ಹೊಡೆದಾಟದ ಅಖಾಡವಾದ ಐಐಟಿ ಕಾನ್ಪುರ್ ಕ್ರೀಡಾ ಉತ್ಸವದ ಕಬಡ್ಡಿ ಪಂದ್ಯಾವಳಿ | ವೀಕ್ಷಿಸಿ

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಕಾನ್ಪುರ್‌ನ ಇಂಟರ್‌ಕಾಲೇಜಿಯೇಟ್ ಕ್ರೀಡಾ ಉತ್ಸವವು ಹೊಡೆದಾಟದ ಪಂದ್ಯವಾಗಿ ಮಾರ್ಪಟ್ಟ ಘಟನೆಯ ವರದಿಯಾಗಿದೆ.
ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದಲ್ಲಿ ಎರಡು ಕಬಡ್ಡಿ ತಂಡಗಳ ಆಟಗಾರರ ನಡೆದ ಜಗಳ ಕೆಲವೇ ಕ್ಷಣದಲ್ಲಿ ಅದು ಹಿಂಸಾತ್ಮಕ ಕಾದಾಟಕ್ಕೆ ತಿರುಗಿದೆ. ಯಾವುದೋ ಕಾರಣಕ್ಕೆ ಕಬಡ್ಡಿ ಆಟಗಾರರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಮತ್ತು ಕುರ್ಚಿಗಳಿಂದ ಬಡಿದಾಡಿಕೊಂಡಿದ್ದಾರೆ. ಈ ಹಿಂಸಾತ್ಮಕ ಹೊಡೆದಾಟದ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನವದೆಹಲಿಯ ನೇತಾಜಿ ಸುಭಾಷ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (ಎನ್‌ಎಸ್‌ಯುಟಿ) ಮತ್ತು ಫರಿದಾಬಾದಿನ ವೈಎಂಸಿಎ ತಂಡಗಳು ಭಾನುವಾರ ಮಧ್ಯಾಹ್ನ ನಡೆದ ಕಬಡ್ಡಿ ಪಂದ್ಯದ ಮಧ್ಯದಲ್ಲಿ ಪಾಯಿಂಟ್‌ ಗಾಗಿ ಜಗಳ ಮಾಡಿಕೊಂಡವು ಎನ್ನಲಾಗಿದೆ. ಮಾತಿನ ಚಕಮಕಿಯು ಶೀಘ್ರವೇ ಬೃಹತ್ ಜಗಳಕ್ಕೆ ತಿರುಗಿತು ಎಂದು ದೈನಿಕ್ ಭಾಸ್ಕರ್ ವರದಿ ಮಾಡಿದೆ.

ವಿದ್ಯಾರ್ಥಿಗಳು ಒಬ್ಬರನ್ನೊಬ್ಬರು ಕುರ್ಚಿಗಳಿಂದ ನಿರ್ದಯವಾಗಿ ಹೊಡೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸಭಾಂಗಣದಲ್ಲಿ ಹಾಜರಿದ್ದ ವಿದ್ಯಾರ್ಥಿನಿಯರು ಸೇರಿದಂತೆ ಪ್ರೇಕ್ಷಕರು ಸ್ಥಳದಿಂದ ಓಡಿಹೋಗುವುದನ್ನು ಕಾಣಬಹುದು. ಘಟನೆಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಕಾಮೆಂಟ್‌ಗಳಿಲ್ಲ ಮತ್ತು ವೀಡಿಯೊದ ಸತ್ಯಾಸತ್ಯತೆಯನ್ನು ತಕ್ಷಣವೇ ಕಂಡುಹಿಡಿಯಲು ಸಾಧ್ಯವಾಗಲಿಲ್ಲ.ವೀಡಿಯೊದಲ್ಲಿ, ಎರಡೂ ತಂಡಗಳ ಆಟಗಾರರು ಒಬ್ಬರನ್ನೊಬ್ಬರು ಒದೆಯುವುದನ್ನು ಕಾಣಬಹುದು ಮತ್ತು ಕೆಲವರು ಪರಸ್ಪರ ಕುರ್ಚಿಗಳನ್ನು ಒಬ್ಬರ ಮೇಲೆ ಮೇಲೆ ಎಸೆಯುತ್ತ ಹೊಡೆದಾಡುವುದನ್ನು ಕಾಣಬಹುದು.

ಪ್ರಮುಖ ಸುದ್ದಿ :-   ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಕ್ಕೆ ವಿರೋಧ : ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ ಪಕ್ಷದ ರಾಷ್ಟ್ರೀಯ ವಕ್ತಾರೆ ರಾಧಿಕಾ ಖೇರಾ

ಐಐಟಿ ಕಾನ್ಪುರ್ ಅಕ್ಟೋಬರ್ 6 ರಿಂದ 8 ರವರೆಗೆ 19ನೇ ಆವೃತ್ತಿಯ ಅಂತರ ಕಾಲೇಜು ಕ್ರೀಡಾ ಉತ್ಸವ ‘ಉದ್ಘೋಷ್’ ಅನ್ನು ಆಯೋಜಿಸಿತ್ತು. ದೇಶಾದ್ಯಂತ 450 ಕ್ಕೂ ಹೆಚ್ಚು ಕಾಲೇಜುಗಳಿಂದ 2,500 ಕ್ಕೂ ಹೆಚ್ಚು ವಿದ್ಯಾರ್ಥಿಗಳು 75 ಈವೆಂಟ್‌ಗಳಲ್ಲಿ ಭಾಗವಹಿಸಿದ್ದರು.
ವರದಿಯ ಪ್ರಕಾರ, ಎರಡೂ ತಂಡಗಳು ಸ್ಪರ್ಧೆಯಿಂದ ಅನರ್ಹಗೊಂಡಿವೆ. ಈ ಘಟನೆಯ ಬಗ್ಗೆ ಐಐಟಿ ಕಾನ್ಪುರ ಸದ್ಯಕ್ಕೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement