ರಾಜಸ್ಥಾನ ವಿಧಾನಸಭೆ ಚುನಾವಣೆ ದಿನಾಂಕ ಬದಲಾವಣೆ

ನವದೆಹಲಿ : ಕೇಂದ್ರ ಚುನಾವಣಾ ಆಯೋಗವು ರಾಜಸ್ಥಾನ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಬುಧವಾರ ಬದಲಾವಣೆ ಮಾಡಿದೆ. ೀಗ ಚುನಾವಣೆ ನವೆಂಬರ್ 23ರ ಬದಲಿಗೆ ನವೆಂಬರ್ 25ರಂದು ನಡೆಯಲಿದೆ. ನಿಗದಿಪಡಿಸಿದ ದಿನಕ್ಕಿಂತ ಎರಡು ದಿನ ತಡವಾಗಿ ಚುನಾವಣೆ ನಡೆಸಲು ಅದು ನಿರ್ಧರಿಸಿದೆ.
ನವೆಂಬರ್ 23ರಂದು ರಾಜ್ಯದಲ್ಲಿ ಬಹಳಷ್ಟು ಮದುವೆ ಸಮಾರಂಭಗಳು ಹಾಗೂ ಕಾರ್ಯಕ್ರಮಗಳು ಆಯೋಜನೆಯಾಗಿರುವುದರಿಂದ ನವೆಂಬರ್ 25ಕ್ಕೆ ಮತದಾನ ಮುಂದೂಡಲಾಗಿದೆ.
ನವೆಂಬರ್ 23ರಂದು ಬೃಹತ್ ಪ್ರಮಾಣದಲ್ಲಿ ಮದುವೆ/ ಇತರ ಕಾರ್ಯಕ್ರಮಗಳು ನಡೆಯಲಿದ್ದು, ಇದರಿಂದ ದೊಡ್ಡ ಸಂಖ್ಯೆಯಲ್ಲಿ ಜನರಿಗೆ ಅನನುಕೂಲ ಉಂಟಾಗಬಹುದು. ಚುನಾವಣೆ ಸಂದರ್ಭದಲ್ಲಿ ಮತದಾರರ ಪಾಲ್ಗೊಳ್ಳುವಿಕೆ ಕುಸಿತ ಉಂಟಾಗಬಹುದು ಎಂದು ವಿವಿಧ ರಾಜಕೀಯ ಪಕ್ಷಗಳು, ಸಾಮಾಜಿಕ ಸಂಘ ಸಂಸ್ಥೆಗಳ ಪ್ರತಿನಿಧಿಗಳ ಮನವಿಗಳನ್ನು ಪರಿಗಣಿಸಿ ಚುನಾವಣೆ ದಿನಾಂಕ ಬದಲಿಸಲಾಗಿದೆ” ಎಂದು ಚುನಾವಣಾ ಆಯೋಗ ಹೇಳಿಕೆ ನೀಡಿದೆ.
ನವೆಂಬರ್ 23ರಂದು ಉತ್ಥಾನ ಏಕಾದಶಿ ಇದ್ದು, ಈ ಶುಭ ದಿನದಂದು 50 ಸಾವಿರಕ್ಕೂ ಅಧಿಕ ಮದುವೆಗಳು ರಾಜಸ್ಥಾನದಲ್ಲಿ ನಡೆಯುವ ಸಾಧ್ಯತೆ ಇದೆ. ಇದರ ಜತೆಗೆ ಇನ್ನೂ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇರುವುದರಿಂದ ಮತದಾನದ ಪ್ರಮಾಣ ಗಣನೀಯವಾಗಿ ಕುಸಿಯುವ ಸಾಧ್ಯತೆ ಇದುದ್ದರಿಂದ ಚುನಾವಣಾ ದಿನಾಂಕ ಬದಲಿಸಲಾಗಿದೆ. ಆದರೆ ಮತ ಎಣಿಕೆ ದಿನದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಚುನಾವಣಾ ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಏಪ್ರಿಲ್ 23 ರಂದು ಪಾಕಿಸ್ತಾನ ಬಂಧಿಸಿದ್ದ ಬಿಎಸ್‌ಎಫ್ ಯೋಧ ಬಿಡುಗಡೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement