ಗುಂಡು ಹಾರಿಸಿ ಒಬ್ಬರನ್ನು ಸಾಯಿಸಿ, ಮೂವರನ್ನು ಗಾಯಗೊಳಿಸಿದ ಆರೋಪದ ಮೇಲೆ ಜನಪ್ರಿಯ ಕಿರುತೆರೆ ನಟನ ಬಂಧನ

ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ನೀಲಗಿರಿ ಮರಗಳನ್ನು ಕಡಿಯುವ ವಿಚಾರದಲ್ಲಿ ನಡೆದ ವಾದ ವಿವಾದದಲ್ಲಿ ಅಕ್ಕಪಕ್ಕದವರ ಮೇಲೆ ಗುಂಡು ಹಾರಿಸಿದ ನಂತರ ಒಬ್ಬರು ಸಾವಿಗೀಡಾಗಿ ಇತರ ಮೂವರು ಗಾಯಗೊಂಡ ನಂತರ ಜನಪ್ರಿಯ ಕಿರುತೆರೆ ನಟನನ್ನು ಬಂಧಿಸಲಾಗಿದೆ.
ವರದಿಗಳ ಪ್ರಕಾರ, ‘ಯೇ ಪ್ಯಾರ್ ನಾ ಹೋಗಾ ಕಾಮ್’ ಮತ್ತು ‘ಮಧುಬಾಲಾ’ ದಂತಹ ಜನಪ್ರಿಯ ಟಿವಿ ಶೋಗಳಲ್ಲಿ ನಟಿಸಿರುವ ಭೂಪಿಂದರ್ ಸಿಂಗ್ ಎಂಬ ನಟ ಬಿಜ್ನೋರ್‌ನಲ್ಲಿರುವ ತಮ್ಮ ಜಮೀನಿನ ಬಳಿ ಬೇಲಿ ಹಾಕುತ್ತಿದ್ದರು. ಅವರ ಜಮೀನಿನ ಪಕ್ಕದಲ್ಲಿ ಗುರುದೀಪ್ ಸಿಂಗ್ ಎಂಬವರಿಗೆ ಸೇರಿದ ಕೃಷಿ ಭೂಮಿ ಇದೆ. ಬೇಲಿ ಹಾಕಲು ಕೆಲವು ನೀಲಗಿರಿ ಮರಗಳನ್ನು ಕಡಿಯಲು ಭೂಪಿಂದರ್ ನಿರ್ಧರಿಸಿದ ನಂತರ ವಾಗ್ವಾದ ಪ್ರಾರಂಭವಾಯಿತು.

ವಾದವು ಜಗಳಕ್ಕೆ ತಿರುಗಿತು ಮತ್ತು ಭೂಪಿಂದರ್ ಮತ್ತು ಅವರ ಮೂವರು ಸಹಚರರು ಗುರುದೀಪ್ ಸಿಂಗ್ ಅವರ ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದರು. ಘರ್ಷಣೆಯ ಸಂದರ್ಭದಲ್ಲಿ, ಭೂಪಿಂದರ್ ತನ್ನ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗುಂಡು ಹಾರಿಸಿದ್ದಾನೆ. ಗುಂಡಿನ ದಾಳಿಯಲ್ಲಿ ಗುರುದೀಪ್ ಸಿಂಗ್ ಅವರ 22 ವರ್ಷದ ಮಗ ಗೋವಿಂದ ಮೃತಪಟ್ಟಿದ್ದಾರೆ ಮತ್ತು ಅವರ ಮಗ ಅಮ್ರಿಕ್ ಮತ್ತು ಪತ್ನಿ ಬೀರೋ ಬಾಯಿ ಗಾಯಗೊಂಡಿದ್ದಾರೆ. ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಭೂಪಿಂದರ ಅವರನ್ನು ಕೊಲೆ, ಕೊಲೆ ಯತ್ನ ಮತ್ತು ಸ್ವಯಂಪ್ರೇರಣೆಯಿಂದ ನೋವುಂಟು ಮಾಡಿದ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿಯೂ ಆರೋಪ ಹೊರಿಸಲಾಗಿದೆ. ಆತನ ಮೂವರು ಸಹಚರರಾದ ಜ್ಞಾನ್ ಸಿಂಗ್, ಜೀವನ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಅವರನ್ನು ಕೂಡ ಬಂಧಿಸಲಾಗಿದೆ.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement