ಏಷ್ಯನ್ ಗೇಮ್ಸ್ 2023: ಜಪಾನ್ ಸೋಲಿಸಿ ಚಿನ್ನ ಗೆದ್ದ ಭಾರತದ ಪುರುಷರ ಹಾಕಿ ತಂಡ; ಪ್ಯಾರಿಸ್ ಒಲಿಂಪಿಕ್ಸ್ ಗೆ ಅರ್ಹತೆ

ಹ್ಯಾಂಗ್‌ಝೌನ : ಚೀನಾದ ಹ್ಯಾಂಗ್‌ಝೌನ ನಲ್ಲಿ ಶುಕ್ರವಾರ, ಅಕ್ಟೋಬರ್ 6 ರಂದು ನಡೆದ ಏಷ್ಯನ್ ಗೇಮ್ಸ್ 2023 ರ ಹಾಕಿ ಪುರುಷರ ಫೈನಲ್‌ನಲ್ಲಿ ಭಾರತ ತಂಡವು ಜಪಾನ್ ಅನ್ನು 5-1 ಗೋಲುಗಳಿಂದ ಸೋಲಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿದೆ.
ಭಾರತದ ಪರ ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ಮತ್ತು ಅಮಿತ್ ರೋಹಿದಾಸ್ ಗೋಲು ಗಳಿಸುವ ಮೂಲಕ ಚಾಂಪಿಯನ್‌ ಬಾರತವು ಜಪಾನ್‌ ಅನ್ನು ಸೋಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಫೈನಲ್ ನಲ್ಲಿ. ಈ ಗೆಲುವಿನೊಂದಿಗೆ ಭಾರತವು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡಿದೆ.
ಭಾರತ ತನ್ನ ಪೂಲ್ ಎ ಪಂದ್ಯದಲ್ಲಿ ಜಪಾನ್ ಅನ್ನು 4-2 ಅಂತರದಿಂದ ಸೋಲಿಸಿತ್ತು ಮತ್ತು ಫೈನಲ್‌ನಲ್ಲಿ ಇದೇ ರೀತಿಯ ಆಕರ್ಷಕ ಆಲ್‌ರೌಂಡ್ ಪ್ರದರ್ಶನವನ್ನು ಪುನರಾವರ್ತಿಸಿತು. ಮೊದಲಾರ್ಧದಲ್ಲಿ ಜಪಾನ್ ಅದ್ಭುತ ಹೋರಾಟ ನೀಡಿತ್ತು. ಆದರೆ ಭಾರತವು ದ್ವಿತೀಯಾರ್ಧದಲ್ಲಿ ನಾಲ್ಕು ಗೋಲುಗಳೊಂದಿಗೆ ಸಂಪೂರ್ಣ ಪ್ರಾಬಲ್ಯ ಸಾಧಿಸಿತು.
ಪೆನಾಲ್ಟಿ ಕಾರ್ನರ್‌ನಿಂದ 14′ ನಿಮಿಷದಲ್ಲಿ ಭಾರತಕ್ಕೆ ಮುನ್ನಡೆ ನೀಡುವ ಅವಕಾಶವನ್ನು ಹರ್ಮನ್‌ಪ್ರೀತ್ ಕಳೆದುಕೊಂಡರು. ಅವರ ಪ್ರಯತ್ನವನ್ನು ಟಕುಮಿ ಅದ್ಭುತವಾಗಿ ತಡೆದರು. 17ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ಗೋಲು ಗಳಿಸುವ ಅವಕಾಶವನ್ನು ರೋಹಿದಾಸ್ ಕಳೆದುಕೊಂಡರು, ಜಪಾನ್‌ನ ರಕ್ಷಣಾ ವಿಭಾಗವು ಅದನ್ನು ತಡೆಯಿತು.
ಮನ್‌ಪ್ರೀತ್ 25 ನಿಮಿಷಗಳ ಅವಧಿಯಲ್ಲಿ ತನ್ನ 13 ನೇ ಗೋಲ್‌ನೊಂದಿಗೆ ಭಾರತಕ್ಕೆ ಮುನ್ನಡೆ ನೀಡಿದರು. ಜಪಾನ್ ಪುಟಿದೇಳಲು ವಿಫಲವಾದ ಕಾರಣ ಭಾರತವು ಅರ್ಧ ಸಮಯದ ವರೆಗೂ ಒಂದು ಗೋಲ್‌ನಿಂದ ಮುನ್ನಡೆ ಕಾಯ್ದುಕೊಂಡಿತು. ವಿರಾಮದ ನಂತರ ಭಾರತವು ಉತ್ತಮ ಪ್ರದರ್ಶನ ನೀಡಿತು. ನಾಲ್ಕು ಗೋಲುಗಳನ್ನು ಹೊಡೆಯಿತು. ಹರ್ಮನ್‌ಪ್ರೀತ್ 32′ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್‌ನಿಂದ ತನ್ನ ಮೊದಲ ಗೋಲು ಸೇರಿಸಿ ಭಾರತದ ಮುನ್ನಡೆ ಅಂತರ ಹೆಚ್ಚಿಸಿದರು.
ಮೂರನೇ ಕ್ವಾರ್ಟರ್‌ನಲ್ಲಿ ರೋಹಿದಾಸ್ ಪೆನಾಲ್ಟಿ ಕಾರ್ನರ್‌ನಿಂದ ಗೋಲ್‌ ಗಳಿಸಿ ಭಾರತವನ್ನು ಚಿನ್ನಕ್ಕಾಗಿ ಪ್ರಬಲ ಸ್ಥಾನದಲ್ಲಿ ಇರಿಸಿದರು. ಭಾರತದ ನಾಲ್ಕನೇ ಗೋಲಿಗೆ ಹಾರ್ದಿಕ್ ನೆರವಾದರು, ಇದನ್ನು 48′ ನಿಮಿಷದಲ್ಲಿ ಅಭಿಷೇಕ್ ಗೋಲಾಗಿ ಪರಿವರ್ತಿಸಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement