ಡಿ.ಕೆ. ಶಿವಕುಮಾರ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣ: ನವೆಂಬರ್‌ 29ಕ್ಕೆ ವಿಚಾರಣೆ ನಿಗದಿ

ಬೆಂಗಳೂರು : ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಆದೇಶ ರದ್ದು ಕೋರಿರುವ ಮೇಲ್ಮನವಿ ವಿಚಾರಣೆಯನ್ನು ನವೆಂಬರ್‌ 29ಕ್ಕೆ ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಿಗದಿಪಡಿಸಿದೆ.
ಸಿಬಿಐ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌.ವಿ .ರಾಜು ಅವರು ಮೇಲ್ಮನವಿದಾರರು ಬುಧವಾರ (ನವೆಂಬರ್‌ ೨೨) ವಾದ ಮಂಡನೆ ಮಾಡಲಿ. ಸಿಬಿಐ ಪರವಾಗಿ ನವೆಂಬರ್‌ 27ಕ್ಕೆ ವಾದ ಮಾಡಲಾಗುತ್ತದೆ. ಸುಪ್ರೀಂ ಕೋರ್ಟ್‌ನಲ್ಲಿ ತಮಗೆ ಬೇರೆ ಪ್ರಕರಣದ ವಿಚಾರಣೆಗೆ ಇರುವುದು ಮುಂದೂಡಿಕೆ ಕೋರಿಕೆಯನ್ನು ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕೋರಿದರು.

ಆಗ ಸಿಜೆ ಅವರು ನವೆಂಬರ್‌ 27ಕ್ಕೆ ವಿಚಾರಣೆ ಇರುವುದಿಲ್ಲ ಎಂದರು. “ಮೇಲ್ಮನವಿದಾರರು ಮಧ್ಯಾಹ್ನ ವಾದ ಮಂಡಿಸಲಿ, ಅವರ ವಾದದ ಬಳಿಕ ನಿಮಗೆ ದಿನಾಂಕ ನೀಡಲಾಗುವುದು” ಎಂದು ಎಎಸ್‌ಜಿಗೆ ತಿಳಿಸಿದರು.
ಆದರೆ, ಬೇರೊಂದು ಪ್ರಕರಣದ ವಿಚಾರಣೆಗೆ ಹಾಜರಾದ ಹಿರಿಯ ವಕೀಲ ಉದಯ ಹೊಳ್ಳ ಅವರು “ಡಿ ಕೆ ಶಿವಕುಮಾರ ಅವರ ಪರವಾಗಿ ವಾದಿಸಲು ನಮಗೆ ಅರ್ಧ ತಾಸು ಸಾಕು. ವಿಚಾರಣೆ ಮುಂದೂಡಬಹುದು” ಎಂದು ತಿಳಿಸಿದರು.
ಆಗ ಪೀಠವು “ಉಭಯ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿ, ವಿಚಾರಣೆ ಮುಂದೂಡಿಕೆ ಕೋರಿದರೆ ಪರಿಗಣಿಸಲಾಗುವುದು” ಎಂದು ತಿಳಿಸಿತು. ಈ ಹಿನ್ನೆಲೆಯಲ್ಲಿ ಪಕ್ಷಕಾರರು ಜಂಟಿ ಮೆಮೊ ಸಲ್ಲಿಸಿದ್ದು, ಅದನ್ನು ಪರಿಗಣಿಸಿ ನ್ಯಾಯಾಲಯವು ವಿಚಾರಣೆಯನ್ನು ನವೆಂಬರ್‌ 29ಕ್ಕೆ ಮುಂದೂಡಿತು.

ಪ್ರಮುಖ ಸುದ್ದಿ :-   ಐಟಿ ಅಧಿಕಾರಿಗಳ ದಾಳಿ, ಕಲಬುರಗಿ ರೈಲ್ವೆ ನಿಲ್ದಾಣದ ಬಳಿ ಕಾರಿನಲ್ಲಿದ್ದ 2 ಕೋಟಿ ರೂ. ವಶಕ್ಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement