ಬೆಂಗಳೂರು : 7ನೇ ರಾಜ್ಯ ವೇತನ ಆಯೋಗದ (7th State Pay Commission) ಕಾಲಾವಧಿಯನ್ನು ವಿಸ್ತರಿಸಲಾಗಿದೆ. 7ನೇ ರಾಜ್ಯ ವೇತನ ಆಯೋಗದ ಅವಧಿಯನ್ನು 2024ರ ಮಾರ್ಚ್ 15ರ ವರೆಗೆ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ಈ ಹಿಂದೆ ರಾಜ್ಯಪಾಲರ ಆದೇಶದಂತೆ ಮೇ 19ರಿಂದ 6 ತಿಂಗಳ ಕಾಲ ಆಯೋಗದ ಅವಧಿ ವಿಸ್ತರಣೆ ಮಾಡಿ, ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ ಕಾಲಾವಧಿ ವಿಸ್ತರಣೆ ಮಾಡಲಾಗಿದೆ. ಅವಧಿ ವಿಸ್ತರಣೆಗೆ ಸಚಿವಾಲಯ ನೌಕರರ ಸಂಘದಿಂದ ವಿರೋಧ ವ್ಯಕ್ತವಾಗಿದೆ.
2022ರ ನವೆಂಬರ್ 19ರಂದು ವೇತನ ಆಯೋಗ ರಚನೆಯಾಗಿತ್ತು. ವೇತನ ಆಯೋಗದ ಶಿಫಾರಸ್ಸು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲು 2023-24ನೇ ಸಾಲಿನಲ್ಲಿ ಹಣವನ್ನೂ ತೆಗೆದಿಡಲಾಗಿತ್ತು. ಪ್ರಸ್ತುತ 7ನೇ ರಾಜ್ಯ ವೇತನ ಆಯೋಗದ ಕಾಲಾವಧಿ ನವೆಂಬರ್ 18ರಂದು ಕೊನೆಗೊಳ್ಳುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ