ಬೆಂಗಳೂರು : ಮೊದಲ ಪತ್ನಿ ಜೀವಂತವಾಗಿರುವಾಗಲೇ ಎರಡನೇ ವಿವಾಹವಾಗಿದ್ದ ಸರ್ಕಾರಿ ಉದ್ಯೋಗಿಯಾಗಿದ್ದ ಪತಿಯ ಮರಣದ ಹಿನ್ನೆಲೆಯಲ್ಲಿ ಪಿಂಚಣಿ ಕೋರಿ ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಕೌಟುಂಬಿಕ ಪಿಂಚಣಿಯನ್ನು ಪತ್ನಿಗೆ ಪಾವತಿಸಲಾಗುತ್ತದೆಯೇ ವಿನಃ ಕಾನೂನಿನ ದೃಷ್ಟಿಯಲ್ಲಿ ಸಿಂಧುತ್ವ ಹೊಂದಿರದ ಪತ್ನಿಗೆ ಅಲ್ಲ ಎಂದು ಹೈಕೋರ್ಟ್ ಅಲ್ಲ. ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆಯಿಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕು ನೀಡಲಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಎರಡನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ಹೈಕೋರ್ಟ್ “ಹಿಂದೂ ವಿವಾಹ ಕಾಯಿದೆ ಸೆಕ್ಷನ್ 17ರ ಅಡಿ ದ್ವಿಪತ್ನಿತ್ವ ಅಪರಾಧವಾಗಿದೆ ಮತ್ತು ಕರ್ನಾಟಕ ಸಿವಿಲ್ ಸೇವೆಗಳ ನಿಯಮ 294ರಲ್ಲಿ ಸರ್ಕಾರಿ ಅಧಿಕಾರಿ ನಿವೃತ್ತಿ ಅಥವಾ ವಿಧಿವಶರಾದರೆ ಅವರ ಕುಟುಂಬದವರಿಗೆ ಪಿಂಚಿಣಿ ನೀಡಬೇಕು ಎಂದು ಹೇಳುತ್ತದೆ. ಮೊದಲನೇ ವಿವಾಹ ನಡೆದಿರುವಾಗ ಎರಡನೇ ಮದುವೆಯಿಂದ ಬರುವ ಸಂಬಂಧವನ್ನು ಪರಿಗಣಿಸಿರುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ” ಎಂದು ಹೇಳಿದೆ.
ಹಿಂದೂ ವಿವಾಹ ಕಾಯಿದೆ 1955 ಸೆಕ್ಷನ್ 16ರ ಅಡಿ ಎರಡನೇ ವಿವಾಹದಿಂದ ಜನಿಸಿದ ಮಕ್ಕಳ ನ್ಯಾಯಸಮ್ಮತತೆಗೆ ಸೀಮಿತ ಸ್ಥಾನಮಾನವಿದೆ.
ಪಿಂಚಣಿ ನೀಡಲು ಮೇಲ್ಮನವಿದಾರೆಯು ಕಾನೂನಾತ್ಮಕವಾಗಿ ಮದುವೆಯಾಗಿಲ್ಲ. ಹಿಂದೂ ಧರ್ಮದಲ್ಲಿ ಏಕಪತ್ನಿತ್ವ ಅನುಕರಣೀಯ ಮಾತ್ರವಲ್ಲ. ಕಾನೂನಿನ ಪ್ರಕಾರ ಸಿಂಧುವಾಗುತ್ತದೆ. ಮೊದಲ ಪತ್ನಿ ಜೀವಂತವಾಗಿದ್ದಾಗ ಎರಡನೇ ವಿವಾಹವಾಗುವುದನ್ನು ಕಾನೂನಿನ ಅಡಿ ಪರಿಗಣಿಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ