ಚೆನ್ನೈನ ವ್ಯಕ್ತಿಗೆ ಬ್ಯಾಂಕ್ ಖಾತೆಗೆ 753 ಕೋಟಿ ರೂ.ಗಳ ಅಸಾಮಾನ್ಯ ಉಡುಗೊರೆ…!

ಚೆನ್ನೈ : ಚೆನ್ನೈನ ಫಾರ್ಮಸಿ ಉದ್ಯೋಗಿಯೊಬ್ಬರು ಶನಿವಾರ ತಮ್ಮ ಬ್ಯಾಂಕ್ ಖಾತೆಗೆ 753 ಕೋಟಿ ರೂ.ಗಳನ್ನು ಜಮಾ ಆಗಿರುವುದನ್ನು ಪತ್ತೆ ಹಚ್ಚಿದ್ದಾರೆ.
ಮುಹಮ್ಮದ್ ಇದ್ರಿಸ್ ಎಂಬವರು ಶುಕ್ರವಾರ (ಅಕ್ಟೋಬರ್ 6) ತನ್ನ ಕೋಟಕ್ ಮಹೀಂದ್ರಾ ಬ್ಯಾಂಕ್ ಖಾತೆಯಿಂದ 2,000 ರೂ.ಗಳನ್ನು ಸ್ನೇಹಿತರೊಬ್ಬರಿಗೆ ವರ್ಗಾಯಿಸಿದ್ದರು. ಈ ವಹಿವಾಟಿನ ನಂತರ, ಅವರು ತಮ್ಮ ಖಾತೆಯ ಬ್ಯಾಲೆನ್ಸ್ ಅನ್ನು ಪರಿಶೀಲಿಸಲು ನಿರ್ಧರಿಸಿದರು. ಅವರು ತಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ವೀಕ್ಷಿಸಿದಾಗ, ಬ್ಯಾಲೆನ್ಸ್‌ 753 ಕೋಟಿ ರೂ.ಗಳಿವೆ ಎಂಬ ಸಂದೇಶ ಬಂದಿದೆ.
ಈ ಅಸಾಮಾನ್ಯ ಘಟನೆಯ ಬಗ್ಗೆ ಆತಂಕಿತರಾದ ಇದ್ರಿಸ್ ಅವರು, ಬ್ಯಾಂಕ್‌ಗೆ ಈ ಬಗ್ಗೆ ಮಾಹಿತಿ ನೀಡಿದರು. ಬ್ಯಾಂಕ್‌ ನಂತರ ಅವರ ಖಾತೆಯನ್ನು ಸ್ಥಗಿತಗೊಳಿಸಿತು.
ಇದು ತಮಿಳುನಾಡಿನಲ್ಲಿ ವರದಿಯಾದ ಮೂರನೇ ಘಟನೆಯಾಗಿದೆ.
ಹಿಂದಿನ ಘಟನೆಯಲ್ಲಿ, ಚೆನ್ನೈನ ರಾಜ್‌ಕುಮಾರ ಎಂಬ ಕ್ಯಾಬ್ ಚಾಲಕ ತನ್ನ ತಮಿಳುನಾಡು ಮರ್ಕೆಂಟೈಲ್ ಬ್ಯಾಂಕ್ ಖಾತೆಯಲ್ಲಿ 9,000 ಕೋಟಿ ರೂ.ಜಮಾ ಆಗಿದ್ದನ್ನು ನೋಡಿ ಕಂಗಾಲಾಗಿದ್ದರು. ಈ ಬಗ್ಗೆ ಬ್ಯಾಂಕ್‌ ಮುಂದೆ ಇದನ್ನು ಪ್ರಸ್ತಾಪಿಸಿದ ನಂತರ, ತಮಿಳುನಾಡ್ ಮರ್ಕೆಂಟೈಲ್ ಬ್ಯಾಂಕ್ ಅದನ್ನು ಸರಿಪಡಿಸಿತು ಮತ್ತು ಹೆಚ್ಚುವರಿ ಹಣವನ್ನು ಹಿಂಪಡೆಯಲಾಯಿತು.
ತಂಜಾವೂರಿನ ಗಣೇಶನ್ ಎಂಬ ವ್ಯಕ್ತಿ ತನ್ನ ಬ್ಯಾಂಕ್ ಖಾತೆಯಲ್ಲಿ 756 ಕೋಟಿ ರೂ.ಗಳನ್ನು ಕಂಡು ದಿಗ್ಭ್ರಮೆಗೊಂಡ ಮತ್ತೊಂದು ಘಟನೆ ನಡೆದಿತ್ತು.

ಪ್ರಮುಖ ಸುದ್ದಿ :-   ಜಗತ್ತಿನ ಅತ್ಯಂತ ಅಮೂಲ್ಯವಾದ ಕಣ್ಣೀರು ; ಒಂಟೆಯ ಕಣ್ಣೀರಿನ ಹನಿ 26 ಜಾತಿ ವಿಷದ ಹಾವುಗಳ ಕಡಿತಕ್ಕೆ ದಿವ್ಯ ಔಷಧ : ಹೊಸ ಅಧ್ಯಯನ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement