ವಿಶ್ವಕಪ್‌ 2023 : ನೆದರ್ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ಸ್ಥಾಪಿಸಿದ ರೋಹಿತ ಶರ್ಮಾ

ನವದೆಹಲಿ: ಭಾರತದ ನಾಯಕ ರೋಹಿತ್ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಯಶಸ್ವಿ ಆರಂಭಿಕ ಆಟಗಾರನಾಗಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದಾರೆ.
36ರ ಹರೆಯದ ಶರ್ಮಾ ಅವರು ವಿಶ್ವಕಪ್ ನಲ್ಲಿ ನೆದರ್ಲೆಂಡ್ಸ್ ವಿರುದ್ಧದ ಪಂದ್ಯಾವಳಿಯ 9 ನೇ ಹಣಾಹಣಿಯಲ್ಲಿ ಈ ಮೈಲಿಗಲ್ಲನ್ನು ಸಾಧಿಸಿದರು.
ಆರಂಭಿಕ ಆಟಗಾರನಾಗಿ ರೋಹಿತ ಶರ್ಮಾ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ ಮೂರನೇ ಭಾರತೀಯ ಎನಿಸಿಕೊಂಡರು. ಅವರು ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರನ್ನು ಒಳಗೊಂಡ ಭಾರತೀಯರ ಆಟಗಾರರ ಪಟ್ಟಿಗೆ ಸೇರುತ್ತಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಭಾರತೀಯ ಆರಂಭಿಕ ಆಟಗಾರರು ಗಳಿಸಿದ ಅತಿ ಹೆಚ್ಚು ರನ್
ವೀರೇಂದ್ರ ಸೆಹ್ವಾಗ್ – 16119
ಸಚಿನ್ ತೆಂಡೂಲ್ಕರ್ – 15335
ರೋಹಿತ್ ಶರ್ಮಾ – 14025*
ಸುನಿಲ್ ಗವಾಸ್ಕರ್ – 12258
ಶಿಖರ್ ಧವನ್ – 10867

ರೋಹಿತ್ ಶರ್ಮಾ ಅವರು ಆರಂಭಿಕ ಆಟಗಾರನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 14000 ರನ್ ಗಳಿಸಿದ ವಿಶ್ವದ 11 ನೇ ಆಟಗಾರರಾಗಿದ್ದಾರೆ. ಇದಕ್ಕೂ ಮುನ್ನ ಸನತ್ ಜಯಸೂರ್ಯ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಗ್ರೇಮ್ ಸ್ಮಿತ್, ಡೆಸ್ಮಂಡ್ ಹೇನ್ಸ್, ಸೆಹ್ವಾಗ್, ತೆಂಡೂಲ್ಕರ್, ತಮೀಮ್ ಇಕ್ಬಾಲ್, ಅಲೈಸ್ಟಾರ್ ಕುಕ್ ಮತ್ತು ಮ್ಯಾಥ್ಯೂ ಹೇಡನ್ ಈ ಸಾಧನೆ ಮಾಡಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ಸಿಎಂ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ; ಎಎಪಿ ನಾಯಕಿ ಸ್ವಾತಿ ಮಲಿವಾಲ್ ಎಂದು ಹೇಳಿಕೊಂಡ ಮಹಿಳೆಯಿಂದ ಪೊಲೀಸರಿಗೆ 2 ಕರೆಗಳು : ಮೂಲಗಳು

ಕ್ಯಾಲೆಂಡರ್ ವರ್ಷದಲ್ಲಿ ಏಕದಿನದ ಪಂದ್ಯದಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳು
ಈ ಪಂದ್ಯದಲ್ಲಿ ಅವರು ಸಾಧಿಸಿದ ಸಾಧನೆ ಇದೊಂದೇ ಅಲ್ಲ. ರೋಹಿತ ಶರ್ಮಾ ಅವರು ಈಗ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಏಕದಿನದ ಪಂದ್ಯಗಳಲ್ಲಿ ಪ್ರಮುಖ ಸಿಕ್ಸ್-ಹಿಟ್ಟರ್ ಆಗಿದ್ದಾರೆ. ಅವರು 2023 ರಲ್ಲಿ ತಮ್ಮ 59 ನೇ ಸಿಕ್ಸರ್ ಬಾರಿಸಿದ ನಂತರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿದರು. ಡಿವಿಲಿಯರ್ಸ್ 2015 ರಲ್ಲಿ ಒಂದೇ ವರ್ಷದಲ್ಲಿ 58 ಸಿಕ್ಸರ್‌ ಹೊಡೆದಿದ್ದು, ಈಗ ಅವರು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement