ಕಾಶ್ಮೀರ: ಕುಪ್ವಾರದ ಎನ್‌ಕೌಂಟರ್‌ನಲ್ಲಿ ಐವರು ಎಲ್‌ಇಟಿ ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿಯ ಮಚಿಲ್ ಸೆಕ್ಟರ್‌ನಲ್ಲಿ ಸಶಸ್ತ್ರ ಪಡೆಗಳು ಮತ್ತು ಉಗ್ರರ ನಡುವೆ ಗುರುವಾರ ನಡೆದ ಎನ್‌ಕೌಂಟರ್‌ನಲ್ಲಿ ಐವರು ಭಯೋತ್ಪಾದಕರು ಹತರಾಗಿದ್ದಾರೆ. ಶೋಧ ಕಾರ್ಯ ಪ್ರಗತಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಪ್ವಾರಾ ಎನ್‌ಕೌಂಟರ್ ನಲ್ಲಿ ಎಲ್‌ಇಟಿಯ ಮೂವರು ಭಯೋತ್ಪಾದಕರು ಹತರಾಗಿದ್ದು ಸೇರಿದಂತೆ ಒಟ್ಟು ಐವರು ಭಯೋತ್ಪಾಕರು ಹತರಾಗಿದ್ದಾರೆ. ಶೋಧ ಕಾರ್ಯಾಚರಣೆ ಪ್ರಗತಿಯಲ್ಲಿದೆ” ಎಂದು ಎಡಿಜಿಪಿ ಕಾಶ್ಮೀರವನ್ನು ಉಲ್ಲೇಖಿಸಿ ಕಾಶ್ಮೀರ ವಲಯ ಪೊಲೀಸರು ಟ್ವೀಟ್ ಮಾಡಿದ್ದಾರೆ.
ಭಾರತೀಯ ಸೇನೆ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕುಪ್ವಾರ ಸೆಕ್ಟರ್‌ನ ಎಲ್‌ಒಸಿ ಉದ್ದಕ್ಕೂ ಗಡಿ ಭದ್ರತಾ ಪಡೆಗಳು ಒಳನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿದೆ ಎಂದು ಸೇನೆ ತಿಳಿಸಿದೆ.
ಅಕ್ಟೋಬರ್ 23 ರಂದು ಆರಂಭಿಸಿದ ಜಂಟಿ ಕಾರ್ಯಾಚರಣೆಯಲ್ಲಿ, ಕುಪ್ವಾರ ಸೆಕ್ಟರ್‌ನಲ್ಲಿ ಗಡಿ ರೇಖೆಯುದ್ದಕ್ಕೂ ಎಚ್ಚರಿಕೆಯ ಪಡೆಗಳು ಒಳನುಸುಳುವಿಕೆಯ ಪ್ರಯತ್ನವನ್ನು ವಿಫಲಗೊಳಿಸಿದೆ. ಕಾರ್ಯಾಚರಣೆಗಳು ಪ್ರಗತಿಯಲ್ಲಿವೆ ಎಂದು ಸೇನೆ ತಿಳಿಸಿದೆ.

ಕುಪ್ವಾರದಲ್ಲಿ ಅನುಮಾನಾಸ್ಪದ ವಸ್ತು ಪತ್ತೆ
ಇದಕ್ಕೂ ಮೊದಲು ಅಕ್ಟೋಬರ್ 13 ರಂದು ಕುಪ್ವಾರದಲ್ಲಿ ಭದ್ರತಾ ಪಡೆಗಳು ಅನುಮಾನಾಸ್ಪದ ವಸ್ತುವನ್ನು ಪತ್ತೆ ಹಚ್ಚಿ ನಂತರ ನಾಶಪಡಿಸಿದ್ದವು. ಉತ್ತರ ಕಾಶ್ಮೀರ ಜಿಲ್ಲೆಯ ಕ್ರಾಲ್‌ಗುಂಡ್ ಪ್ರದೇಶದ ಓಡಿಪೋರಾದಲ್ಲಿ ರಸ್ತೆಬದಿಯಲ್ಲಿ ಐಇಡಿ ಎಂದು ಶಂಕಿಸಲಾದ ಎರಡು ಅನುಮಾನಾಸ್ಪದ ಸಣ್ಣ ಗ್ಯಾಸ್ ಸಿಲಿಂಡರ್‌ಗಳನ್ನು ಸೇನೆಯ ತಂಡ ಪತ್ತೆ ಮಾಡಿದೆ. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಲಾಗಿದ್ದು, ನಂತರ ಅನುಮಾನಾಸ್ಪದ ವಸ್ತುವನ್ನು ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅನುಮಾನಾಸ್ಪದ ವಸ್ತುವನ್ನು ನಾಶಪಡಿಸುವ ಸಂದರ್ಭದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವೀಡಿಯೊ ಪ್ರಕರಣ : ತನಿಖೆಗೆ ಎಡಿಜಿಪಿ ಬಿ.ಕೆ ಸಿಂಗ್ ನೇತೃತ್ವದಲ್ಲಿ ಎಸ್ಐಟಿ ರಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement