ʼಇಂಡಿಯಾ ಮೈತ್ರಿಕೂಟʼದಲ್ಲಿ ಹೆಚ್ಚು ಪ್ರಗತಿಯಾಗಿಲ್ಲ, ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದೆ…”: ನಿತೀಶಕುಮಾರ

ಪಾಟ್ನಾ: ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ ನ 2024 ರ ಲೋಕಸಭಾ ಚುನಾವಣೆಯ ತಯಾರಿಯಲ್ಲಿನ ಕೊರತೆಗೆ ಕಾಂಗ್ರೆಸ್ ಕಾರಣ ಎಂದು ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ದೂಷಿಸಿದ ನಂತರ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಭವಿಷ್ಯದ ಬಗ್ಗೆ ಗುರುವಾರ ಊಹಾಪೋಹಗಳು ಎದ್ದಿವೆ.
ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಪ್ರಕಾರ ಕಾಂಗ್ರೆಸ್ – ಮೈತ್ರಿಕೂಟದ ದೊಡ್ಡ ಸದಸ್ಯ ಪಕ್ಷದಲ್ಲಿ ಒಂದು ಮತ್ತು ಹೀಗಾಗಿ ಅದಕ್ಕೆ “ಪ್ರಮುಖ ಪಾತ್ರ” ನಿಯೋಜಿಸಲಾಗಿದೆ. ಆದರೆ ಅದು ವಿವಿಧ ರಾಜ್ಯಗಳಲ್ಲಿ ವಿಧಾನಸಭೆಯಲ್ಲಿ ನಿರತವಾಗಿರುವುದು ತಯಾರಿಯಲ್ಲಿ ಕೊರತೆಯಾಗಿರುವುದಕ್ಕೆ ಇದಕ್ಕೆ ಕಾರಣ. ಮಧ್ಯಪ್ರದೇಶ, ತೆಲಂಗಾಣ ಮತ್ತು ಮಿಜೋರಾಂ ಜೊತೆಗೆ ಕಾಂಗ್ರೆಸ್‌ ಪಕ್ಷದ ಆಡಳಿತವಿರುವ ರಾಜಸ್ಥಾನ ಮತ್ತು ಛತ್ತೀಸ್‌ಗಢ ಈ ತಿಂಗಳು ಮತದಾನ ನಡೆಯಲಿದೆ.
ಪಾಟ್ನಾದಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಿತೀಶಕುಮಾರ, “ನಾವು ಅವರೊಂದಿಗೆ ಮಾತನಾಡುತ್ತಿದ್ದೇವೆ … ಇಂಡಿಯಾ ಮೈತ್ರಿಕೂಟದಲ್ಲಿ ಅವರನ್ನು ಮುಂದಕ್ಕೆ ದೂಡುತ್ತಿದ್ದೇವೆ. ಆದರೆ, ಇತ್ತೀಚಿನ ದಿನಗಳಲ್ಲಿ ಒಕ್ಕೂಟದಲ್ಲಿ ಹೆಚ್ಚಿನ ಪ್ರಗತಿ ಕಂಡುಬಂದಿಲ್ಲ. ಐದು ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಹೆಚ್ಚು ಆಸಕ್ತಿ ತೋರುತ್ತಿದೆ ಎಂದು ಹೇಳಿದರು. “ನಾವು ಕಾಂಗ್ರೆಸ್‌ಗೆ ಪ್ರಮುಖ ಪಾತ್ರವನ್ನು ನೀಡಲು ಒಪ್ಪಿಕೊಂಡಿದ್ದೇವೆ. ಆದರೆ ಅವರು ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯ ನಂತರವೇ ಮುಂದಿನ ಸಭೆಯನ್ನು ಕರೆಯುತ್ತಾರೆ” ಎಂದು ಜನತಾ ದಳ (ಯುನೈಟೆಡ್) ನಾಯಕ ಹೇಳಿದರು.

ಪ್ರಮುಖ ಸುದ್ದಿ :-   S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

ಇಂಡಿಯಾ ಮೈತ್ರಿಕೂಟದ ಕೊನೆಯ ಸಭೆ ಮುಂಬೈನಲ್ಲಿ ಆಗಸ್ಟ್ 31ರಿಂದ ಎರಡು ದಿನಗಳ ಕಾಲ ನಡೆಯಿತು, ನಂತರ ಕಾಂಗ್ರೆಸ್ ಮುಂದಿನ ದಿನಾಂಕಗಳನ್ನು ನಿಗದಿಪಡಿಸುತ್ತದೆ ಎಂದು ಘೋಷಿಸಲಾಯಿತು. ಇದು ದೆಹಲಿಯಲ್ಲಿರಬಹುದು ಎಂಬ ಮಾತುಗಳು ಕೇಳಿಬಂದವು ಆದರೆ ನಂತರ ಯಾವುದೇ ಸುದ್ದಿ ಹೊರಬಿದ್ದಿಲ್ಲ. ಇದು ಮಧ್ಯಪ್ರದೇಶದಲ್ಲಿ ಆಗುತ್ತದೆ ಎಂಬ ಸುದ್ದಿಯೂ ಇತ್ತು, ಆದರೆ ಆಗಲಿಲ್ಲ.
ನಿತೀಶಕುಮಾರ ಅವರು ಇಂಡಿಯಾ ಮೈತ್ರಿಕೂಟದ ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿದ್ದಾರೆ; ವಾಸ್ತವವಾಗಿ, ಬಿಹಾರದ ಮುಖ್ಯಮಂತ್ರಿಯೇ ಆಡಳಿತಾರೂಢ ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಒಂದಾಗುವಂತೆ ವಿರೋಧ ಪಕ್ಷಗಳ ಪ್ರಮುಖ ನಾಯಕರಿಗೆ ಧ್ವನಿ ನೀಡಿದರು. ತಮ್ಮ ರಾಜಕೀಯ ಹಿರಿತನವನ್ನು ಬಳಸಿಕೊಂಡು ಉಳಿದ ಪಕ್ಷಗಳು ಕಾಂಗ್ರೆಸ್ ನಡುವೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಿದರು.

ಮಧ್ಯಪ್ರದೇಶ ಚುನಾವಣೆಗೆ ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ನಡುವಿನ ಜಗಳದ ನಂತರ ನಿತೀಶಕುಮಾರ ಅವರ ಪ್ರತಿಕ್ರಿಯೆ ಬಂದಿದೆ. ಸಮಾಜವಾದಿ ಪಕ್ಷದ ಅಖಿಲೇಶ ಯಾದವ್ ಅವರು ತಮ್ಮ ಪಕ್ಷ ಆರು ಸ್ಥಾನಗಳಲ್ಲಿ ಸ್ಪರ್ಧಿಸುವ ಒಪ್ಪಂದವನ್ನು ಕಾಂಗ್ರೆಸ್‌ ನಿರ್ಲಕ್ಷಿಸಿದೆ ಎಂದು ಹೇಳಿದ್ದು, ನನಗೆ ಈ ಬಗ್ಗೆ ಗೊತ್ತಿದ್ದರೆ ನಾವು ಕಾಂಗ್ರೆಸ್ ಜೊತೆ ಮಾತನಾಡುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಆದಾಗ್ಯೂ, ಅಖಿಲೇಶ ಯಾದವ್ ಸೋಮವಾರ ತಾವು ಮೈತ್ರಿಕೂಟದ ಭಾಗವಾಗಿ ಉಳಿದಿರುವುದಾಗಿ ತಿಳಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಆದರೆ, ಎರಡು ಪಕ್ಷಗಳ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ಮತ್ತೊಂದು ಸಂಕೇತದಲ್ಲಿ, ಸಮಾಜವಾದಿ ಪಕ್ಷವು ಅಖಿಲೇಶ ಯಾದವ್ ಎಂದು ಫ್ಲೆಕ್ಸ್‌ ಹಾಕಿಕೊಂಡರೆ ಮತ್ತು ರಾಹುಲ್ ಗಾಂಧಿಯನ್ನು ಭವಿಷ್ಯದ ಪ್ರಧಾನಿ ಎಂದು ಶ್ಲಾಘಿಸುವ ಬ್ಯಾನರ್‌ ಅನ್ನು ಕಾಂಗ್ರೆಸ್‌ ಹಾಕಿಕೊಂಡಿತು.

ಪ್ರಮುಖ ಸುದ್ದಿ :-   ವೀಡಿಯೊ..| ಕಾಶ್ಮೀರ ; ಪುಲ್ವಾಮಾ ಎನ್ಕೌಂಟರಿನಲ್ಲಿ ಮೂವರು ಭಯೋತ್ಪಾದಕರ ಹತ್ಯೆ ; ಒಬ್ಬನ ಕೊನೆಯ ಕ್ಷಣ ಡ್ರೋನ್ ನಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement