ಡಿಎಂಕೆ ಸಂಸದ ಎ ರಾಜಾಗೆ ಸಂಬಂಧಿಸಿದ 15 ಬೇನಾಮಿ ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡ ಇ.ಡಿ.

ನವದೆಹಲಿ : ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಡಿಎಂಕೆ ಸಂಸದ ಹಾಗೂ ಮಾಜಿ ಕೇಂದ್ರ ಸಚಿವ ಎ ರಾಜಾ ಅವರಿಗೆ ಸೇರಿದ ಸುಮಾರು 55 ಕೋಟಿ ಮೌಲ್ಯದ 15 ಸ್ಥಿರ “ಬೇನಾಮಿ” ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಮಂಗಳವಾರ ತಿಳಿಸಿದೆ.
ಎ ರಾಜಾ ಅವರ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಎಂಎಲ್‌ಎ ಅಡಿಯಲ್ಲಿ ಎ ರಾಜಾ ಅವರ ಬೇನಾಮಿ ಕಂಪನಿ ಕೋವೈ ಶೆಲ್ಟರ್ಸ್ ಪ್ರಮೋಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ 15 ಸ್ಥಿರ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಹೇಳಿಕೆಯಲ್ಲಿ ತಿಳಿಸಿದೆ.
ಕೊಯಮತ್ತೂರಿನಲ್ಲಿ (ತಮಿಳುನಾಡು) ಸುಮಾರು 45 ಎಕರೆ ಭೂಮಿಯನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಕೇಂದ್ರ ಸಂಸ್ಥೆ ಜಪ್ತಿ ಮಾಡಿತ್ತು ಮತ್ತು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ತೀರ್ಪು ನೀಡುವ ಪ್ರಾಧಿಕಾರವು ಜೂನ್ 1 ರಂದು ಈ ಆದೇಶವನ್ನು ಅನುಮೋದಿಸಿದೆ.
59 ವರ್ಷದ ಎ.ರಾಜಾ ಪ್ರಸ್ತುತ ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಡಿಎಂಕೆ ಸಂಸದರಾಗಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement