ಹೋಮ್‌ ವರ್ಕ್‌ ಮಾಡದ್ದಕ್ಕೆ ತಲೆಗೆ ಹೊಡೆದ ಶಿಕ್ಷಕರು : ಯುಕೆಜಿ ವಿದ್ಯಾರ್ಥಿ ಸಾವು

ಹೈದರಾಬಾದ್: ಹೋಂ ವರ್ಕ್ ಪೂರ್ಣಗೊಳಿಸಿಲ್ಲವೆಂದು ಶಿಕ್ಷಕರೊಬ್ಬರು ಐದು ವರ್ಷದ ಬಾಲಕನಿಗೆ ತಲೆಗೆ ಸ್ಲೇಟ್‌ನಿಂದ ಹೊಡೆದ ನಂತರ ಆತ ಮೃತಪಟ್ಟಿದ್ದಾನೆ ಎಂದು ಆರೋಪಿಸಿರುವ ಘಟನೆ ವರದಿಯಾಗಿದೆ.
ರಾಮಂತಪುರ ಸಮೀಪದ ವಿವೇಕನಗರದ ಪ್ಲೇ ಸ್ಕೂಲ್‌ನಲ್ಲಿ ಈ ಘಟನೆ ನಡೆದಿದ್ದು, ಬಾಲಕನ್ನು ಹೇಮಂತ (೫) ಎಂದು ಗುರುತಿಸಲಾಗಿದೆ. ವರದಿಗಳ ಪ್ರಕಾರ, ಶುಕ್ರವಾರ ಶಾಲೆಯಲ್ಲಿ ತಲೆಗೆ ಪಾಟಿಯಿಂದ ಹೊಡೆದ ನಂತರ ಬಾಲಕ ಹೇಮಂತ ಕುಸಿದು ಬಿದ್ದಿದ್ದಾನೆ. ಶಾಲೆಯ ಅಧಿಕಾರಿಗಳಿಂದ ಮಾಹಿತಿ ಪಡೆದ ನಂತರ ದಿನಗೂಲಿ ನೌಕರರಾದ ಆತನ ಪೋಷಕರಾದ ನಾಗರಾಜು ಮತ್ತು ಶಾರದಾ ಅವರು ಬಾಲಕನನ್ನು ಮನೆಗೆ ಕರೆದೊಯ್ದಿದ್ದಾರೆ.. ಆದರೆ ಬಾಲಕ ಸೋಮವಾರ ಮೃತಪಟ್ಟಿದ್ದಾನೆ. ಪಾಲಕರು ಮತ್ತು ಸಂಬಂಧಿಕರು ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದು, ಅಂತಿಮ ವಿಧಿವಿಧಾನಕ್ಕಾಗಿ ಮೃತದೇಹವನ್ನು ವನಪರ್ತಿ ಜಿಲ್ಲೆಯ ಅವರ ಸ್ವಗ್ರಾಮಕ್ಕೆ ಒಯ್ಯಲಾಯಿತು ಎಂದು ವರದಿಯಾಗಿದೆ.
ಬಾಲಕ ಹೇಮಂತನ ಸಂಬಂಧಿ ರವೀಂದರ ಈ ಬಗ್ಗೆ ಡೆಕ್ಕನ್ ಕ್ರಾನಿಕಲ್‌ಗೆ ಜೊತೆ ಮಾತನಾಡಿದ್ದಾರೆ. ಮಗು ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. “ಮಗು ತೀವ್ರ ಜ್ವರದಿಂದ ಬಳಲುತ್ತಿತ್ತು ಮತ್ತು ಈ ಪ್ರಕ್ರಿಯೆಯಲ್ಲಿ ಆತನ ತಲೆಗೆ ಪಟ್ಟು ಬಿದ್ದ ನಂತರ ಶಾಲೆಯ ನೆಲದ ಮೇಲೆ ಪ್ರಜ್ಞಾಹೀನನಾಗಿದ್ದಾನೆ ಎಂದು ಹೇಳಿದ್ದಾರೆ.
ಉಪ್ಪಲ್ ಇನ್ಸ್‌ಪೆಕ್ಟರ್ ಆರ್.ಗೋವಿಂದ ರೆಡ್ಡಿ ಅವರು ತಮಗೆ ಯಾವುದೇ ದೂರು ಬಂದಿಲ್ಲ ಮತ್ತು ಅಂತಹ ಘಟನೆಯ ಬಗ್ಗೆ ನನಗೆ ತಿಳಿದಿಲ್ಲ ಎಂದು ತಿಳಿಸಿದ್ದಾರೆ ಎಂದು ಅವರನ್ನು ಉಲ್ಲೇಖಿಸಿ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿದೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement