ಬೆಂಗಳೂರು : ಪೊಲೀಸ್‌ ಆಯುಕ್ತರ ಕಚೇರಿ ಬಳಿಯ ಬಸ್‌ ಶೆಲ್ಟರ್‌ ಅನ್ನೇ ಕದ್ದೊಯ್ದ ಕಳ್ಳರು…!

ಬೆಂಗಳೂರು: ಬೆಂಗಳೂರಿನಲ್ಲಿ ಬಸ್ ತಂಗುದಾಣವನ್ನು ನಿರ್ಮಿಸಿದ ಒಂದು ವಾರದ ನಂತರ 10 ಲಕ್ಷ ರೂ.ವೆಚ್ಚದಲ್ಲಿ ಸ್ಟೀಲ್ ರಚನೆಯೊಂದಿಗೆ ನಿರ್ಮಾಣವಾಗಿದ್ದ ಬಸ್‌ ನಿಲ್ದಾಣ ನಾಪತ್ತೆಯಾಗಿದೆ…!
ಬೆಂಗಳೂರಿನ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯ ಬಳಿಯಲ್ಲೇ ನೂತನವಾಗಿ ನಿರ್ಮಿಸಲಾಗಿದ್ದ ಬಿಎಂಟಿಸಿ ಬಸ್ ತಂಗುದಾಣ (ಬಸ್ ಶೆಲ್ಟರ್)ವನ್ನು ಇತ್ತೀಚಿಗೆ ಕಳ್ಳರು ನಾಪತ್ತೆ ಮಾಡಿದ್ದಾರೆ.
ಈ ಜಾಗದಲ್ಲಿದ್ದ ಹಳೆಯ ಬಸ್ ಶೆಲ್ಟರ್ ಶಿಥಿಲವಾಗಿದ್ದರಿಂದ, ಬೆಂಗಳೂರು ಮಹಾನಗರ ಪಾಲಿಕೆಯು (ಬಿಬಿಎಂಪಿ) ಹಳೆಯ ಬಸ್ ಶೆಲ್ಟರ್ ತೆರವುಗೊಳಿಸಿ ಹೊಸ ಬಸ್ ಶೆಲ್ಟರ್ ನಿರ್ಮಿಸಿತ್ತು. ಆಗಸ್ಟ್‌ ಕೊನೆಯಲ್ಲಿ ಹೊಸ ಬಸ್ ಶೆಲ್ಟರ್ ಅನ್ನು ಸಾರ್ವಜನಿಕರ ಬಳಕೆಗೆ ನೀಡಲಾಗಿತ್ತು. ಅದಾಗಿ ಸುಮಾರು ಒಂದು ತಿಂಗಳ ಅಂತರದಲ್ಲಿ ಬಸ್ ಶೆಲ್ಟರ್ ಬಹುತೇಕ ಮಾಯವಾಗಿದೆ. ಅಂದರೆ, ಶೆಲ್ಟರ್ ನಿರ್ಮಾಣಕ್ಕಾಗಿ ಸ್ಟೇನ್ ಲೆಸ್ ಸ್ಟೀಲ್ ಮುಂತಾದ ಬೆಲೆಬಾಳುವ ಸಾಮಗ್ರಿಗಳನ್ನು ಬಳಸಲಾಗಿತ್ತು. ಕಳ್ಳರು ಇದನ್ನು ಹಂತಹಂತವಾಗಿ ಕದ್ದಿದ್ದಾರೆ.
ಬಸ್ ತಂಗುದಾಣವು ಕನ್ನಿಂಗ್ಹ್ಯಾಮ್ ರಸ್ತೆಯಲ್ಲಿತ್ತು ಮತ್ತು ಇದನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ನಿರ್ವಹಿಸುತ್ತಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ಶಿವಸೇನೆ ನಾಯಕಿ ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಅಪಘಾತ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಶೆಲ್ಟರ್ ನಿರ್ಮಾಣದ ಹೊಣೆ ಹೊತ್ತಿರುವ ಕಂಪನಿಯೊಂದರ ಹಿರಿಯ ಅಧಿಕಾರಿಯೊಬ್ಬರು ಬಸ್ ಶೆಲ್ಟರ್ ಮಾಯವಾದ ಬಗ್ಗೆ ಸೆಪ್ಟೆಂಬರ್ 30 ರಂದು ದೂರು ನೀಡಿದ ನಂತರ ಪೊಲೀಸರು ಕಳ್ಳತನ ಪ್ರಕರಣ ದಾಖಲಾಗಿದೆ. ಖದೀಮರು ಶೆಲ್ಟರ್‌ನಲ್ಲಿದ್ದ ಸ್ಟೀಲ್ ಮುಂತಾದ ಬೆಲೆಬಾಳುವ ಸಾಮಗ್ರಿಗಳನ್ನು ಕದ್ದು ನಾಪತ್ತೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನೂತನ ಬಸ್ ಶೆಲ್ಟರ್ ಗಳನ್ನು ನಿರ್ಮಿಸಿಕೊಡುವಂತೆ ಬಿಬಿಪಿಎಂಪಿಯು ಖಾಸಗಿ ಕಂಪನಿಯೊಂದಕ್ಕೆ ಗುತ್ತಿಗೆ ನೀಡಿದೆ. ಈ ಕಂಪನಿಯು ಶೆಲ್ಟರ್ ಗಳನ್ನು ನಿರ್ಮಿಸಿದ ತಿಂಗಳಿಗೊಮ್ಮೆ ಅವುಗಳ ಬಗ್ಗೆ ಕಂಪನಿ ಪರಿಶೀಲನೆ ಮಾಡುತ್ತದೆ. ಎಂದಿನಿಂದ ಸೆಪ್ಟೆಂಬರ್‌ ಕೊನೆಯಲ್ಲಿ ಈ ಬಸ್ ಶೆಲ್ಟರ್ ನ ಸ್ಥಿತಿಗತಿಯನ್ನು ನೋಡಲು ಖಾಸಗಿ ಕಂಪನಿಯ ಅಧಿಕಾರಿಗಳು ಬಂದಿದ್ದಾಗ ಬಸ್ ಶೆಲ್ಟರ್ ಮಾಯವಾಗಿರುವುದು ಕಂಡಿದೆ. ಮೊದಲಿಗೆ, ಈ ಬಗ್ಗೆ ಬಿಬಿಎಂಪಿಯನ್ನು ಸಂಪರ್ಕಿಸಿದ ಕಂಪನಿಯವರು, ಬಿಬಿಎಂಪಿಯವರು ಶೆಲ್ಟರ್‌ ಅನ್ನು ತೆರವುಗೊಳಿಸಿದ್ದಾರೆಯೇ ಎಂದು ವಿಚಾರಿಸಿದೆ. ಇದಕ್ಕೆ ಬಿಬಿಎಂಪಿಯಿಂದ ತೆರವುಗೊಳಿಸಿಲ್ಲ ಎಂಬ ಉತ್ತರ ನೀಡಿದ್ದಾರೆ. ನಂತರ ಖಾಸಗಿ ಕಂಪನಿ ಅಧಿಕಾರಿ ಸೀದಾ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ 3-4 ದಿನ ಮಳೆ ಬೀಳುವ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement