ತ್ರಿಶಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸಲು ತಮಿಳುನಾಡು ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಚೆನ್ನೈ : ನಟಿ ತ್ರಿಶಾ ಕೃಷ್ಣನ್ ಬಗ್ಗೆ ಕೀಳು ಮಟ್ಟದ ಹೇಳಿಕೆ ಕೊಟ್ಟಿರುವ ನಟ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ (NCW) ತಮಿಳುನಾಡು ಪೊಲೀಸರಿಗೆ ನಿರ್ದೇಶನ ನೀಡಿದೆ.
ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ ಮತ್ತು ಸಂಬಂಧಿತ ಸೆಕ್ಷನ್‌ಗಳಲ್ಲಿ ಮನ್ಸೂರ್ ಅಲಿ ಖಾನ್ ವಿರುದ್ಧ ಪ್ರಕರಣ ದಾಖಲಿಸುವಂತೆ ಡಿಜಿಪಿಗೆ ಸೂಚಿಸಿದೆ.
ಇತ್ತೀಚೆಗೆ ಸಂದರ್ಶನದಲ್ಲಿ ಮನ್ಸೂರ್ ಅಲಿಖಾನ್ ಅವರು ‘ಲಿಯೋ’ ಚಿತ್ರದಲ್ಲಿ ತ್ರಿಷಾ ಜತೆ ‘ಬೆಡ್ ರೂಮ್ ಸೀನ್’ ಹಂಚಿಕೊಳ್ಳಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿ ವಿವಾದದ ಕಿಡಿ ಹೊತ್ತಿಸಿದ್ದರು. ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ರಾಷ್ಟ್ರೀಯ ಮಹಿಳಾ ಆಯೋಗವು ನವೆಂಬರ್ 20 ರಂದು, X ನಲ್ಲಿ ತ್ರಿಶಾ ಬಗ್ಗೆ ಅವಹೇಳನಕಾರಿ ಹೇಳಿಕೆಗೆ ಮನ್ಸೂರ್ ಅಲಿ ಖಾನ್ ರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದೆ.

“ನಟ ಮನ್ಸೂರ್ ಅಲಿ ಖಾನ್ ಅವರು ನಟಿ ತ್ರಿಶಾ ಕೃಷ್ಣ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗವು ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ವಿಷಯದಲ್ಲಿ ನಾವು ಸ್ವಯಂ ಪ್ರೇರಿತರಾಗಿ ಐಪಿಸಿ ಸೆಕ್ಷನ್ 509 ಬಿ ಮತ್ತು ಇತರ ಸಂಬಂಧಿತ ಕಾನೂನುಗಳನ್ನು ಜಾರಿಗೊಳಿಸಲು ಡಿಜಿಪಿಗೆ ನಿರ್ದೇಶನ ನೀಡುತ್ತಿದ್ದೇವೆ. .ಇಂತಹ ಹೇಳಿಕೆಗಳು ಮಹಿಳೆಯರ ಮೇಲಿನ ದೌರ್ಜನ್ಯವನ್ನು ಸಾಮಾನ್ಯಗೊಳಿಸುತ್ತವೆ ಮತ್ತು ಅದನ್ನು ಖಂಡಿಸಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗವು ಪೋಸ್ಟ್‌ ನಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ : ಬ್ರಹ್ಮೋಸ್ ಕ್ಷಿಪಣಿ ಬಳಸಿ ಪಾಕಿಸ್ತಾನದ 11 ವಾಯುನೆಲೆಗಳನ್ನು ನಾಶಮಾಡಿದ ಭಾರತ; ಪಟ್ಟಿ ಇಲ್ಲಿದೆ...

ರಾಷ್ಟ್ರೀಯ ಮಹಿಳಾ ಆಯೋಗ (NCW)ವು ತಮಿಳು ನಟ ಮನ್ಸೂರ್ ಅಲಿ ಖಾನ್ ಅವರು ಮಹಿಳಾ ನಟರ ಬಗ್ಗೆ, ವಿಶೇಷವಾಗಿ ತ್ರಿಷಾ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ. ಮನ್ಸೂರ್ ಅಲಿ ಖಾನ್ ಸಂದರ್ಶನವೊಂದರಲ್ಲಿ ‘ನಾನು ತ್ರಿಷಾ ಜೊತೆ ನಟಿಸುತ್ತಿದ್ದೇನೆ ಎಂದು ಹೇಳಿದಾಗ, ಚಿತ್ರದಲ್ಲಿ ರೇಪ್ ಸೀನ್ ಇರುತ್ತದೆ ಎಂದು ನಾನು ಭಾವಿಸಿದೆ. ನನ್ನ ಹಿಂದಿನ ಚಿತ್ರಗಳಲ್ಲಿ ಇತರ ನಟಿಯರೊಂದಿಗೆ ಮಾಡಿದಂತೆ ನಾನು ತ್ರಿಷಾಳನ್ನು ಬೆಡ್ ರೂಂಗೆ ಕರೆದುಕೊಂಡು ಹೋಗಿ ರೇಪ್ ಮಾಡುವ ಸೀನ್ ಇರುತ್ತದೆ ಎಂದು ನಾನು ಭಾವಿಸಿದ್ದೆ. ನಾನು ಅನೇಕ ಚಿತ್ರಗಳಲ್ಲಿ ಅತ್ಯಾಚಾರದ ದೃಶ್ಯಗಳನ್ನು ಮಾಡಿದ್ದೇನೆ. ಇದು ನನಗೆ ಹೊಸದಲ್ಲ. ಆದರೆ ಲಿಯೋ ಸಿನಿಮಾನವರು ತ್ರಿಷಾರ ಮುಖವನ್ನು ಸಹ ನನಗೆ ತೋರಿಸಲಿಲ್ಲ ಎಂದು ಹೇಳಿದ್ದರು. ಇದಕ್ಕೆ ತ್ರಿಷಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ರಾಷ್ಟ್ರೀಯ ಮಹಿಳಾ ಆಯೋಗವು ಈ ವಿಷಯವನ್ನು ಸ್ವಯಂಪ್ರೇರಿತವಾಗಿ ತೆಗೆದುಕೊಂಡಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ದೂರವಾಣಿ ಕರೆ ; ಕದನ ವಿರಾಮಕ್ಕೆ ಭಾರತ-ಪಾಕಿಸ್ತಾನ ಒಪ್ಪಿಗೆ ; ಮಿಲಿಟರಿ ಕಾರ್ಯಾಚರಣೆಗಳು ಸ್ಥಗಿತ | ವಿದೇಶಾಂಗ ಸಚಿವಾಲಯ

ಈ ಹೇಳಿಕೆಗೆ ತ್ರಿಶಾ ಪ್ರತಿಕ್ರಿಯಿಸಿದ್ದು, ಅವರು, ಮನ್ಸೂರ್ ಅಲಿ ಖಾನ್ ನನ್ನ ಬಗ್ಗೆ ಅಸಹ್ಯವಾಗಿ ಮಾತನಾಡಿರುವ ವೀಡಿಯೊ ಇತ್ತೀಚೆಗೆ ನನ್ನ ಗಮನಕ್ಕೆ ಬಂದಿದೆ. ಆ ನಟನ ಮಾತುಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಗೌರವ, ಸ್ತ್ರೀದ್ವೇಷ, ಕೆಟ್ಟ ಅಭಿರುಚಿ ಹಾಗೂ ಲೈಂಗಿಕ ಲೋಭವನ್ನು ಹೊಂದಿದೆ. ನನ್ನೊಂದಿಗೆ ನಟಿಸಲು ಅವರು ಬಯಸಬಹುದು ಆದರೆ ನಾನು ಅವರಂತಹ ಕೆಟ್ಟ ವ್ಯಕ್ತಿಯೊಂದಿಗೆ ಎಂದಿಗೂ ಪರದೆಯನ್ನು ಹಂಚಿಕೊಳ್ಳುವುದಿಲ್ಲ. ನನ್ನ ಉಳಿದ ಚಲನಚಿತ್ರ ವೃತ್ತಿಜೀವನದಲ್ಲಿ ನಾನು ಅವರೊಟ್ಟಿಗೆ ಎಂದಿಗೂ ಪರದೆ ಹಂಚಿಕೊಳ್ಳದಂತೆ ಎಚ್ಚರವಹಿಸುತ್ತೇನೆ. ಅವರಂತಹವರು ಮನುಕುಲಕ್ಕೆ ಕೆಟ್ಟ ಹೆಸರು ತರುತ್ತಾರೆ ಎಂದು ಪೋಸ್ಟ್‌ ನಲ್ಲಿ ಬರೆದಿದ್ದಾರೆ.
ಮನ್ಸೂರ್ ಅಲಿ ಖಾನ್ ಹೇಳಿಕೆಯನ್ನು ಗಾಯಕಿ ಚಿನ್ಮಯಿ, ನಟಿ ಖುಷ್ಬು ಸುಂದರ, ‘ಲಿಯೋ’ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ, ಕಾರ್ತಿಕ್ ಸುಬ್ಬರಾಜ ಸೇರಿದಂತೆ ಹಲವರು ಖಂಡಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement