ಅಕ್ಟೋಬರ್‌ನಲ್ಲಿ ₹1.72 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೂಲಕ ಅಕ್ಟೋಬರ್‌ನಲ್ಲಿ ₹1.72 ಲಕ್ಷ ಕೋಟಿ ಸಂಗ್ರಹ ಆಗಿದೆ. ಜಿಎಸ್‌ಟಿ ವ್ಯವಸ್ಥೆಯು ಜಾರಿಗೆ ಬಂದ ಬಳಿಕ ಇದು ಎರಡನೇ ಅತಿಹೆಚ್ಚಿನ ಮಾಸಿಕ ವರಮಾನ ಸಂಗ್ರಹ ಇದಾಗಿದೆ. ಹಿಂದೆ ಏಪ್ರಿಲ್ ತಿಂಗಳಿನಲ್ಲಿ ₹1.87 ಲಕ್ಷ ಕೋಟಿಯಷ್ಟು ಜಿಎಸ್‌ಟಿ ಸಂಗ್ರಹವಾಗಿತ್ತು.
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಸಂಗ್ರಹ ಆಗಿದ್ದ ಮೊತ್ತಕ್ಕೆ ಹೋಲಿಸಿದರೆ ಶೇ 13ರಷ್ಟು ಹೆಚ್ಚು ಸಂಗ್ರಹವಾಗಿದೆ. 2023-24ನೇ ಹಣಕಾಸು ವರ್ಷಕ್ಕೆ ಜಿಎಸ್‌ಟಿ ವರಮಾನದ ಸರಾಸರಿ ಸಂಗ್ರಹವು ₹1.66 ಲಕ್ಷ ಕೋಟಿ ಆಗಿದೆ. ಹಿಂದಿನ ಹಣಕಾಸು ವರ್ಷಕ್ಕೆ ಹೋಲಿಸಿದರೆ ಶೇ 11ರಷ್ಟು ಹೆಚ್ಚು ಸಂಗ್ರಹವಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

ಅಕ್ಟೋಬರ್‌ ತಿಂಗಳಲ್ಲಿ 1.72 ಲಕ್ಷ ಕೋಟಿ ರೂ.ಗಳು ಸಂಗ್ರಹದಲ್ಲಿ ಸಿಜಿಎಸ್‌ಟಿ 30062 ಕೋಟಿ ರೂ.ಗಳು, ಎಸ್‌ಜಿಎಸ್‌ಟಿ 91315 ಕೋಟಿ ರೂ.ಗಳು, ಐಜಿಎಸ್‌ಟಿ 91315 ಕೋಟಿ ರೂ.ಗಳು ಹಾಗೂ ಸೆಸ್‌ 12456 ಕೋಟಿ ರೂ.ಗಳು ಸಂಗ್ರಹವಾಗಿದೆ.ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹವು ಅಕ್ಟೋಬರ್‌ನಲ್ಲಿ 10 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆ ಕಂಡಿರುವುದು ಉತ್ತೇಜನಕಾರಿ ಬೆಳವಣಿಗೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಜಿಎಸ್‌ಟಿ ಸಂಗ್ರಹ ( ಕೋಟಿಗಳಲ್ಲಿ) ಏಪ್ರಿಲ್‌ ನಲ್ಲಿ 1.87 ಲಕ್ಷ ಕೋಟಿ ರೂ.ಗಳು, ಮೇನಲ್ಲಿ 1.57 ಲಕ್ಷ ಕೋಟಿ ರೂ.ಗಳು, ಜೂನ್‌ ನಲ್ಲಿ 1.61 ಲಕ್ಷ ಕೋಟಿ ರೂ.ಗಳು, ಜುಲೈ ತಿಂಗಳಲ್ಲಿ 1.65 ಲಕ್ಷ ಕೋಟಿ ರೂ.ಗಳು, ಆಗಸ್ಟ್‌ ನಲ್ಲಿ 1.59 ಲಕ್ಷ ಕೋಟಿ ರೂ.ಗಳು, ಸೆಪ್ಟೆಂಬರ್‌ ತಿಂಗಳಲ್ಲಿ 1.63 ಲಕ್ಷ ಕೋಟಿ ರೂ.ಗಳು ಸಂಗ್ರಹವಾಗಿತ್ತು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement