ಕೇರಳ ಸ್ಫೋಟ: ಸಾವಿನ ಸಂಖ್ಯೆ 3ಕ್ಕೆ ಏರಿಕೆ

ತಿರುವನಂತಪುರಂ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 12 ವರ್ಷದ ಬಾಲಕಿಯೊಬ್ಬಳು ಸೋಮವಾರ ಮೃತಪಟ್ಟಿದ್ದು, ಕೇರಳ ಸರಣಿ ಸ್ಫೋಟದಲ್ಲಿ ಸಾವಿನ ಸಂಖ್ಯೆ 3ಕ್ಕೆ ಏರಿದೆ ಎಂದು ವರದಿಯಾಗಿದೆ.
ಭಾನುವಾರ, ಕಲಮಸ್ಸೆರಿಯ ಕನ್ವೆನ್ಶನ್ ಸೆಂಟರ್‌ನಲ್ಲಿ ಮೂರು ಸ್ಫೋಟಗಳು ಸಂಭವಿಸಿದವು, ಅಲ್ಲಿ ಅಲ್ಪಸಂಖ್ಯಾತ ಕ್ರಿಶ್ಚಿಯನ್ ಗುಂಪಿನ ಯೆಹೋವನ ವಿಟ್ನೆಸ್‌ ನ ನೂರಾರು ಅನುಯಾಯಿಗಳು ಸೇರಿದ್ದ ಮೂರು ದಿನಗಳ ಪ್ರಾರ್ಥನಾ ಸಭೆಯ ಮುಕ್ತಾಯದ ದಿನದಂದು ಸ್ಫೋಟ ಸಂಭವಿಸಿದೆ. ಸ್ಫೋಟದಲ್ಲಿ ಮೂವರು ಸಾವಿಗೀಡಾಗಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಕೇರಳದ ಎರ್ನಾಕುಲಂನಲ್ಲಿ ನಡೆದ ಸರಣಿ ಸ್ಫೋಟ ಪ್ರಕರಣದ ತನಿಖೆಯನ್ನು 20 ಸದಸ್ಯರ ತಂಡ ನಡೆಸಲಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾನುವಾರ ಹೇಳಿದ್ದಾರೆ. ಅಲ್ಲದೆ, ಪ್ರಕರಣದಲ್ಲಿ ಎಫ್‌ಐಆರ್ ಕೂಡ ದಾಖಲಾಗಿದೆ.
ಕಲಮಸ್ಸೆರಿ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸರಣಿ ಸ್ಫೋಟದಲ್ಲಿ ಮತ್ತೊಬ್ಬರು ಸಾವಿಗೀಡಾಗಿದ್ದಾರೆ. ಎರ್ನಾಕುಲಂ ಜಿಲ್ಲೆಯ ಮಲಯತ್ತೂರ್‌ನ ಲಿಬಿನಾ ಎಂದು ಗುರುತಿಸಲಾದ 12 ವರ್ಷದ ಬಾಲಕಿ ಸೋಮವಾರ ಮುಂಜಾನೆ ಕಲಮಸ್ಸೆರಿ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

ಆಸ್ಪತ್ರೆಯ ವೈದ್ಯಕೀಯ ಮಂಡಳಿಯು ಹೊರಡಿಸಿದ ಹೇಳಿಕೆಯಲ್ಲಿ, ಬಾಲಕಿಯ ದೇಹದ ಶೇಕಡಾ 95 ರಷ್ಟು ತೀವ್ರ ಸುಟ್ಟಗಾಯಗಳೊಂದಿಗೆ ಭಾನುವಾರ ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ವೆಂಟಿಲೇಟರ್ ಬೆಂಬಲವನ್ನು ಪಡೆದಿದ್ದರೂ, ಆಕೆಯ ಸ್ಥಿತಿಯು ಕ್ಷೀಣಿಸುತ್ತಲೇ ಇತ್ತು, ಇದು ರಾತ್ರಿ 12:40 ಕ್ಕೆ ಅವಳ ಸಾವಿಗೆ ಕಾರಣವಾಯಿತು ಎಂದು ಅದು ಹೇಳಿದೆ.
ಡೊಮಿನಿಕ್ ಮಾರ್ಟಿನ್ ಎಂಬ ವ್ಯಕ್ತಿ ಜವಾಬ್ದಾರಿಯನ್ನು ಹೊತ್ತುಕೊಂಡು ತ್ರಿಶೂರ್ ಜಿಲ್ಲೆಯಲ್ಲಿ ಪೊಲೀಸರಿಗೆ ಶರಣಾಗಿದ್ದಾನೆ. ಆದರೆ ಈ ಪ್ರಕರಣದಲ್ಲಿ ಆತನ ಕೈವಾಡ ಇರುವುದನ್ನು ಪೊಲೀಸರು ಇನ್ನೂ ಖಚಿತಪಡಿಸಿಲ್ಲ, ಆತನ ವಿಚಾರಣೆ ನಡೆಯುತ್ತಿದೆ. ಪೊಲೀಸರಿಗೆ ಶರಣಾಗುವ ಮೊದಲು, ಮಾರ್ಟಿನ್ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಬಿಡುಗಡೆ ಮಾಡಿದರು, ಅವರು ಕ್ರಿಶ್ಚಿಯನ್ ಪಂಥವನ್ನು ಏಕೆ ಗುರಿಯಾಗಿಸಲು ತಾನು ನಿರ್ಧರಿಸಿದ್ದೆ ಎಂಬುದನ್ನು ವಿವರಿಸಿದ್ದಾನೆ.
ವೀಡಿಯೊದಲ್ಲಿ, ಮಾರ್ಟಿನ್ ಅವರು ಯೆಹೋವನ ವಿಟ್ನೆಸ್‌ ವಿಚಾರಗಳು ಮತ್ತು ಬೋಧನೆಗಳು “ದೇಶಕ್ಕೆ ಅಪಾಯಕಾರಿ” ಮತ್ತು ಅವು “ಯುವ ಮನಸ್ಸುಗಳಿಗೆ ವಿಷಪೂರಿತವಾಗಿವೆ” ಎಂದು ಹೇಳಿದ್ದಾನೆ. ಸೋಮವಾರ ಬೆಳಗ್ಗೆ ಮಾರ್ಟಿನ್ ನನ್ನು ವೈದ್ಯಕೀಯ ಪರೀಕ್ಷೆಗಾಗಿ ಎರ್ನಾಕುಲಂ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರಮುಖ ಸುದ್ದಿ :-   ಕೋವಿಡ್ ಲಸಿಕೆಗಳಿಗೂ ಹೃದಯಾಘಾತದ ಸಾವುಗಳಿಗೂ ಯಾವುದೇ ಸಂಬಂಧವಿಲ್ಲ; ತಳ್ಳಿಹಾಕಿದ ಏಮ್ಸ್ ವೈದ್ಯರು

ಪ್ರಾಥಮಿಕ ತನಿಖೆಯಲ್ಲಿ ಐಇಡಿ ಸಾಧನದಿಂದ ಸ್ಫೋಟ ಸಂಭವಿಸಿದೆ ಎಂದು ಕೇರಳದ ಉನ್ನತ ಪೊಲೀಸ್ ತಿಳಿಸಿದ್ದಾರೆ. ಸಾಧನವು ಬೆಂಕಿಯನ್ನು ಪ್ರಚೋದಿಸುವ ಸ್ಫೋಟಕ ಘಟಕವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ, ಇನ್ನೂ ಯಾವುದೇ ಖಚಿತವಾದ ಮಾಹಿತಿಯಿಲ್ಲ ಮತ್ತು ವಿವರವಾದ ವಿಧಿವಿಜ್ಞಾನ ಪರೀಕ್ಷೆಯ ನಂತರವೇ ಸ್ಫೋಟಕ ವಸ್ತುಗಳ ನಿರ್ಣಾಯಕ ಗುರುತನ್ನು ನಿರ್ಧರಿಸಬಹುದಾಗಿದೆ. ಟಿಫಿನ್ ಬಾಕ್ಸ್ ನಲ್ಲಿ ಈ ಸಾಧನ ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆದೇಶದ ನಂತರ, ಪ್ರಕರಣದ ತನಿಖೆಯಲ್ಲಿ ಸ್ಥಳೀಯ ಪೊಲೀಸರಿಗೆ ಸಹಾಯ ಮಾಡಲು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮತ್ತು ರಾಷ್ಟ್ರೀಯ ಭದ್ರತಾ ಗಾರ್ಡ್ (ಎನ್‌ಎಸ್‌ಜಿ) ತಂಡಗಳನ್ನು ಕೇರಳಕ್ಕೆ ಕಳುಹಿಸಲಾಗಿದೆ. ದೆಹಲಿಯ ಇಬ್ಬರು ಹಿರಿಯ ಅಧಿಕಾರಿಗಳೊಂದಿಗೆ ಎನ್‌ಎಸ್‌ಜಿ ತಂಡವೂ ಕೇರಳಕ್ಕೆ ತೆರಳಿ ಪರಿಸ್ಥಿತಿಯ ಅವಲೋಕನ ನಡೆಸಿದೆ.

4 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement