ಎಸ್‌ಬಿಐ ನಿಂದ 8283 ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾವು 8283 ಜೂನಿಯರ್ ಅಸೋಸಿಯೇಟ್‌ (ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌) ಹುದ್ದೆಗಳ ನೇಮಕಾತಿಗೆ ನೋಟಿಫಿಕೇಶನ್‌ ಪ್ರಕಟಿಸಿದೆ. ಆಸಕ್ತರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಪದವಿ ಉತ್ತೀರ್ಣರಾದವರು ಈ ಹುದ್ದೆಗಳಿಗೆ ಅರ್ಹರಾಗಿದ್ದಾರೆ. ಅರ್ಜಿ ಸಲ್ಲಿಸಲು ಡಿಸೆಂಬರ್ 07 ರವರೆಗೆ ಅವಕಾಶವಿದೆ.
ಅರ್ಜಿ ಸಲ್ಲಿಕೆ ಹಾಗೂ ಇತರೆ ಮಾಹಿತಿಗಾಗಿ ಎಸ್‌ಬಿಐ’ನ ಕರಿಯರ್‌ ವೆಬ್‌ಸೈಟ್‌ ವಿಳಾಸ https://sbi.co.in/web/careers ಗೆ ಭೇಟಿ ನೀಡಬಹುದು. ಒಬ್ಬ ಅಭ್ಯರ್ಥಿ ಒಂದು ರಾಜ್ಯದ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯನ್ನು ಜನವರಿ 2024 ರಲ್ಲಿ ನಡೆಸಲಾಗುತ್ತದೆ.

ನೇಮಕಾತಿ ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್
ಹುದ್ದೆ ಹೆಸರು: ಜೂನಿಯರ್ ಅಸೋಸಿಯೇಟ್ (ಕಸ್ಟಮರ್ ಸಪೋರ್ಟ್‌ ಮತ್ತು ಸೇಲ್ಸ್‌)
ಹುದ್ದೆಗಳ ಸಂಖ್ಯೆ : 8283
ಕರ್ನಾಟಕದಲ್ಲಿ ಜೂನಿಯರ್ ಅಸೋಸಿಯೇಟ್ಸ್‌ ಹುದ್ದೆಗಳ ಸಂಖ್ಯೆ : 450

ಶೈಕ್ಷಣಿಕ ಅರ್ಹತೆ :
ಅಂಗೀಕೃತ ವಿಶ್ವವಿದ್ಯಾಲಯಗಳಿಂದ ಯಾವುದೇ ವಿಷಯದಲ್ಲಿ ಪದವಿ ಉತ್ತೀರ್ಣರಾಗಿರಬೇಕು. ಯಾವುದೇ ಪದವಿಯ ಅಂತಿಮ ಸೆಮಿಸ್ಟರ್‌ / ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆದರೆ ತಾತ್ಕಾಲಿಕವಾಗಿ ಆಯ್ಕೆಯಾದ ನಂತರ ಪದವಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕಾಗುತ್ತದೆ.
ವಯಸ್ಸಿನ ಮಾನದಂಡ: ದಿನಾಂಕ 01-04-2023 ಕ್ಕೆ ಕನಿಷ್ಠ 20 ವರ್ಷ ಆಗಿರಬೇಕು. ಗರಿಷ್ಠ 28 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಸರ್ಕಾರದ ಆದೇಶದಂತೆ ಅನ್ವಯವಾಗಲಿದೆ.
ಮಾಸಿಕ ವೇತನ ಶ್ರೇಣಿ : 17900 – 47920 ರೂ.

ಪ್ರಮುಖ ಸುದ್ದಿ :-   50 ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ : ಮಕ್ಕಳನ್ನು ಮನೆಗೆ ಕಳುಹಿಸಿದ ಶಾಲೆಗಳು, ಪರೀಕ್ಷೆಗಳು ಸ್ಥಗಿತ

ಪ್ರಮುಖ ಮಾಹಿತಿಗಳು
ಆನ್‌ಲೈನ್‌ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 17-11-2023
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 07-12-2023
ವೆಬ್‌ಸೈಟ್‌ ವಿಳಾಸ-https://sbi.co.in
ಅಪ್ಲಿಕೇಶನ್‌ ಶುಲ್ಕ ವಿವರ
ಸಾಮಾನ್ಯ ವರ್ಗ / ಇತರೆ ಹಿಂದುಳಿದ ವರ್ಗಗಳು / EWS ಅಭ್ಯರ್ಥಿಗಳಿಗೆ 750 ರೂ.ಶುಲ್ಕ
ಇತರೆ ಅಭ್ಯರ್ಥಿಗಳಿಗೆ ಪ್ರೋಸೆಸಿಂಗ್ ಶುಲ್ಕ ಮಾತ್ರ ಇರುತ್ತದೆ.
ನೋಟಿಫಿಕೇಶನ್‌ ಗಾಗಿ ಇಲ್ಲಿSBI Junior Associates Recruitment 2023 Notification    ಕ್ಲಿಕ್‌ ಮಾಡಬಹುದು…
ಜೂನಿಯರ್ ಅಸೋಸಿಯೇಟ್‌ ನೇಮಕಾತಿ-ಆನ್‌ಲೈನ್‌ ನಲ್ಲಿ ಅರ್ಜಿಗೆ ಇಲ್ಲಿ  https://sbi.co.in/web/careers/current-openings    ಕ್ಲಿಕ್‌ ಮಾಡಬಹುದು..

ಆಯ್ಕೆ ಪ್ರಕ್ರಿಯೆ…
ಆನ್‌ಲೈನ್‌ ಪ್ರಿಲಿಮ್ಸ್‌ ಪರೀಕ್ಷೆ, ಮೇನ್ಸ್‌ ಪರೀಕ್ಷೆ, ಸ್ಥಳೀಯ ಭಾಷಾ ಪರೀಕ್ಷೆ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಪ್ರಿಲಿಮ್ಸ್‌ / ಮೇನ್ಸ್‌ ಪರೀಕ್ಷೆ ಅಂಕಗಳನ್ನು ಪರಿಗಣಿಸಿ ಮೆರಿಟ್‌ ಆಧಾರದ ಮೇಲೆ 1:3 ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುತ್ತದೆ. ಇದರಲ್ಲಿ ಬ್ಯಾಂಕ್‌ ನಿಗದಿಪಡಿಸಿದ ಕನಿಷ್ಠ ಅಂಕಗಳನ್ನು ಅಭ್ಯರ್ಥಿಗಳು ಗಳಿಸಬೇಕು. ನಂತರ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement