼ ಎಂಬ ಹೃದಯದ ತೊಂದರೆಯಿದೆ ಎಂದು ಡಾ ಕುಲಕರ್ಣಿ ಹೇಳಿದರು.
ವಿಮಾನವು ದೆಹಲಿಗೆ ಆಗಮಿಸುವಾಗ ಆದ್ಯತೆಯ ಲ್ಯಾಂಡಿಂಗ್ ಮತ್ತು ಸಂಪೂರ್ಣ ವೈದ್ಯಕೀಯ ಬೆಂಬಲವನ್ನು ವೈದ್ಯರು ವಿನಂತಿಸಿದರು. ಒಂದು ಗಂಟೆಯ ನಂತರ ವಿಮಾನ ಲ್ಯಾಂಡ್ ಆಗಿದ್ದು, ಮಗುವನ್ನು ವೈದ್ಯಕೀಯ ತಂಡಕ್ಕೆ ಹಸ್ತಾಂತರಿಸಲಾಗಿದೆ.
ಪ್ರಸ್ತುತ ಜಾರ್ಖಂಡ್‌ನ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ನಿತಿನ್ ಕುಲಕರ್ಣಿ ಅವರು, “ಒಂದು ಗಂಟೆಗೂ ಹೆಚ್ಚು ಕಾಲ ನಮ್ಮ ಪ್ರಯತ್ನದ ನಂತರ ಬಂದು ಫಲಿತಾಂಶಕ್ಕೆ ನಾವು ಸಂತೋಷ ಮತ್ತು ತೃಪ್ತಿ ಹೊಂದಿದ್ದೇವೆ” ಎಂದು ಹೇಳಿದರು.
ಪರಿಸ್ಥಿತಿಯನ್ನು ಕಂಡ ಸಹ-ಪ್ರಯಾಣಿಕರೊಬ್ಬರು ವೈದ್ಯರನ್ನು X ನಲ್ಲಿ ಅಭಿನಂದಿಸಿದ್ದಾರೆ. “ವೈದ್ಯರು ದೇವರು ಕಳುಹಿಸಿದ ದೇವತೆಗಳು. ಇಂದು, ಇಂಡಿಗೋ ವಿಮಾನದಲ್ಲಿ ವೈದ್ಯರು 6 ತಿಂಗಳ ಮಗುವನ್ನು ಉಳಿಸುವುದನ್ನು ನಾನು ನೋಡಿದೆ. ಜಾರ್ಖಂಡ್‌ನ ಗವರ್ನರ್ ಹೌಸ್, IAS ಡಾ. ನಿತಿನ್ ಕುಲಕರ್ಣಿ ಅವರು ವೈದ್ಯರ ಪಾತ್ರವನ್ನು ವಹಿಸಿಕೊಂಡರು ಮತ್ತು ಮಗುವನ್ನು ಉಳಿಸಿದರು. ನಿಮಗೆ ಸೆಲ್ಯೂಟ್ ಸರ್,” ಎಂದು ಪ್ರಯಾಣಿಕ ಎ.ಎಸ್. ದಿಯೋಲ್ ಎಂಬವರು ಎಕ್ಸ್ ನಲ್ಲಿ ಬರೆದಿದ್ದಾರೆ
ನಿಮ್ಮ ಕಾಮೆಂಟ್ ಬರೆಯಿರಿ