ಅತ್ತಿಗೆ, ಇಬ್ಬರು ಮಕ್ಕಳನ್ನು ಬರ್ಬರವಾಗಿ ಕೊಲಗೈದ ಮೈದುನ

ಹಾವೇರಿ: ತನ್ನ ಅತ್ತಿಗೆ ಮತ್ತು ಇಬ್ಬರು ಮಕ್ಕಳನ್ನು ಮೈದುನ ಬರ್ಬರವಾಗಿ ಕೊಲೆ ಮಾಡಿದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಯಳ್ಳೂರು ಗ್ರಾಮದಲ್ಲಿ ನಡೆದಿದೆ.
ಯಳ್ಳೂರು ಗ್ರಾಮದ ನಿವಾಸಿಗಳಾದ ಗೀತಾ ಮರಿಗೌಡ (35), ಇವರ ಮಕ್ಕಳಾದ ಅಕುಲ್(10) ಮತ್ತು ಅಂಕಿತಾ (7) ಕೊಲೆಯಾದವರು ಎಂದು ಗುರುತಿಸಲಾಗಿದೆ. ಆರೋಪಿ ಮೈದುನ ಕುಮಾರ ಗೌಡ ಮರಿಗೌಡ (32) ಪರಾರಿಯಾಗಿದ್ದಾನೆ.
ಮೃತ ಗೀತಾ ಅವರ ಪತಿ ಹೊನ್ನಗೌಡ ಮರಿಗೌಡ ಅವರು ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಯಳ್ಳೂರಿನಲ್ಲಿ ಇವರ ಕುಟುಂಬ ನೆಲೆಸಿದೆ. ಕುಮಾರ ಗೌಡ ಹಾಗೂ ಅವರ ತಾಯಿ ಕೂಡ ಇವರೊಟ್ಹೊಟಿಗೆ ವಾಸಿಸುತ್ತಿದ್ದರು. ಆದರೆ ಹಣಕಾಸು ವಿಷಯದಲ್ಲಿ ವೈಷಮ್ಯದ ಶಂಕೆ ವ್ಯಕ್ತವಾಗಿದೆ. ಹೊನ್ನಗೌಡ ಅವರು ಮನೆ ಹಾಗೂ ಅಂಗಡಿ ಸಂಕೀರ್ಣವನ್ನು ಬಾಡಿಗೆ ಕೊಟ್ಟಿದ್ದು, ಇದರ ವ್ಯವಹಾಋವನ್ನು ಸಹೋದರ ಕುಮಾರ ಗೌಡನೇ ನೋಡಿಕೊಳ್ಳುತ್ತಿದ್ದ ಎನ್ನಲಾಗಿದೆ.

ಇತ್ತೀಚೆಗಷ್ಟೇ ದುಬೈನಿಂದ ಹೊನ್ನಗೌಡ ಅವರು ಮನೆಗೆ ಬಂದಿದ್ದರು. ಆ ಸಂದರ್ಭದಲ್ಲಿ ಕುಮಾರ ಗೌಡ ಬಾಡಿಗೆ ಹಣದಿಂದ ದುಂದುವೆಚ್ಚ ಮಾಡುತ್ತಿರುವುದು ಗೊತ್ತಾಗಿ ಅಂಗಡಿ ಹಾಗೂ ಮನೆಗಳು ಬಾಡಿಗೆದಾರರಿಗೆ ಬಾಡಿಗೆ ಹಣವನ್ನು ತನ್ನ ಪತ್ನಿಗೆ ಕೊಡಿ ಎಂದು ಹೇಳಿ ದುಬೈಗೆ ಹೋಗಿದ್ದ ಎನ್ನಲಾಗಿದೆ. ಇದರಿಂದ ಹಣ ಸಿಗದೆ ಕುಪಿತಗೊಂಡಿದ್ದ ಕುಮರಾ ಗೌಡ ಮಧ್ಯರಾತ್ರಿ ಎದ್ದು, ನಿದ್ರೆಯಲ್ಲಿದ್ದ ಅತ್ತಿಗೆ ಮತ್ತು ಇಬ್ಬರು ಪುಟ್ಟ ಮಕ್ಕಳ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮನಬಂದಂತೆ ಕತ್ತಿಯಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.
ವಿಷಯ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ಈ ಬಗ್ಗೆ ಹಾನಗಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಕೇರಳಕ್ಕೆ ಮುಂಗಾರು ಆಗಮನ : ಕರ್ನಾಟಕದಲ್ಲಿ 6 ದಿನ ಭಾರಿ ಮಳೆ ಸಾಧ್ಯತೆ ; ಹಲವು ಜಿಲ್ಲೆಗಳಿಗೆ ಆರೇಂಜ್‌ ಅಲರ್ಟ್‌ ಘೋಷಣೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement