ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

ನವದೆಹಲಿ : ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ ಮಾಡಲಾಗಿದೆ.
ಇಂದು ಬುಧವಾರ (ನವಂಬರ್‌ 1) 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆಯನ್ನು 103 ರೂ. ಹೆಚ್ಚಿಸಲಾಗಿದೆ. ದೆಹಲಿಯಲ್ಲಿ 19 ಕೆಜಿ ಎಲ್ ಪಿಜಿ ಸಿಲಿಂಡರ್ 1833 ರೂ.ಗೆ ಲಭ್ಯವಾಗಲಿದೆ.
ಕೋಲ್ಕತ್ತಾದಲ್ಲಿ 1943.00 ರೂ., ಮುಂಬೈನಲ್ಲಿ 1785.50 ರೂ., ಚೆನ್ನೈನಲ್ಲಿ 1999.50 ರೂ.ಗಳಾಗಿದೆ.
ಅಕ್ಟೋಬರ್ 1 ರಂದು ವಾಣಿಜ್ಯ ಸಿಲಿಂಡರುಗಳ ಬೆಲೆಯನ್ನು ಸುಮಾರು 209 ರೂ.ಗೆ ಹೆಚ್ಚಿಸಲಾಯಿತು. ಅಂದರೆ, ಒಂದು ತಿಂಗಳಲ್ಲಿ, ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ 310 ರೂ. ಹೆಚ್ಚಳವಾಗಿದೆ.
ದೇಶದ ವಿವಿಧ ನಗರಗಳಲ್ಲಿ ಇಂದಿನಿಂದ ಎಲ್ ಪಿಜಿ ವಾಣಿಜ್ಯ ಸಿಲಿಂಡರ್ ಬೆಲೆಗಳು
ದೆಹಲಿ 1833 ರೂ.
ಕೊಲ್ಕತ್ತಾ 1943 ರೂ.
ಮುಂಬೈ 1785.5 ರೂ.
ಚೆನ್ನೈ 1999.5 ರೂ.
ಈ ಬಾರಿಯೂ 14.2 ಕೆಜಿ ಗೃಹ ಬಳಕೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸುಮಾರು ಎರಡು ತಿಂಗಳ ಹಿಂದೆ, ಆಗಸ್ಟ್ 30 ರಂದು, ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 200 ರೂ.ಗಳಿಗೆ ಇಳಿಸಲಾಗಿತ್ತು.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಚುನಾವಣಾ ಆಯೋಗದಿಂದ 8,889 ಕೋಟಿ ರೂ.ಮೌಲ್ಯದ ವಸ್ತುಗಳ ವಶ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement