ಎಸ್‌ಬಿಐನಿಂದ 5280 ಸಿಬಿಒ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ : ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು

ಕೆಲ ದಿನಗಳ ಹಿಂದೆ 8283 ಜೂನಿಯರ್ ಅಸೋಸಿಯೇಟ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದ ಭಾರತೀಯ ಸ್ಟೇಟ್‌ ಬ್ಯಾಂಕ್ ಈಗ 5280 ಸರ್ಕಲ್ ಬೇಸ್ಡ್‌ ಆಫೀಸರ್‌ ಹುದ್ದೆಗಳಿಗೆ ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಡಿಸೆಂಬರ್ 12 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ನೇಮಕಾತಿ ಬ್ಯಾಂಕ್ : ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ
ಹುದ್ದೆ ಹೆಸರು : ಸರ್ಕಲ್ ಬೇಸ್ಡ್‌ ಆಫೀಸರ್
ಹುದ್ದೆಗಳ ಸಂಖ್ಯೆ : 5280
ಕರ್ನಾಟಕದಲ್ಲಿ ಹುದ್ದೆಗಳ ಸಂಖ್ಯೆ: 380
ವಿದ್ಯಾರ್ಹತೆ:ಕೇಂದ್ರ ಸರ್ಕಾರ ಅಥವಾ ರಾಜ್ಯ ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ವಿಶ್ವ ವಿದ್ಯಾಲಯ / ಶಿಕ್ಷಣ ಸಂಸ್ಥೆಗಳಿಂದ ಪದವಿ ಉತ್ತೀರ್ಣರಾಗಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸಲು ಬಯಸುವವರಿಗೆ ಕನಿಷ್ಠ 21 ವರ್ಷ ಆಗಿರಬೇಕು. ಗರಿಷ್ಠ 30 ವರ್ಷ ವಯಸ್ಸು ಮೀರಿರಬಾರದು.
ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿದ್ದು, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ವಯಸ್ಸಿನ ಸಡಿಲಿಕೆ ಇದೆ.
ಆನ್‌ಲೈನ್‌ ಪರೀಕ್ಷೆಗೆ ಅಡ್ಮಿಟ್‌ ಕಾರ್ಡ್ ಡೌನ್‌ಲೋಡ್‌ ಆರಂಭಿಕ ದಿನಾಂಕ: ಜನವರಿ 2024
ಆನ್‌ಲೈನ್‌ ಪರೀಕ್ಷೆ ದಿನಾಂಕ (ಸಂಭಾವ್ಯ) : ಜನವರಿ 2024

ಪ್ರಮುಖ ಸುದ್ದಿ :-   127 ವರ್ಷಗಳಷ್ಟು ಹಳೆಯ ಗೋದ್ರೇಜ್ ಗ್ರುಪ್‌ ಇಬ್ಭಾಗ

ಮಾಸಿಕ ವೇತನ : ಸರ್ಕಲ್ ಬೇಸ್ಡ್‌ ಆಫೀಸರ್ ಹುದ್ದೆಗಳಿಗೆ 36000 ರೂ. ವರೆಗೆ ಮಾಸಿಕ ವೇತನ.
ಹೆಚ್ಚಿನ ಮಾಹಿತಿಗಾಗಿ ಅಧಿಸೂಚನೆ ನೋಡಲು  SBI CBO Job Notification -2023 ಇಲ್ಲಿ   ಕ್ಲಿಕ್ ಮಾಡಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿ https://bank.sbi/web/careers/current-openings  ಕ್ಲಿಕ್‌ ಮಾಡಿ
ಅರ್ಜಿ ಶುಲ್ಕ: ಸಾಮಾನ್ಯ / ಆರ್ಥಿಕವಾಗಿ ಹಿಂದುಳಿದವರು / ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 750 ರೂ.ಗಳು, ಎಸ್‌ಟಿ / ಎಸ್‌ಸಿ / ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್‌ಲೈನ್‌ ಮೂಲಕ ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿಸಬಹುದು.
ಮಹತ್ವದ ದಿನಾಂಕ
ಅರ್ಜಿ ಸಲ್ಲಿಸಲು ಆರಂಭ : 22-11-2023
ಅರ್ಜಿ ಸಲ್ಲಿಸಲು ಕೊನೆ ದಿನ: 12-12-2023
ಆಯ್ಕೆ ವಿಧಾನ : ಪ್ರಿಲಿಮ್ಸ್‌ ಪರೀಕ್ಷೆ, ಮೇನ್ಸ್‌ ಪರೀಕ್ಷೆ, ಸಂದರ್ಶನ ಇರುತ್ತದೆ.
ವೆಬ್‌ಸೈಟ್‌ ವಿಳಾಸ-https://www.sbi.co.in/

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement