ಲೋಕಸಭೆ ಚುನಾವಣೆ 2024 : ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆ : ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟಕ್ಕೆ ಹೆಚ್ಚು ಸ್ಥಾನ, ಕಾಂಗ್ರೆಸ್‌ಗೆ ಲಾಭದ ಸಾಧ್ಯತೆ

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಸಮೀಕ್ಷೆಯ ಪ್ರಕಾರ ಕರ್ನಾಟಕದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) 16 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ, ಕಾಂಗ್ರೆಸ್ 10 ಮತ್ತು ಜೆಡಿಎಸ್‌ 2 ಸ್ಥಾನಗಳನ್ನು ಗಳಿಸಬಹುದಾಗಿದೆ.
ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಶೇ.44ರಷ್ಟು ಮತಗಳನ್ನು ಪಡೆಯಬಹುದು ಹಾಗೂ ಕಾಂಗ್ರೆಸ್ ಶೇ.40ರಷ್ಟು ಮತಗಳನ್ನು ಗಳಿಸುವ ಸಾಧ್ಯತೆಯಿದೆ ಮತ್ತು ಜೆಡಿಎಸ್ ಶೇ.11ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ.
ಕರ್ನಾಟಕದಲ್ಲಿ ಒಟ್ಟು 28 ಲೋಕಸಭಾ ಸ್ಥಾನಗಳಿವೆ. 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಸ್ಥಾನಗಳನ್ನು ಗೆದ್ದಿತ್ತು, ಹಿಂದಿನ ಲೋಕಸಭೆ ಚುನಾವಣೆಗಳಿಗೆ ಹೋಲಿಸಿದರೆ ಬಿಜೆಪಿ 9 ಸ್ಥಾನಗಳನ್ನು ಕಳೆದುಕೊಳ್ಳಬಹುದು ಮತ್ತು ಕಾಂಗ್ರೆಸ್ ಗೆ 9 ಸ್ಥಾನ ಲಾಭವಾಗಬಹುದು. ಅಲ್ಲದೆ, ಜೆಡಿಎಸ್‌ಗೂ ಒಂದು ಸ್ಥಾನ ಲಾಭವಾಗಬಹುದು.
ನೆರೆಯ ತಮಿಳುನಾಡಿನ ಬಗ್ಗೆ ಸಮೀಕ್ಷೆಯು ಡಿಎಂಕೆಗೆ ಶೇಕಡಾ 31 ಮತ್ತು ಎಐಎಡಿಎಂಕೆಗೆ ಶೇಕಡಾ 25 ರಷ್ಟು ಮತ ಹಂಚಿಕೆಯನ್ನು ಭವಿಷ್ಯ ನುಡಿದಿದೆ. ಕಾಂಗ್ರೆಸ್ ಶೇಕಡಾ 11 ರಷ್ಟು ಮತಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಬಿಜೆಪಿ ಶೇಕಡಾ 7 ರಷ್ಟು ಮಾತ್ರ ಗಳಿಸಬಹುದು. ಸ್ಥಾನಗಳ ಪ್ರಕಾರ, ಡಿಎಂಕೆ 21, ಎಐಎಡಿಎಂಕೆ 6 ಗೆಲ್ಲುವ ನಿರೀಕ್ಷೆಯಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

 

3.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement