ಮಂಡ್ಯ: ಮೇಲುಕೋಟೆಯ ತೊಟ್ಟಲುಮಡು ಜಾತ್ರೆ ವೇಳೆ ಹೆಜ್ಜೇನು ದಾಳಿ ನಡೆಸಿದ್ದು ವೇಳೆ 35ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಹಾಗೂ ಸುಮಾರು 17 ಮಂದಿ ಅಸ್ವಸ್ಥರಾಗಿದ್ದಾರೆ.
ಜಾತ್ರೆಯಲ್ಲಿ ಅಷ್ಟತೀರ್ಥೋತ್ಸವದ ವೇಳೆ ಸಾವಿರಾರು ಭಕ್ತರು ಆಗಮಿಸಿದ್ದರು. ಈ ವೇಳೆ ಜೇನುಗೂಡಿದ್ದ ಮರದ ಸಮೀಪವೇ ಭಕ್ತರು ಕರ್ಪೂರ ಹಚ್ಚಿದ್ದಾರೆ. ಕರ್ಪೂರದ ಹೊಗೆಯಿಂದ ಹೆಜ್ಜೇನು ಗೊಂದಲಕ್ಕೆ ಒಳಗಾಗಿ ದಾಳಿ ನಡೆಸಿವೆ. ಇದರಿಂದ ಭಕ್ತರು ದಿಕ್ಕಾಪಾಲಾಗಿ ಓಡಿದ್ದಾರೆ.
ಜೇನು ದಾಳಿಗೆ ಒಳಗಾದವರನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡ 17 ಮಂದಿಯನ್ನು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ