ಬೆಂಗಳೂರು : ಮತ್ತೊಂದು ಕ್ರಮವನ್ನು ಕೈಗೊಳ್ಳಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ಪ್ರಯಾಣಿಕರಿಗೆ ಪ್ರಯಾಣ ಸೇವೆ ಒದಗಿಸುತ್ತಿರುವ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ. ಪಾರ್ಸೆಲ್‌ಗಳನ್ನು ಸಾಗಾಟ ಮಾಡುವ ಸೇವೆಯನ್ನು ಆರಂಭಿಸಿದೆ. ಇದರಿಂದ ತನ್ನ ಆದಾಯವೂ ಹೆಚ್ಚಲಿದೆ ಎಂದು ಸಂಸ್ಥೆ ಭಾವಿಸಿದೆ.
ಇದಕ್ಕಾಗಿ ಕೆಎಸ್‌ಆರ್‌ಟಿಸಿ 20 ಲಾರಿ ಟ್ರಕ್‌ಗಳನ್ನು ಖರೀದಿಸಿದೆ. ಸಾರ್ವಜನಿಕರು ಪಾರ್ಸೆಲ್‌ಗಳನ್ನು ತಾವು ತಲುಪಿಸಲು ಇಚ್ಛಿಸುವ ಪ್ರದೇಶಗಳಿಗೆ ಕೆಎಸ್‌ಆರ್‌ಟಿಸಿ ಮೂಲಕ ತಲುಪಿಸಬಹುದು ಎಂದು ಹೇಳಿದೆ.
ಎಸ್‌ಆರ್‌ಟಿಸಿಯ ಟ್ರಕ್ ಪಾರ್ಸೆಲ್ ಸೇವೆ ಆರಂಭವಾದ ಬಳಿಕ ಇದರ ಮೂಲಕವೇ ಪಾರ್ಸೆಲ್ ತಲುಪಿಸಬಹುದಾಗಿದೆ. ಈ ಸೇವೆಗಾಗಿ ಈಗಾಗಲೇ ಆಕರ್ಷಕವಾದ, ಉತ್ತಮ ಗುಣಮಟ್ಟದ ಟ್ರಕ್‌ಗಳನ್ನು ಆಯ್ಕೆ ಮಾಡಲಾಗಿದೆ. ಟಾಟಾ ಸಂಸ್ಥೆಯ ಪುಣೆಯ ಶಾಖೆಯಲ್ಲಿ ಈ ಟ್ರಕ್‌ಗಳನ್ನು ತಯಾರಿಸಲಾಗುತ್ತಿದೆ. ಒಂದು ತಿಂಗಳ ಒಳಗಾಗಿ ಕೆಎಸ್‌ಆರ್‌ಟಿಸಿಗೆ 20 ಟ್ರಕ್‌ಗಳನ್ನು ಟಾಟಾ ಸಂಸ್ಥೆಯು ತಲುಪಿಸಲಿದೆ.
ಬಸ್‌ಗಳಲ್ಲಿಯೂ ಪಾರ್ಸೆಲ್ ಅಧಿಕಗೊಳಿಸಲು ನಿರ್ಧಾರ
ಕೆಎಸ್‌ಆರ್‌ಟಿಸಿ ಟ್ರಕ್‌ಗಳನ್ನು ಖರೀದಿ ಮಾಡಿ ಪಾರ್ಸೆಲ್ ಸೇವೆಯನ್ನು ಆರಂಭ ಮಾಡುವ ಜೊತೆಗೆಯೇ ಪ್ರಸ್ತುತ ಇರುವ ಬಸ್‌ಗಳ ಪಾರ್ಸೆಲ್ ಸೇವೆಯನ್ನು ಕೂಡಾ ಹೆಚ್ಚಿಸುವ ನಿರ್ಧಾರ ಮಾಡಿದೆ. ಪ್ರಸ್ತುತ 800 ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟವನ್ನು ಮಾಡಲಾಗುತ್ತಿದೆ. ಮುಂದೆ ಎಲ್ಲ ಬಸ್‌ಗಳಲ್ಲಿ ಪಾರ್ಸೆಲ್ ಸೇವೆಯನ್ನು ಆರಂಭಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ. ನಾಲ್ಕು ವರ್ಷದಲ್ಲೇ ಈ ಸೇವೆಯನ್ನು 4000 ಬಸ್‌ಗಳಿಗೆ ವಿಸ್ತರಿಸಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.
ಅಲ್ಲದೆ, ಮುಂದಿನ ನಾಲ್ಕು ವರ್ಷಗಳಲ್ಲಿ 4,000 ಬಸ್‌ಗಳಲ್ಲಿ ಪಾರ್ಸೆಲ್ ಸಾಗಾಟ ಮಾಡುವ ಸೇವೆಯನ್ನು ವಿಸ್ತರಿಸುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ ಎಂದು ಅದು ತಿಳಿಸಿದೆ. ವಿಮಾನ ನಿಲ್ದಾಣ, ಬಂದರು ಸೇರಿದಂತೆ ಗ್ರಾಹಕರು ತಿಳಿಸಿದ ಸ್ಥಳದಿಂದ , ತಲುಪಿಸಬೇಕಾದ ಸ್ಥಳಕ್ಕೆ ನಮ್ಮ ಟ್ರಕ್‌ಗಳು ಪಾರ್ಸೆಲ್ ಒಯ್ಯಲಿವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ